ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ವ್ಹೀಲ್ ಹಾಗೂ ಟಯರ್‌ಗಳು ವಾಹನ ಕಾರ್ಯಾಚರಣೆಗೆ ಅಗತ್ಯವಿರುವ ಪ್ರಮುಖ ಭಾಗಗಳಾಗಿವೆ. ನೀರಿಲ್ಲದೆ ಈ ಜಗತ್ತು ಹೇಗೆ ಇರುವುದಿಲ್ಲ, ಅಂತೆಯೇ ಟಯರ್‌ಗಳು ಹಾಗೂ ವ್ಹೀಲ್ ಗಳಿಲ್ಲದೇ ವಾಹನಗಳು ಇರುವುದಿಲ್ಲ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಇವುಗಳನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡುವುದರಿಂದ ವಾಹನಗಳ ಗ್ರಿಪ್, ಮೈಲೇಜ್ ಸುಧಾರಿಸುತ್ತದೆ. ಟಯರ್‌ಗಳನ್ನು ಸರಿಯಾದ ರೀತಿಯಲ್ಲಿ ಮೆಂಟೆನ್ ಮಾಡಿದರೆ ಅವುಗಳ ಬಾಳಿಕೆಯನ್ನು ಹೆಚ್ಚಿಸಬಹುದು. ಈ ಕಾರಣಕ್ಕೆ ಟಯರ್‌ಗಳ ವಿಷಯದಲ್ಲಿ ಹೆಚ್ಚಿನ ಗಮನ ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಉತ್ಪಾದನಾ ಕಂಪನಿಗಳು ವಾಹನಗಳಲ್ಲಿ ಭವಿಷ್ಯದ ಬಳಕೆಗಾಗಿ ಹೆಚ್ಚಿನ ಟೆಕ್ನಾಲಜಿಗಳನ್ನು ಹೊಂದಿರುವ ಟಯರ್‌ಗಳನ್ನು ತಯಾರಿಸಲಿವೆ ಎಂದು ವರದಿಯಾಗಿದೆ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಈ ಟಯರ್‌ಗಳನ್ನು ಆಧುನಿಕ ವಾಹನಗಳಿಗೆ ತಕ್ಕಂತೆ ಹೈಟೆಕ್ ಹಾಗೂ ಸುರಕ್ಷತಾ ಟಯರ್‌ಗಳಾಗಿ ವಿನ್ಯಾಸಗೊಳಿಸಲಾಗಿದೆ. ನ್ಯೂಸ್ 18 ಇಂಗ್ಲಿಷ್ ವೆಬ್ ಸೈಟ್ ಪ್ರಕಾರ ಮುಂಬರುವ ದಿನಗಳಲ್ಲಿ ಪರಿಸರ ಸ್ನೇಹಿಯಾದ ಹಾಗೂ ಆಧುನಿಕ ವಿನ್ಯಾಸದ ಟಯರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಹೊಸ ಅತ್ಯಾಧುನಿಕ ಟಯರ್‌ಗಳ ಉತ್ಪಾದನೆಗೆ ರಿಸೈಕಲ್ ಮಾಡಲಾದ ವಸ್ತುಗಳನ್ನು ಬಳಸಬೇಕಾಗುತ್ತದೆ. ಭವಿಷ್ಯಕ್ಕಾಗಿ ದೊಡ್ಡ ಗಾತ್ರದ ಟಯರ್‌ಗಳನ್ನು ವಿನ್ಯಾಸಗೊಳಿಸಲಾಗುವುದು. ಜೊತೆಗೆ ಸುರಕ್ಷತೆಗಾಗಿ ಸೆನ್ಸಾರ್‌ಗಳಂತಹ ಹೆಚ್ಚುವರಿ ವಿಶೇಷ ತಂತ್ರಜ್ಞಾನಗಳನ್ನು ಟಯರ್‌ಗಳಲ್ಲಿ ಅಳವಡಿಸಲಾಗುತ್ತದೆ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

2019ರಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸಿಟ್ರಿಯೊನ್, 19_19 ಕಾನ್ಸೆಪ್ಟ್ ಅನ್ನು ಬಿಡುಗಡೆಗೊಳಿಸಿತ್ತು. ಈ ಕಾನ್ಸೆಪ್ಟ್ ಆಟೋ ಉತ್ಸಾಹಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಸಿಟ್ರಿಯೊನ್ ಪ್ರಸಿದ್ಧ ಟಯರ್ ತಯಾರಕ ಕಂಪನಿಯಾದ ಗುಡ್‌ಇಯರ್ ಸಹಯೋಗದೊಂದಿಗೆ ಈ ಕಾನ್ಸೆಪ್ಟ್ ಅನ್ನು ವಿನ್ಯಾಸಗೊಳಿಸಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಈ ಟಯರ್ ಹೆಚ್ಚಿನ ಉದ್ದ, ಹೆಚ್ಚುವರಿ ಗ್ರಿಪ್ ನ ಆಕ್ಸಲ್, ಕಡಿಮೆ ಸರ್ಫೇಸ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ಹೊಂದಿದೆ. ಈ ಹೊಸ ಫೀಚರ್ ಟಯರ್ ಅನ್ನು ತನ್ನ ಹೊಸ ಎಲೆಕ್ಟ್ರಿಕ್ ವಾಹನದಲ್ಲಿ ಅಳವಡಿಸಲು ಸಿಟ್ರಿಯೊನ್ ಬಯಸಿದೆ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಭವಿಷ್ಯದಲ್ಲಿ ವ್ಹೀಲ್ ಗಳ ವಿನ್ಯಾಸ ಹಾಗೂ ಅವುಗಳ ಅಲೈನ್ ಮೆಂಟ್ ಗೆ ಹೆಚ್ಚಿನ ಗಮನ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮೂಲದ ಸ್ಟಾರ್ಟ್ ಅಪ್ ಕಂಪನಿಯಾದ ಟೊಫ್ಟೆಕ್ ಅತ್ಯುತ್ತಮ ಜೋಡಣೆಯ ಫೀಚರ್ ರಚಿಸಲು ಎಡಬ್ಲ್ಯುಎಎಸ್ ಎಂಬ ಸಕ್ರಿಯ ವ್ಹೀಲ್ ಫಿಕ್ಸಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಈ ಸಿಸ್ಟಂ ರಸ್ತೆಯೊಂದಿಗೆ ಟಯರ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ಇದರಿಂದಾಗಿ ವಾಹನದ ಮೇಲೆ ಹೆಚ್ಚಿನ ಗ್ರಿಪ್ ಹಾಗೂ ಹೆಚ್ಚು ಮೈಲೇಜ್ ಪಡೆಯಲು ಸಾಧ್ಯವಾಗಲಿದೆ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಈ ಹೊಸ ಸಿಸ್ಟಂ ರೋಲಿಂಗ್ ರೆಸಿಸ್ಟೆನ್ಸ್ ಅನ್ನು 10%ನಷ್ಟು ಕಡಿಮೆಗೊಳಿಸುತ್ತದೆ ಎಂದು ಟೋಪ್ಟೆಕ್ ಹೇಳಿದೆ. ಇದರಿಂದಾಗಿ ಲೋ ಟೆಂಪರೆಚರ್ ಹಾಗೂ ರಾಂಡಮ್ ಮೋಲ್ಡ್ ಗಳನ್ನು ತೆಗೆದುಹಾಕಬಹುದು. ಈ ಕಾರಣಕ್ಕೆ ಕೆಲವು ಕಂಪನಿಗಳು ತಮ್ಮ ಹೊಸ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವಾಹನಗಳಲ್ಲಿ ಹೊಸ ಎಡಬ್ಲ್ಯುಎಎಸ್ ತಂತ್ರಜ್ಞಾನವನ್ನು ಬಳಸಲು ಉದ್ದೇಶಿಸಿವೆ ಎಂದು ಟೋಪ್ಟೆಕ್ ಹೇಳಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಸ್ಮಾರ್ಟ್ ಟಯರ್

ಗುಡ್‌ಇಯರ್ ಅತ್ಯಂತ ಜನಪ್ರಿಯ ಟಯರ್ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿದೆ. ಗುಡ್‌ಇಯರ್ ಕಂಪನಿಯು 2018ರಲ್ಲಿ ಪಾಚಿ ತುಂಬಿದ ಆಕ್ಸಿಜನ್ ಎಂಬ ಹೆಸರಿನ ಕಾನ್ಸೆಪ್ಟ್ ಟಯರ್ ಅನ್ನು ಪರಿಚಯಿಸಿತ್ತು.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಈ ಟಯರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಆಕ್ಸಿಜನ್ ಬಿಡುಗಡೆಗೊಳಿಸುತ್ತದೆ. ಇದರ ಜೊತೆಗೆ ಈ ಟಯರ್ ನಿರ್ದಿಷ್ಟ ಪ್ರಮಾಣದ ವಿದ್ಯುತ್ ಹೊರಸೂಸುತ್ತದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಜನರು ಹೊಸ ಆಕ್ಸಿಜನ್ ಟಯರ್ ನ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಟಯರ್ ಲಿ-ಪೈ ಎಂಬ ಫೀಚರ್ ಹೊಂದಿರಲಿದೆ. ಈ ಫೀಚರ್ ಪಾದಚಾರಿಗಳಿಗೆ ಬೆಳಕಿನ ಬಲ್ಬ್‌ನೊಂದಿಗೆ ಸಂವಹನ ನಡೆಸಲು ನೆರವಾಗುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಗುಡ್‌ಇಯರ್ ವಿವಿಧ ರೀತಿಯ ಟಯರ್‌ಗಳನ್ನು ವಿನ್ಯಾಸಗೊಳಿಸುತ್ತಿದೆ. ಇತ್ತೀಚೆಗೆ ಗುಡ್‌ಇಯರ್ ಕಂಪನಿಯು ಹಲವಾರು ಸೆನ್ಸಾರ್ ಗಳನ್ನು ಹೊಂದಿರುವ ಮತ್ತೊಂದು ಟಯರ್ ಅನ್ನು ಪರೀಕ್ಷಿಸಿತ್ತು. ಈ ಟಯರ್ ನಲ್ಲಿರುವ ಸೆನ್ಸಾರ್ ಗಳು ರಸ್ತೆಗಳನ್ನು ಅನ್ವೇಷಿಸಿ, ಸಲಹೆ ನೀಡುತ್ತವೆ.

ವಿಭಿನ್ನ, ವಿಶಿಷ್ಟ ಟೆಕ್ನಾಲಜಿಗಳನ್ನು ಹೊಂದಿರಲಿವೆ ಭವಿಷ್ಯದ ಟಯರ್‌ಗಳು

ಭವಿಷ್ಯದಲ್ಲಿ ಬಿಡುಗಡೆಯಾಗುವ ವಾಹನಗಳ ಟಯರ್‌ಗಳು ಈ ರೀತಿಯ ಹಲವಾರು ವಿಶಿಷ್ಟ ಫೀಚರ್ ಗಳನ್ನು ಹೊಂದಿರಲಿವೆ. ಈ ಟಯರ್ ಗಳು ಎಂಟ್ರಿ ಲೆವೆಲ್ ವಾಹನಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಜೊತೆಗೆ ಭಾರತದಲ್ಲಿ ಬಿಡುಗಡೆಯಾಗುವುದು ಸಹ ಅನುಮಾನ. ಶೀಘ್ರದಲ್ಲೇ ಈ ಟಯರ್‌ಗಳು ಅತ್ಯಂತ ದುಬಾರಿ ಬೆಲೆಯ ಹೈ ಎಂಡ್ ಕಾರುಗಳಲ್ಲಿ ಕಂಡು ಬರಲಿವೆ.

Most Read Articles

Kannada
English summary
Future car wheels will have more features. Read in Kannada.
Story first published: Tuesday, September 15, 2020, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X