ಬಿಡುಗಡೆಯಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಹ್ಯುಂಡೈನ ಪ್ರೀಮಿಯಂ ಕಾರು ಸೇಗ್ ಮೆಂಟಿನ ಜೆನೆಸಿಸ್, ಹೊಸ ಜಿ 80 ಸೆಡಾನ್ ಕಾರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮುನ್ನ ಆ ಕಾರಿನ ಬಗೆಗಿನ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಹ್ಯುಂಡೈನ ಜೆನೆಸಿಸ್, ಹೊಸ ಜಿವಿ 80 ಸೆಡಾನ್ ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಅನೇಕ ಸ್ಟೈಲಿಂಗ್ ಕಾಂಪೋನೆಂಟ್ ಗಳನ್ನು ಅಳವಡಿಸಿದೆ. ಜೆನೆಸಿಸ್ ಕಾರುಗಳು ಒಂದೇ ರೀತಿಯ ಸ್ಪ್ಲಿಟ್ ಲೈಟ್ ಕ್ಲಸ್ಟರ್ ಅನ್ನು ಹೊಂದಿವೆ. ಹೆಡ್‌ಲೈಟ್‌ಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಜೋಡಿಸಲಾಗಿದೆ. ಈ ಹೆಡ್‌ಲೈಟ್‌ಗಳು ಇಂಡಿಕೇಟರ್ ಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಟೇಲ್‌ಲೈಟ್‌ಗಳನ್ನು ಸಹ ಇದೇ ರೀತಿ ನೀಡಲಾಗುತ್ತದೆ. ಆದರೆ ಇಂಡಿಕೇಟರ್ ಗಳು ಸ್ವಲ್ಪ ದಪ್ಪವಾದ ಸ್ಟ್ರಿಪ್ ಗಳನ್ನು ಹೊಂದಿವೆ. ಫೆಂಡರ್‌ಗಳಲ್ಲಿ ಅಳವಡಿಸಲಾಗಿರುವ ಹಿಂಭಾಗದ ಇಂಡಿಕೇಟರ್ ಗಳನ್ನು ಕಾರಿನ ಹೊರಭಾಗದ ಕಲರ್ ಪ್ಯಾನೆಲ್ ನಿಂದ ಬೇರ್ಪಡಿಸಲಾಗಿದೆ. ಇವುಗಳು ಪ್ಯಾರಾಲೆಲ್ ಆಗಿರುವ ಎಲ್‌ಇಡಿ ಸ್ಟ್ರಿಪ್ ಗಳನ್ನು ಹೊಂದಿವೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಈ ಸೆಡಾನ್‌ನಲ್ಲಿರುವ ರೂಫ್ ಅನ್ನು ವಿಶೇಷವಾಗಿ ಹಿಂದಿನ ಡೋರ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೊರಭಾಗದಲ್ಲಿರುವ ಬೆಲ್ಟ್ ಲೈನ್ ಅನ್ನು ಕಾರಿನ ಚಲನೆಗೆ ತಕ್ಕಂತೆ ಪ್ಯಾರಾಲೆಲ್ ಆಗಿ ನೀಡಲಾಗಿದೆ. ವಿಂಡೋ ಫ್ರೇಮ್, ಲೋ ಡೋರ್ ಪ್ಯಾನೆಲ್, ಫೆಂಡರ್ ವೆಂಟ್ ಹಾಗೂ ಹಿಂಭಾಗದ ಬಂಪರ್‌ ಗಳನ್ನು ಹೊಂದಿರುವ ಕಾರು ಆಕರ್ಷಕವಾಗಿ ಕಾಣುತ್ತದೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಹೊಸ ಜಿ 80ಯ ಹಿಂಭಾಗದಲ್ಲಿರುವ ಇಂಟಿಗ್ರೇಟೆಡ್ ಸ್ಪಾಯ್ಲರ್ ಗ್ರಾಹಕರನ್ನು ಆಕರ್ಷಿಸುತ್ತದೆ. ಕಾರಿನ ಒಳಭಾಗದಲ್ಲಿ ಈ ಹೊಸ ಸೆಡಾನ್ ಹೆಚ್ಚಿನ ಜಿವಿ 80 ಎಸ್‌ಯುವಿ ಹೊಂದಿದ್ದ ಟೆಕ್ನಾಲಜಿಗಳನ್ನು ಹೊಂದಿದೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಡ್ಯುಯಲ್-ಸ್ಪೋಕ್ ಸ್ಟೀಯರಿಂಗ್ ವೀಲ್ ನ ಹಿಂದೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್‌ನಲ್ಲಿ 14.5-ಇಂಚಿನ ಇನ್ ಫೋಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಗೇರ್ ಸೆಲೆಕ್ಟರ್ ಸರ್ಕ್ಯೂಲರ್ ಶೇಪಿನಲ್ಲಿದೆ. ಜೆನೆಸಿಸ್ ಕ್ಯಾಬಿನ್ ಅನ್ನು ವುಡ್ ಹಾಗೂ ಲೆದರ್ ನಿಂದ ವಿನ್ಯಾಸಗೊಳಿಸಿದೆ.

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಜಿ 80 ಸೆಡಾನ್ ಕಾರು ಕ್ರೂಸ್ ಕಂಟ್ರೋಲ್, ಆಕ್ಟಿವ್ ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಆಟೋಮ್ಯಾಟಿಕ್ ಬ್ರೇಕ್, ರಿಮೋಟ್ ಪಾರ್ಕಿಂಗ್ ಹಾಗೂ ಜೆನೆಸಿಸ್ ಕಾರ್ಬ್ ಸಿಸ್ತಂಗಳನ್ನು ಹೊಂದಿದೆ. ಚಾಲಕರು ಕಾರಿನ ಇನ್ಫೋಟೇನ್‌ಮೆಂಟ್ ಸ್ಕ್ರೀನ್ ಮೂಲಕ ಈ ಕಾರ್ ಅನ್ನು ಕಂಟ್ರೋಲ್ ಮಾಡಬಹುದು.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಈ ಹೊಸ ಸೆಡಾನ್ ಕಾರ್ ಅನ್ನು ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. 2.5-ಲೀಟರಿನ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 304 ಬಿಹೆಚ್‌ಪಿ ಪವರ್ ಹಾಗೂ 422 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

3.5-ಲೀಟರಿನ ಟರ್ಬೋಚಾರ್ಜ್ಡ್ ವಿ 6 ಪೆಟ್ರೋಲ್ ಎಂಜಿನ್ 380 ಬಿಹೆಚ್‌ಪಿ ಪವರ್ ಹಾಗೂ 530 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 2.2-ಲೀಟರಿನ 4-ಸಿಲಿಂಡರ್ ಡೀಸೆಲ್ ಎಂಜಿನ್ 210 ಬಿಹೆಚ್‌ಪಿ ಪವರ್ ಹಾಗೂ 441 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲ್ಲಾ ಮೂರು ಎಂಜಿನ್‌ಗಳು ಹಿಂದಿನ ವ್ಹೀಲ್ ಗಳಿಗೆ ಅಥವಾ ಎಲ್ಲಾ ವ್ಹೀಲ್ ಗಳಿಗೆ ಪವರ್ ನೀಡುತ್ತವೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಬಹಿರಂಗವಾಯ್ತು ಜೆನೆಸಿಸ್ ಜಿ 80 ಸೆಡಾನ್ ಕಾರಿನ ಮಾಹಿತಿ

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ತನ್ನ ಪ್ರೀಮಿಯಂ ಜೆನೆಸಿಸ್ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ಹೊಸ ಜಿವಿ80 ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಈ ಎರಡೂ ಕಾರುಗಳನ್ನು ಜೆನೆಸಿಸ್ ಬ್ರಾಂಡ್‌ ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸುತ್ತಿದೆ.

More from DriveSpark

Article Published On: Tuesday, March 31, 2020, 19:12 [IST]
English summary
Genesis revealed the new luxury G80 sedan ahead of launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+