ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳಿಗೆ ಸರ್ಕಾರವೇ ಕಾರುಗಳನ್ನು ಒದಗಿಸುತ್ತದೆ. ಆದರೆ ನಮ್ಮ ರಾಜಕಾರಣಿಗಳು ಸರ್ಕಾರವು ನಿಗದಿಪಡಿಸಿದ ಸರ್ಕಾರಿ ಕಾರುಗಳಿದ್ದರೂ ಸುರಕ್ಷತೆ ಅಥವಾ ಐಷಾರಾಮಿ ಕಾರುಗಳು ವ್ಯಾಮೋಹಕ್ಕೆ ಸಿಲುಕಿ ಸ್ವಂತ ಕಾರುಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ಕೇವಲ ಸಿನಿಮಾ ತಾರೆಯರಿಗೆ ಅಥವಾ ಉದ್ಯಮಗಳಿಗೆ ಮಾತ್ರವಲ್ಲ ರಾಜಕಾರಣಿಗಳಿಗೂ ಕಾರುಗಳ ಕ್ರೇಜ್ ಹೆಚ್ಚಿದೆ. ಅದೊಂದು ಕಾಲವಿತ್ತು ಎಲ್ಲಾ ರಾಜಕಾರಣಿಗಳು ಒಂದೇ ಮಾದರಿಯ ಅಂಬಾಸಿಡರ್ ಕಾರ್ ಅನ್ನು ಬಳಸುತ್ತಿದ್ದರು. ಆದರೆ ಇಂದು ವಿಶ್ವದ ಕೆಲವು ದುಬಾರಿ ಮತ್ತು ಸುರಕ್ಷಿತ ಎಸ್‍ಯುವಿಗಳನ್ನು ಭಾರತದ ಪ್ರಭಾವಿ ರಾಜಕಾರಣಿಗಳು ಬಳಸುತ್ತಾರೆ. ಭಾರತದ ಪ್ರಭಾವಿ ರಾಜಕಾರಣಿಗಳು ಬಳಸುವ ಎಸ್‍‍ಯುವಿಗಳ ಮಾಹಿತಿ ಇಲ್ಲಿವೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ನರೇಂದ್ರ ಮೋದಿ

ಟೊಯೊಟಾ ಲ್ಯಾಂಡ್ ಕ್ರೂಸರ್

ಪ್ರಧಾನಿ ನರೇಂದ್ರ ಮೋದಿಯವರು ಬಿಎಂಡಬ್ಲ್ಯು-7 ಸೀರಿಸ್ ಮತ್ತು ಲ್ಯಾಂಡ್ ರೋವರ್ ಎಸ್‍ಯುವಿಯನ್ನು ಬಳಸುತ್ತಾರೆ. ಇತ್ತೀಚಿಗೆ ಹೆಚ್ಚಿನ ಸುರಕ್ಷಿತ ಒದಗಿಸಿದ ಬುಲೆಟ್‍‍‍ಫ್ರೂಫ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು ಕೂಡ ಬಳಸುತ್ತಾರೆ. ಪ್ರಧಾನಿಯವರುಬಳಸುವ ಕಪ್ಪು ಬಣ್ಣದ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍‍ಯುವಿಯು ಬುಲೆಟ್ ಫ್ರೂಫ್ ಆಗಿದ್ದು, ಸಣ್ಣ ಬಾಂಬುಗಳ ದಾಳಿಯಾದರೂ ಯಾವುದೇ ಹಾನಿ ಉಂಟಾಗುವುದಿಲ್ಲ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ರೇಂಜ್ ರೋವರ್

ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ವಿಶೇಷವಾಗಿ ತಯಾರಿಸಲಾಗಿರುವ ರೇಂಜ್ ರೋವರ್ ಎಸ್‍‍ಯುವಿಯನ್ನು ಬಳಸುತ್ತಾರೆ. ಭದ್ರತಾ ಕಾರಣಗಳಿಗಾಗಿ ಈ ವಾಹನವನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ರೇಂಜ್ ರೋವರ್ 3.0 ಲೀಟರಿನ ಸೂಪರ್‍‍ಚಾರ್ಜ್ದ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ಸೋನಿಯಾ ಗಾಂಧಿ

ಲ್ಯಾಂಡ್ ರೋವರ್ ರೇಂಚ್ ರೋವರ್

ಎಐಸಿಸಿ ಅಧ್ಯಕ್ಷೆ ಮತ್ತು ಭಾರತದ ಪವರ್ ಫುಲ್ ಮಹಿಳೆಯರಲ್ಲಿ ಒಬ್ಬರಾದ ಸೋನಿಯಾ ಗಾಂಧಿಯವರು ಕಪ್ಪು ಬಣ್ಣದ ಲ್ಯಾಂಡ್ ರೋವರ್ ಅನ್ನು ಬಳಸುತ್ತಾರೆ. ಈ ಎಸ್‍‍ಯುವಿಯನ್ನು ಹೆಚ್ಚಾಗಿ ದೆಹಲಿಯಲ್ಲಿ ಪ್ರಯಾಣ ಮಾಡಲು ಬಳಸುತ್ತಾರೆ. ಇನ್ನೂ ದೆಹಲಿಯಿಂದ ದೂರ ಪ್ರಯಾಣಕ್ಕೆ ಅವರು ಸುಸಜ್ಜಿತ ಟಾಟಾ ಸಫಾರಿ ಎಸ್‍‍ಯುವಿಯನ್ನು ಬಳಸುತ್ತಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ರಾಜ್ ಠಾಕ್ರೆ

ಲ್ಯಾಂಡ್ ಕ್ರೂಸರ್

ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಯಾದ ರಾಜ್ ಠಾಕ್ರೆರವರು ಬೇರೆಲ್ಲಾ ವಾಹನಗಳಿಗಿಂತ ಹೆಚ್ಚಾಗಿ ಟೊಯೊಟಾ ಕಂಪನಿಯ ಲ್ಯಾಂಡ್ ಕ್ರೂಸರ್ ಎಸ್‍‍ಯು‍‍ವಿಯಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ. ಟೊಯೊಟಾ ಲ್ಯಾಂಡ್ ಕ್ರೂಸರ್‍‍ನ ಹೊರತಾಗಿ ಠಾಕ್ರೆರವರ ಬಳಿ ಹಿಂದಿನ ತಲೆಮಾರಿನ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ವಾಹನವಿದೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ರಾಹುಲ್ ಗಾಂಧಿ

ಟೊಯೊಟಾ ಲ್ಯಾಂಡ್ ಕ್ರೂಸರ್

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿರವರು ಟೊಯೊಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಹೆಚ್ಚು ಬಳಸುತ್ತಾರೆ. ಇದರ ಜೊತೆಗೆ ಲೆಕ್ಸಸ್ ಎಲ್‍ಎಕ್ಸ್ ಎಸ್‍‍ಯು‍‍ವಿ ಹಾಗೂ ಹೆಚ್ಚಿನ ಸುರಕ್ಷತೆ ಹೊಂದಿರುವ ಟಾಟಾ ಸಫಾರಿ ಕಾರುಗಳನ್ನು ಹೊಂದಿದ್ದಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ಒಮರ್ ಅಬ್ದುಲ್ಲಾ

ರೇಂಜ್ ರೋವರ್

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾರವರು ಅನೇಕ ಕಾರುಗಳನ್ನು ಹೊಂದಿದ್ದರೂ ಸಹ ತಮ್ಮ ನೆಚ್ಚಿನ ರೇಂಜ್ ರೋವರ್ ಕಾರ್ ಅನ್ನು ಹೆಚ್ಚು ಬಳಸುತ್ತಾರೆ. ಒಮರ್ ಅಬ್ದುಲ್ಲಾರವರು ಹೆಚ್ಚಾಗಿ ತಮ್ಮ ಕಾರನ್ನು ತಾವೇ ಚಾಲನೆ ಮಾಡುತ್ತಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ಕಿರಣ್ ಬೇಡಿ

ಮರ್ಸಿಡಿಸ್ ಜಿ‍ಎಲ್ - ಕ್ಲಾಸ್

ಭಾರತದ ಮೊಟ್ಟ ಮೊದಲ ಮಹಿಳಾ ಐ‍‍ಪಿ‍ಎಸ್ ಅಧಿಕಾರಿ ಕಿರಣ್ ಬೇಡಿರವರು ತಮ್ಮ ಉದ್ಯೋಗವನ್ನು ತ್ಯಜಿಸಿದ ನಂತರ ರಾಜಕೀಯಕ್ಕೆ ಬಂದರು. ಬೇಡಿರವರ ನೆಚ್ಚಿನ ಕಾರು ಮರ್ಸಿಡಿಸ್ ಜಿ‍ಎಲ್ - ಕ್ಲಾಸ್ ಆಗಿದೆ. ಈ ಬೆಂಝ್ ಎಸ್‍‍ಯುವಿಯನ್ನು ಕಿರಣ್ ಬೇಡಿಯವರು ಹೆಚ್ಚಾಗಿ ಬಳಸುತ್ತಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ರಜನಿಕಾಂತ್

ಬಿ‍ಎಂ‍‍ಡಬ್ಲ್ಯು ಎಕ್ಸ್5

ರಜನಿಕಾಂತ್‍‍ರವರು ಭಾರತದಲ್ಲಿ ಅತಿಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಚಿತ್ರನಟರಲ್ಲಿ ಒಬ್ಬರಾಗಿದ್ದಾರೆ.ತಮಿಳು ಚಿತ್ರರಂಗದ ದಂತಕಥೆ ಹಾಗೂ ಈಗ ರಾಜಕಾರಣಿಯಾಗಿರುವ ರಜನಿಕಾಂತ್‍‍ರವರ ಬಳಿ ಲಗ್ಷುರಿಗೆ ಹೆಸರಾಗಿರುವ ಬಿ‍ಎಂ‍‍ಡಬ್ಲ್ಯು ಎಕ್ಸ್5 ವಾಹನವಿದೆ. ಇದರ ಜೊತೆಗೆ ರಜನಿಕಾಂತ್ ರವರು ಹಳೆಯ ತಲೆಮಾರಿನ ಟೊಯೊಟಾ ಇನೋವಾ ಎಂ‍‍ಪಿ‍‍ವಿಯನ್ನು ಸಹ ಹೊಂದಿದ್ದಾರೆ.

ಭಾರತದ ಪ್ರಭಾವಿ ರಾಜಕಾರಣಿಗಳ ಬಳಿಯಿರುವ ಕಾರುಗಳಿವು

ನವಜೋತ್ ಸಿದ್ದು

ಲ್ಯಾಂಡ್ ಕ್ರೂಸರ್

ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿದ್ದು ತಮ್ಮ ಕ್ರಿಕೆಟ್ ಕಾಮೆಂಟ್ರಿ ಮೂಲಕ ಹೆಸರಾದವರು. ಸಿಕ್ಸರ್ ಸಿದ್ದು ಎಂದೇ ಖ್ಯಾತರಾಗಿದ್ದ ಸಿದ್ದುರವರು ಲ್ಯಾಂಡ್ ಕ್ರೂಸರ್ ಎಸ್‍‍ಯು‍‍ವಿಯನ್ನು ಹೊಂದಿದ್ದಾರೆ. ಪಂಜಾಬ್‍‍ನಲ್ಲಿ ಲ್ಯಾಂಡ್ ಕ್ರೂಸರ್ ವಾಹನಗಳು ಹೆಚ್ಚು ಜನಪ್ರಿಯವಾಗಿವೆ.

More from DriveSpark

Article Published On: Tuesday, January 7, 2020, 15:45 [IST]
English summary
SUVs of Indian politicians - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+