ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಹ್ಯುಂಡೈ ಕಂಪನಿಯು ನೆಚ್ಚಿನ ಗ್ರಾಹಕರಿಗೆ ಮೊಬಿಲಿಟಿ ಮೆಂಬರ್‌ಶಿಷ್ ಅಭಿಯಾನದ ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಹೊಸ ಆಫರ್‌ಗಳ ಅಡಿ ನೀಡುತ್ತಿದ್ದು, ಮುಕ್ತಾಯ ಹಂತದಲ್ಲಿದ್ದ ಹೊಸ ಮೊಲಿಬಿಟಿ ಸದಸ್ಯತ್ವದ ಸಮಯಾವಕಾಶವನ್ನು ಇದೀಗ ವಿಸ್ತರಣೆ ಮಾಡಿದೆ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಆಟೋಮೊಬೈಲ್‌ಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಲಿರುವ ಹ್ಯುಂಡೈ ಕಂಪನಿಯು ಉಚಿತವಾಗಿ ಮೊಲಿಬಿಟಿ ಸದಸ್ಯತ್ವವನ್ನು ನೀಡುತ್ತಿದ್ದು, ಹ್ಯುಂಡೈ ಗ್ರಾಹಕರು ಹೊಸ ಸದಸ್ಯತ್ವದ ಮೂಲಕ ವಿವಿಧ ಆಟೋ ಸೇವೆಗಳು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದು. ಈ ಹಿಂದೆ ಹೊಸ ಸದಸ್ಯತ್ವವನ್ನು ಹೊಸ ವಾಹನ ಮಾಲೀಕರಿಗೆ ಮಾತ್ರ ನೀಡುತ್ತಿದ್ದ ಕಂಪನಿಯು ಇದೀಗ ಎಲ್ಲಾ ಗ್ರಾಹಕರಿಗೆ ವಿಸ್ತರಣೆ ಮಾಡಿದ್ದು, ಹ್ಯುಂಡೈ ಗ್ರಾಹಕರಿಗೆ ಮೊಬಿಲಿಟಿ ಮೆಂಬರ್‌ಶಿಷ್ ಸಾಕಷ್ಟು ಸಹಕಾರಿಯಾಗಿದೆ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಮೊಬಿಲಿಟಿ ಸದಸ್ಯತ್ವದಡಿ ಗ್ರಾಹಕರಿಗೆ ಅಂಕಗಳನ್ನು ನೀಡುವ ಹ್ಯುಂಡೈ ಕಂಪನಿಯು ಅಂಕಗಳ ಆಧಾರದ ಮೇಲೆ ವಿವಿಧ ಆಟೋಮೊಬೈಲ್ ಸೇವೆಗಳ ಮೇಲೆ ರಿಯಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಿದ್ದು, ಹೊಸ ಸದಸ್ಯತ್ವಕ್ಕೆ ಯಾವುದೇ ಹೆಚ್ಚುವರಿ ಶುಲ್ಕಪಾವತಿ ಮಾಡಬೇಕಿಲ್ಲ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಹೀಗಾಗಿ ವಾಹನದ ಪರಿಕರಗಳು, ಇಂಧನ, ಲೂಬ್ರಿಕಂಟ್ ಮತ್ತು ಟೈರ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ವಾಹನ ಚಂದಾದಾರಿಕೆಯ ಪ್ರಕ್ರಿಯೆಯನ್ನು ಸಹ ಸರಳಗೊಳಿಸುತ್ತದೆ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಹಾಗೆಯೇ ಒಂದು ನೀವು ಬಾಡಿಗೆ ವಾಹನಗಳನ್ನು ನೇರವಾಗಿ ಆಯಾ ಕಂಪನಿಗಳ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕಿಂತ ಹ್ಯುಂಡೈ ಮೊಲಿಬಿಟಿ ಆ್ಯಪ್ ಮೂಲಕ ನೋಂದಣಿ ಮಾಡಿದ್ದಲ್ಲಿ ಹಲವಾರು ಆಫರ್‌ಗಳ ಲಭ್ಯವಾಗಲಿದ್ದು, ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ಅಂಕಗಳು ಕೂಡಾ ಹೆಚ್ಚಳವಾಗುವುದರೊಂದಿಗೆ ಆಫರ್ ಪಡೆದುಕೊಳ್ಳಬಹುದಾಗಿದೆ. ಇದು ಹ್ಯುಂಡೈ ಕಾರುಗಳ ಎಲ್ಲಾ ವಾಹನ ಮಾಲೀಕರಿಗೆ ಲಭ್ಯವಾಗಿದ್ದು, ನೀವು ಕೂಡಾ ಹ್ಯುಂಡೈ ಮಾಲೀಕರಾಗಿದ್ದಲ್ಲಿ ಇಂದೇ ಸದಸ್ಯತ್ವ ಪಡೆಯಬಹುದಾಗಿದೆ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಹ್ಯುಂಡೈ ಮೊಬಿಲಿಟಿಗಾಗಿ ಪ್ರತ್ಯೇಕ ಆ್ಯಪ್ ಸೇವೆಯಿದ್ದು ಇದರಲ್ಲಿ ನೀವು ನೋಂದಣಿ ಮಾಡಿದ ನಂತರ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಲಾಗಿನ್ ಆಗಬಹುದಾಗಿದ್ದು, ಎಲ್ಲಾ ಮಾದರಿಯ ಗ್ರಾಹಕರ ಸೇವೆಗಳನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ಈ ಆ್ಯಪ್ ಅಭಿವೃದ್ದಿಪಡಿಸಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಇನ್ನು ದೇಶಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚಳವಾಗಿದ್ದು, ನಿಯಮ ಉಲ್ಲಂಘನೆ ಪ್ರಕರಣಗಳಿಂದ ಅಪಘಾತಗಳ ಸಂಖ್ಯೆ ಕೂಡಾ ಸಾಕಷ್ಟು ಏರಿಕೆಯಾಗುತ್ತಿದೆ. ಇದಕ್ಕಾಗಿ ಜಾಗೃತಿ ಅಭಿಯಾನ ನಡೆಸುತ್ತಿರುವ ಹ್ಯುಂಡೈ ಕಂಪನಿಯು ಆಸಕ್ತ ಗ್ರಾಹಕರಿಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿದೆ.

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಹ್ಯುಂಡೈ ಕಂಪನಿಯು ವಾಹನ ಚಾಲನೆ ವೇಳೆ ಯಾವೆಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂಬುವುದನ್ನು ತನ್ನ ಆಸಕ್ತ ಗ್ರಾಹಕರಿಗೆ ಪ್ರಾಯೋಗಿಕ ತರಬೇತಿಗಳನ್ನು ನೀಡುತ್ತಿದ್ದು, ರಸ್ತೆ ಸುರಕ್ಷತೆ ಕುರಿತು ಇದೀಗ ನಾಲ್ಕನೇ ವರ್ಷದ ಅಭಿಯಾನಕ್ಕೆ ಚಾಲನೆ ನೀಡಿದೆ. #BeTheBetterGuy ಹೆಸರಿನಲ್ಲಿ ಸುರಕ್ಷಾ ಅಭಿಯಾನ ಕೈಗೊಂಡಿದ್ದು, ಕಾರು ಚಾಲನೆ ಗರಿಷ್ಠ ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ಹಲವಾರು ತಂತ್ರಗಳನ್ನು ಹೇಳಿಕೊಡಲಾಗುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಒಂದೇ ಸೂರಿನಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯಲು ಹ್ಯುಂಡೈ ಕಂಪನಿಯಿಂದ ಹೊಸ ಅಭಿಯಾನ

ಸುರಕ್ಷಾ ಅಭಿಯಾನದಲ್ಲಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರೊಂದಿಗೆ ಬದಲಾಗುತ್ತಿರುವ ಚಾಲನಾ ವಿಧಾನಗಳ ಮಾಹಿತಿಯನ್ನು ನೀಡಲಿದ್ದು, ಆಸಕ್ತ ಹ್ಯುಂಡೈ ಗ್ರಾಹಕರು ಅಭಿಯಾನದಲ್ಲಿ ಭಾಗಿಯಾಗಬಹುದಾಗಿದೆ.

Most Read Articles

Kannada
English summary
Hyundai Extended Mobility Membership Campaign. Read in Kannada.
Story first published: Tuesday, December 8, 2020, 21:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X