ಲಾಕ್‌ಡೌನ್ ವಿನಾಯ್ತಿ: 225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಹ್ಯುಂಡೈ ಕಂಪನಿಯು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಿರುವುದಲ್ಲದೆ ಮಾರಾಟ ಮಳಿಗೆಗಳನ್ನು ಪುನಾರಂಭಿದ್ದು, ಉದ್ಯೋಗದ ಸ್ಥಳದಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿದೆ.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಕಾರು ಉತ್ಪಾದನೆ ಮತ್ತು ಮಾರಾಟ ಶುರು ಮಾಡಿರುವ ಹ್ಯುಂಡೈ ಕಂಪನಿಯು ದೇಶಾದ್ಯಂತ 225 ಮಾರಾಟ ಮಳಿಗೆಗಳನ್ನು ತೆರಿದಿದೆ.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಕೈಗಾರಿಕಾ ಸಂಸ್ಥೆಗಳು ಕೇವಲ ಶೇ.33 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿ ಬಳಕೆಮಾಡಬೇಕು.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಈ ನಿಟ್ಟಿನಲ್ಲಿ ಹೊಸ ನಿಯಮ ಅನ್ವಯ ಹ್ಯುಂಡೈ ಕೂಡಾ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ವ್ಯವಹಾರಗಳ ಮೂಲಕ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಕಾರು ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸಲಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಕಾರು ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ಔಷಧಿಗಳನ್ನು ಸಿಂಪರಣೆ ನಂತರವೇ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲಿದ್ದು, ಈ ವೇಳೆ ಗ್ರಾಹಕರ ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸೋಂಕು ಹರಡುವಿಕೆಯನ್ನು ತಡೆಯಲು ಗರಿಷ್ಠ ಎಚ್ಚರಿಕೆ ಕೈಗೊಳ್ಳಲಾಗುತ್ತಿದೆ.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಹೀಗಿರುವಾಗ ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದ್ದು, ಹ್ಯುಂಡೈ ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಕಳೆದ ಒಂದೂವರೆ ತಿಂಗಳಿನಿಂದ ವಿಧಿಸಲಾಗಿರುವ ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಹೀಗಿರುವಾಗ ಕಾರು ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿದಾರರಿಗೆ ಇಎಂಐ ಪಾವತಿ ಚಿಂತೆಯನ್ನು ಹೊಗಲಾಡಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಒಂದು ವೇಳೆ ಹೊಸ ಕಾರು ಖರೀದಿ ನಂತರ ಉದ್ಯೋಗ ಕಳೆದುಕೊಂಡರು ಇಎಂಐ ಪಾವತಿಯ ಚಿಂತೆಯನ್ನು ಹೊಗಲಾಡಿಸಲು ಮುಂದಾಗಿರುವ ಹ್ಯುಂಡೈ ಕಂಪನಿಯು ಮೂರು ತಿಂಗಳ ಕಾಲ ಇಎಂಐ ಪಾವತಿಯ ಹೊಣೆ ತನ್ನದು ಎಂದಿದೆ.

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಅಂದರೆ ಕಾರು ಖರೀದಿಯ ನಂತರ ನೀವು ಒಂದು ವೇಳೆ ಕೆಲಸ ಕಳೆದುಕೊಂಡರು ಮೂರು ತಿಂಗಳ ಕಾಲ ಇಎಂಐ ಹೊರೆಯನ್ನು ತಾನೇ ಭರಿಸುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಕಂಪನಿಯು ಕಾರು ಖರೀದಿದಾರರ ಆತ್ಮವಿಶ್ವಾಸ ಹೆಚ್ಚಿಸಲು ಮುಂದಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

225 ಕಾರು ಮಾರಾಟ ಮಳಿಗೆಗಳ ಬಾಗಿಲು ತೆರೆದ ಹ್ಯುಂಡೈ

ಮಾಹಿತಿಗಳ ಪ್ರಕಾರ, ಎಂಟ್ರಿ ಲೆವಲ್ ಕಾರು ಮಾದರಿಗಳಾದ ಸ್ಯಾಂಟ್ರೋ, ಐ10 ಗ್ರಾಂಡ್ ನಿಯೋಸ್, ಐ20, ಔರಾ ಕಂಪ್ಯಾಕ್ಟ್ ಸೆಡಾನ್ ಮೇಲೆ ಮಾತ್ರವೇ ಲಭ್ಯವಿರಲಿದ್ದು, ನಿಜವಾಗಿಯೂ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಲ್ಲಿ ಮಾತ್ರವೇ ಈ ಆರ್ಥಿಕ ಸಹಾಯದ ಯೋಜನೆ ಅರ್ಹವಾಗಿರುತ್ತಾರೆ.

Most Read Articles

Kannada
English summary
Hyundai Motors has resumed operations of 255 dealerships and service centers across the country. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X