ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಎಲೆಕ್ಟ್ರಿಕ್ ಕಾರು

ಜಪಾನ್ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ತನ್ನ ಜನಪ್ರಿಯ ಹೋಂಡಾ ಇ ಎಲೆಕ್ಟ್ರಿಕ್ ಕಾರು ಮಾದರಿಯ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಜಮರ್ನ್‌ ಸರ್ಕಾರವು ವಿವಿಧ ಮಾದರಿಯ ಕಾರು ಆವೃತ್ತಿಗಳಿಗೆ ನೀಡುವ ಪ್ರತಿಷ್ಠಿತ ಜರ್ಮನ್ ಕಾರ್ ಆಫ್ ದಿ ಇಯರ್‌ ಪ್ರಶಸ್ತಿಗೆ ಜಪಾನ್‌ ಮೇಡ್ ಕಾರು ಮಾದರಿಯಾದ ಹೋಂಡಾ ಇ ಎಲೆಕ್ಟ್ರಿಕ್ ಕಾರು ಮಾದರಿಯು ಆಯ್ಕೆಗೊಂಡಿದ್ದು, ಜರ್ಮನಿಯಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡ ಜಪಾನಿನ ಮೊದಲ ಕಾರು ಉತ್ಪನ್ನವಾಗಿದೆ. ಆಕರ್ಷಕ ಬೆಲೆಯೊಂದಿಗೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಇ ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಕಾರು ಪ್ರಶಸ್ತಿ ಮಾತ್ರವಲ್ಲದೆ 'ನ್ಯೂ ​​ಎನರ್ಜಿ' ವಿಭಾಗದಲ್ಲೂ ಪ್ರಶಸ್ತಿಗೆ ಭಾಜನವಾಗಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಹೋಂಡಾ ಕಾರ್ಸ್ ಕಂಪನಿಯು ಈ ವರ್ಷದ ಅಗಸ್ಟ್ ಮೊದಲ ಮೊದಲ ವಾರದಲ್ಲಿ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಹೊಸ ಇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ್ದು, ಮಾರ್ಡನ್ ರೆಟ್ರೋ ವಿನ್ಯಾಸವನ್ನು ಹೊಂದಿರುವ ಹೊಸ ಕಾರು ಆಕರ್ಷಕ ಬ್ಯಾಟರಿ ಆಯ್ಕೆಯೊಂದಿಗೆ ಮಾರಾಟಗೊಳ್ಳುತ್ತಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಬ್ಯಾಟರಿ ಆಯ್ಕೆ ಮತ್ತು ಫೀಚರ್ಸ್‌ಗಳಿಗೆ ಅನುಗುಣವಾಗಿ ಪ್ರಮುಖ ಎರಡು ಮಾದರಿಗಳಲ್ಲಿ ಮಾರಾಟಗೊಳ್ಳುತ್ತಿರುವ ಹೋಂಡಾ ಇ ಕಾರು ಸಾಮಾನ್ಯ ಮತ್ತು ಸುಧಾರಿತ ಬ್ಯಾಟರಿ ಆಯ್ಕೆ ಹೊಂದಿದ್ದು, ಸಾಮಾನ್ಯ ಬ್ಯಾಟರಿ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 200 ಕಿ.ಮೀ ನಿಂದ 250 ಕಿ.ಮೀ ಸ್ಟ್ಯಾಂಡರ್ಡ್ ಮೈಲೇಜ್ ಹೊಂದಿದ್ದು, ಆಸಕ್ತ ಗ್ರಾಹಕರು ಇದೇ ಕಾರು ಮಾದರಿಯಲ್ಲಿ ಹೆಚ್ಚುವರಿ ಬ್ಯಾಟರಿ ಆಯ್ಕೆಗಳ ಮೂಲಕ ಪ್ರತಿ ಚಾರ್ಜ್‌ಗೆ 520 ಕಿ.ಮೀ ಮೈಲೇಜ್ ವರೆಗೂ ಹೆಚ್ಚಿಸಿಕೊಳ್ಳಬಹುದು.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಹೋಂಡಾ ಇ ಕಾರು ಜಪಾನ್ ಮಾರುಕಟ್ಟೆಯಲ್ಲಿ ಭಾರತೀಯ ಬೆಲೆಗಳಿಗೆ ಅನುಗುಣವಾಗಿ ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ಕ್ವಿಕ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡುತ್ತಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಇನ್ನು ಹೋಂಡಾ ಇ-ಕಾರು ಮಾದರಿಯು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವ ಯಾವುದೇ ಸಾಧ್ಯತೆಗಳಿಲ್ಲವಾದರೂ ಭವಿಷ್ಯದಲ್ಲಿ ಬಿಡುಗಡೆಯ ನೀರಿಕ್ಷೆಗಳಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಭಾರೀ ಹಿನ್ನಡೆ ಉಂಟು ಮಾಡುತ್ತಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

2030ರ ವೇಳೆಗೆ ಶೇ.100ರಷ್ಟು ವಿದ್ಯುತ್ ಚಾಲಿತ ವಾಹನಗಳನ್ನು ರಸ್ತೆಗಿಳಿಸುವ ಸಂಬಂಧ ಹಲವಾರು ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಕ್ರಮೇಣ ತಗ್ಗಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಆಟೋ ಕಂಪನಿಗಳು ಈಗಾಗಲೇ ಡೀಸೆಲ್ ಎಂಜಿನ್ ವಾಹನಗಳ ಮಾರಾಟವನ್ನೇ ಸ್ಥಗಿತಗೊಳಿಸಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಮುಂಬರುವ ಕೆಲವೇ ವರ್ಷಗಳಲ್ಲಿ ಪೆಟ್ರೋಲ್ ವಾಹನಗಳ ಕೂಡಾ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಕೇವಲ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಮಾತ್ರವೇ ಮುಂದುವರಿಯಲಿದೆ.

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಈ ಸಂಬಂಧ ವಿಶ್ವದ ಪ್ರಮುಖ ರಾಷ್ಟ್ರಗಳ ತಮ್ಮದೇ ಆದ ಕಾನೂನು ಜಾರಿಗೆ ತರುವ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗ್ರಾಹಕರನ್ನು ಸೆಳೆಯಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಯುರೋಪ್ ಮಾರುಕಟ್ಟೆಯಲ್ಲಂತೂ ಡೀಸೆಲ್ ವಾಹನಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಆಕರ್ಷಣೆ ಮಾಡಲಾಗುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಜರ್ಮನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡ ಹೋಂಡಾ ಇ ಕಾರು

ಇದಕ್ಕೆ ಪೂರಕವಾಗಿ ಜರ್ಮನ್, ಜಪಾನ್ ಮತ್ತು ಫ್ರೆಂಚ್ ಕಾರು ಉತ್ಪಾದನಾ ಕಂಪನಿಗಳು ಪೈಪೋಟಿಯಾಗಿ ವಿವಿಧ ಮಾದರಿಯ ಹಲವು ಎಲೆಕ್ಟ್ಕಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೋಂಡಾ ಕಾರ್ಸ್ ಕೂಡಾ ತನ್ನ ಮಾರ್ಡನ್ ರೆಟ್ರೋ ಮಾದರಿಯ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

Most Read Articles

Kannada
Read more on ಹೋಂಡಾ honda
English summary
Honda E Wins German's 'Car Of The Year' Award. Read in Kannada.
Story first published: Saturday, November 21, 2020, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X