ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2020ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಹ್ಯುಂಡೈ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 50,313 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿನ ಉತ್ಪಾದನಾ ಕೇಂದ್ರದಿಂದ ವಿದೇಶಗಳಿಗೆ 9,600 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷದ ಮಾರಾಟವನ್ನು ಈ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.23.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹ್ಯುಂಡೈ ಕಂಪನಿಯ 2020ರ ಆಗಸ್ಟ್ ತಿಂಗಳ ಮಾರಾಟವನ್ನು ಸೆಪ್ಟೆಂಬರ್ ತಿಂಗಳ ಮಾರಟಕ್ಕೆ ಹೋಲಿಸಿದರೆ ಶೇ.10 ರಷ್ಟು ಬೆಳವಣಿಗೆ ಸಾಧಿಸಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

2019ರ ಸೆಪ್ಟೆಂಬರ್‌ ತಿಂಗಳಲ್ಲಿ ಹ್ಯುಂಡೈ ಕಂಪನಿಯು ಸುಮಾರು 17,000 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳ ರಫ್ತನ್ನು ಈ ವರ್ಷದ ಅವಧಿಗೆ ಹೋಲಿಸಿದರೆ ಶೇ.43.5 ರಷ್ಟು ಕುಸಿತವನ್ನು ಕಂಡಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಟಾಟಾ ಮೋಟಾರ್ಸ್, ಕಿಯಾ ಮತ್ತು ಮಹೀಂದ್ರಾ ಕಂಪನಿಗಳಿಗಿಂತ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟಾರೆ ಮಾರಾಟದಲ್ಲಿ ಹ್ಯುಂಡೈ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಅದರ ಮಾರುಕಟ್ಟೆ ಪಾಲು ಕಳೆದ ತಿಂಗಳು ಶೇಕಡಾ 17.1 ರಷ್ಟಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಮಾರುಕಟ್ಟೆ ಪಾಲು ಶೇ.18.3 ರಷ್ಟಿದೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳ ಮಾರುಕಟ್ಟೆ ಪಾಲಿಗೆ ಹೋಲಿಸಿದರೆ ಶೇ.1.2 ರಷ್ಟು ಕುಸಿತವನ್ನು ಕಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಅಮೆರಿಕಾ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೆಚ್ಚು ಜನಪ್ರಿಯವಾಗಿರುವುದರಿಂದ ಮ್ಯಾನುವಲ್ ಗೇರ್ ಬಾಕ್ಸ್ ಬೇಡಿಕೆಯು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಹ್ಯುಂಡೈ ತನ್ನ ಎಂಟ್ರಿ ಲೆವೆಲ್ ವೆನ್ಯೂ ಮ್ಯಾನುವಲ್ ವೆರಿಯೆಂಟ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಇನ್ನು ಹ್ಯುಂಡೈ ಕಂಪನಿಯು ತನ್ನ ಮೂರನೇ ತಲೆಮಾರಿನ ಐ20 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಐ20 ಕಾರು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಹೊಸ ಹ್ಯುಂಡೈ ಐ20 ಕಾರು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಆದರೆ ಹ್ಯುಂಡೈ ಕಂಪನಿಯು ಈ ಹೊಸ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಇದರಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವಂತಹ 1.0 ಲೀಟರ್ ಪೆಟ್ರೋಲ್ ಟರ್ಬೊ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹಬ್ಬದ ಸೀಸನ್ ನಲ್ಲಿ ಹ್ಯುಂಡೈ ಕಾರುಗಳ ಮಾರಟವು ಹೆಚ್ಚಾಗಬಹುದೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hyundai Registers 23.6% Growth In September. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X