ಕಾರು ಮಾರಾಟ ಹೆಚ್ಚಳಕ್ಕಾಗಿ ಐದು ಹೊಸ ಆಫರ್‌ಗಳನ್ನು ಘೋಷಿಸಿದ ಹ್ಯುಂಡೈ
ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹ್ಯುಂಡೈ ಕಂಪನಿಯು ಪ್ರಮುಖ ಐದು ಅಂಶಗಳ ಮಾರಾಟ ತಂತ್ರಗಳೊಂದಿಗೆ ವ್ಯಾಪಾರ ವಹಿವಾಟನ್ನು ಸುಧಾರಣೆಗೊಳಿಸುವ ಯೋಜನೆಯಲ್ಲಿದೆ.

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದುಬಿದ್ದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಇವು ಕುಸಿದಿರುವ ಕಾರು ಮಾರಾಟಕ್ಕೆ ಚೇತರಿಕೆ ನೀಡಲಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರನ್ನು ಸೆಳೆಯಲು ಕೆಲವು ಆಕರ್ಷಕ ಯೋಜನೆಗಳನ್ನು ರೂಪಿಸಿದೆ.

ಲಾಕ್‌ಡೌನ್‌ಗೂ ಮೊದಲ ವಾಹನಗಳ ಖರೀದಿ ಮುಂಗಡ ಪಾವತಿಸಿದ್ದ ಗ್ರಾಹಕರು ಇದೀಗ ವಾಪಸ್ ಪಡೆದುಕೊಳ್ಳುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದ್ದು, ವಾಹನ ಮಾರಾಟಕ್ಕೆ ವಿನಾಯ್ತಿ ಸಿಕ್ಕರೂ ಇದೀಗ ಗ್ರಾಹಕರು ಮಾರಾಟ ಮಳಿಗೆಗಳತ್ತ ಸುಳಿಯುತ್ತಿಲ್ಲ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಾಹಿತಿಗಳ ಪ್ರಕಾರ, ಲಾಕ್‌ಡೌನ್‌ಗೂ ಮುಂಗಡ ಪಾವತಿಸಿದ್ದ ಗ್ರಾಹಕರಲ್ಲಿ ಇದೀಗ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಮುಂಗಡ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟು ಶುರುವಾಗಬಹುದು ಎನ್ನುವ ಆತಂಕ ಗ್ರಾಹಕರಲ್ಲಿ ಕಾಡತೊಡಗಿದೆ.

ಇದರಿಂದ ಆತಂಕದಲ್ಲಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಹಲವಾರು ಹಣಕಾಸು ಸೇವೆಗಳನ್ನು ನೀಡಲು ಮುಂದಾಗಿದ್ದು, ಹ್ಯುಂಡೈ ಕೂಡಾ ಐದು ಮಾದರಿಯ ಹಣಕಾಸು ಸೇವೆಗಳ ಆಫರ್ ನೀಡುತ್ತಿದೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಹ್ಯುಂಡೈ ನೀಡುತ್ತಿರುವ ಆಫರ್‌ಗಳಲ್ಲಿ ಮೊದಲ ಆಫರ್ ಅಂದ್ರೆ ವಾಹನ ಖರೀದಿ ಮಾಡಿದ ಮೊದಲ ಮೂರು ತಿಂಗಳು ಅತಿ ಕಡಿಮೆ ಇಎಂಐ ಪಾವತಿಸುವುದು ತದನಂತರ ಮೂಲ ಸಾಲದ ಆಧಾರ ಇಎಂಐ ನಿಗದಿ ಮಾಡಲಾಗುತ್ತದೆ.

ಎರಡನೇ ಆಫರ್‌ನಲ್ಲಿ ಕಾರು ಖರೀದಿಯ ನಂತರ ಸಾಲ ಮರುಪಾವತಿಗೆ 7 ವರ್ಷಗಳ ಕಾಲಾವಾಕಾಶವಿರಲಿದೆ. ಇದರಲ್ಲಿ ಮೊದಲ ಒಂದು ವರ್ಷದ ಅವಧಿಯಲ್ಲಿ ಪ್ರತಿ ಲಕ್ಷಕ್ಕೆ ರೂ.1,234 ಇಎಂಐ ಅನ್ವಯವಾಗಲಿದ್ದು, ತದನಂತರ ಶೇ.11ರಷ್ಟು ಬಡ್ಡಿ ಲೆಕ್ಕಾಚಾರದಲ್ಲಿ ಇಎಂಐ ಮೊತ್ತ ನಿಗದಿಯಾಗಲಿದೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಮೂರನೇ ಆಫರ್‌ನಲ್ಲಿ ಗ್ರಾಹಕರು ವಾಹನ ಸಾಲವನ್ನು ಒಂದೇ ಕಂತಿನಲ್ಲಿ ದೊಡ್ಡ ಮೊತ್ತ ಮರುಪಾವತಿಸುವ ಬಲೂನ್ ಸ್ಕ್ರೀಮ್ ಸಹ ಪಡೆದುಕೊಳ್ಳಬಹುದಾಗಿದ್ದು, ನಿಗದಿತ ಅವಧಿಯೊಳಗೆ ಪೂರ್ಣ ಪ್ರಮಾಣದ ಸಾಲ ಮರುಪಾವತಿಸುವ ಮೂಲಕ ಇಎಂಐ ಮೂಲಕ ಪಾವತಿಸಬಹುದಾದ ಶೇ.14ರಷ್ಟು ಹಣವನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ.

ನಾಲ್ಕನೇ ಆಫರ್‌ನಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಧೀರ್ಘಾವಧಿಯ ಲೋನ್ ಮಂಜೂರು ಮಾಡಲಿದ್ದು, ಗರಿಷ್ಠ ಎಂಟು ವರ್ಷಗಳ ತನಕ ಸಾಲ ಮರುಪಾವತಿಗೆ ಅವಕಾಶವಿರುತ್ತದೆ. ಇದರಿಂದ ಇಐಎಂ ಮೊತ್ತವು ಗಣನೀಯ ಪ್ರಮಾಣದಲ್ಲಿ ಕಡಿಮೆಯಿರುತ್ತದೆ.
MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಇನ್ನು ಐದನೇ ಆಫರ್‌ನಲ್ಲಿ ಲೋ ಡೌನ್ ಪೆಮೆಂಟ್ ಆಯ್ಕೆ ನೀಡಲಾಗಿದ್ದು, ಕಾರು ಖರೀದಿಗೆ ಅತಿ ಕಡಿಮೆ ಹಣ ಪಾವತಿಸಿ ಪಡೆದುಕೊಳ್ಳಬಹುದು. ಹಾಗೆಯೇ ಉದ್ಯೋಗದ ಅಭದ್ರತೆಯಿದ್ದಲ್ಲಿ ಕಾರು ಖರೀದಿ ಮಾಡಿದ ಒಂದು ವರ್ಷದ ಅವಧಿಯಲ್ಲಿ ಮೂರು ತಿಂಗಳು ಕಂಪನಿಯೇ ಇಎಂಐ ಪಾವತಿ ಮಾಡುತ್ತದೆ.


Click it and Unblock the Notifications








