2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಭಾರತದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರವು ಸಹ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ.

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರ್ವಜನಿಕ ಸಾರಿಗೆಗೆ ಸೇರ್ಪಡೆಗೊಳಿಸಿಕೊಳ್ಳುತ್ತಿವೆ. ಫೇಮ್ ಯೋಜನೆಯ ಎರಡನೇ ಹಂತದ ಮುಖ್ಯ ಉದ್ದೇಶವು ಸಾರ್ವಜನಿಕ ಸಾರಿಗೆಗಳನ್ನು ಎಲೆಕ್ಟ್ರಿಕ್ ಕರಣಗೊಳಿಸುವುದಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು 2,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಟೆಂಡರ್ ಕರೆದಿದೆ.

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಸರ್ಕಾರವು ಎಲೆಕ್ಟ್ರಿಕ್ ಬಸ್ ತಯಾರಕ ಕಂಪನಿಗಳಿಂದ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುತ್ತಿದೆ. ಈ ಬಗ್ಗೆ ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರಾದ ಪ್ರಕಾಶ್ ಜಾವಡೇಕರ್ ರವರು ಈಗ ನಡೆಯುತ್ತಿರುವ ಸಿಯಾಮ್ ನ 60ನೇ ಸಮ್ಮೇಳನದಲ್ಲಿ ಮಾಹಿತಿ ನೀಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಈ ಬಗ್ಗೆ ಮಾತನಾಡಿರುವ ಅವರು ಭಾರತದ ಆಟೋ ಮೊಬೈಲ್ ಕಂಪನಿಗಳು ಗುಣಮಟ್ಟದ ಎಲೆಕ್ಟ್ರಿಕ್ ಬಸ್ಸುಗಳನ್ನು ಅಭಿವೃದ್ಧಿಪಡಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿವೆ. ಮೇಕ್ ಇನ್ ಇಂಡಿಯಾ ಹಾಗೂ ಸ್ವಾವಲಂಬಿ ಭಾರತದ ಅಂಗವಾಗಿ ಸರ್ಕಾರವು ದೇಶಿಯ ಕಂಪನಿಗಳನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದಾರೆ.

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಜೊತೆಗೆ ರಫ್ತುಗಳತ್ತ ಗಮನಹರಿಸಲು ಕಂಪನಿಗಳಿಗೆ ನೆರವಾಗುತ್ತಿದೆ. ಭಾರತದ ಆಟೋ ಮೊಬೈಲ್ ಉದ್ಯಮವು ಹೆಚ್ಚು ಹೆಚ್ಚು ವಾಹನಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಕಂಪನಿಗಳು ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಎಲೆಕ್ಟ್ರಿಕ್ ಬಸ್ಸುಗಳ ಬಳಕೆಯನ್ನು ಉತ್ತೇಜಿಸುತ್ತಿದ್ದು, ಖಾಸಗಿ ಹೂಡಿಕೆದಾರರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯ ಮೂಲಕ ಪ್ರಾಯೋಗಿಕ ಯೋಜನೆಗೆ ಆಹ್ವಾನಿಸಿದ್ದಾರೆ.

2,500 ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾದ ಸರ್ಕಾರ

ಇತ್ತೀಚಿಗೆ ಭಾರೀ ಕೈಗಾರಿಕೆ ಇಲಾಖೆಯು ಫೇಮ್ -2 ಯೋಜನೆಯ ಅವಧಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿತ್ತು. ಇದರಿಂದಾಗಿ ಫೇಮ್-2 ಯೋಜನೆಯಡಿ ರಿಜಿಸ್ಟರ್ ಆಗಿರುವ ಎಲ್ಲಾ ವಾಹನ ತಯಾರಕ ಕಂಪನಿಗಳು ಸೆಪ್ಟೆಂಬರ್ 30ರವರೆಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಲಿದೆ.

Most Read Articles

Kannada
English summary
Government invites bid to purchase 2500 electric buses. Read in Kannada.
Story first published: Friday, September 4, 2020, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X