ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಮಾಹಾಮಾರಿ ಕರೋನಾ ವೈರಸ್‌ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿವೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.70ರಿಂದ ಶೇ.97ರಷ್ಟು ಕುಸಿತ ಕಂಡುಬಂದಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಮಾರಾಟದಲ್ಲಿ ಚೇತರಿಕೆ ಕಾಣಬಹುದು ಎನ್ನಲಾಗಿದೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

2019ರ ಮೇ ಅವಧಿಯಲ್ಲಿ 2.60 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದ ವಿವಿಧ ಕಾರು ಕಂಪನಿಗಳು 2020ರ ಮೇ ಅವಧಿಯಲ್ಲಿ ಕೇವಲ 36 ಸಾವಿರ ಕಾರುಗಳನ್ನು ಮಾರಾಟ ಮಾಡಿದ್ದು, ಶೇ.85ರಷ್ಟು ಕಾರು ಮಾರಾಟವು ಇಳಿಕೆಯಾಗಿದೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಹೊಸ ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ವಾಹನ ಮಾರಾಟವು ಮಂದಗತಿಯಲ್ಲಿ ಸಾಗಿದ್ದು, ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಮಾರ್ಚ್ 15ರ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ದೇಶದ ನಂ.1 ಕಾರು ಮಾರಾಟ ಕಂಪನಿಯಾದ ಮಾರುತಿ ಸುಜುಕಿಯು ಸಹ ಈ ಬಾರಿ ಕಳೆದ ವರ್ಷದ ಮೇ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಶೇ.88ರಷ್ಟು ಹಿನ್ನಡೆ ಅನುಭವಿಸಿದ್ದು, ಮೇ4ರಿಂದ 31ರ ಅವಧಿಯಲ್ಲಿ 13,865 ಕಾರಗಳನ್ನು ಮಾರಾಟ ಮಾಡಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮೇ ಅವಧಿಯ ಕಾರು ಮಾರಾಟದಲ್ಲಿ ಶೇ.85ರಷ್ಟು ನಷ್ಟ ಅನುಭವಿಸಿದ ಆಟೋ ಕಂಪನಿಗಳು

ಹಾಗೆಯೇ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಹ್ಯುಂಡೈ ಕೂಡಾ ಶೇ.83ರಷ್ಟು ಹಿನ್ನಡೆಯೊಂದಿಗೆ 6,883 ಕಾರುಗಳನ್ನು ಮಾರಾಟ ಮಾಡಿದ್ದು, ಮಹೀಂದ್ರಾ ಕಂಪನಿಯು 3,867 ಯುನಿಟ್, ಟಾಟಾ ಮೋಟಾರ್ಸ್ 3,153 ಯುನಿಟ್ ಮಾತ್ರವೇ ಮಾರಾಟ ಮಾಡಿವೆ.

Article Published On: Monday, June 8, 2020, 14:12 [IST]
English summary
Indian Car Industry Sales In May 2020 Registers Around 36,000 Units. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+