ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಎರಡನೇ ಅತಿ ದೊಡ್ಡ ದೇಶವಾಗಿದೆ. ಭಾರತದಲ್ಲಿರುವ ಮನೆಗಳಲ್ಲಿ ಕನಿಷ್ಠ ಒಂದು ವಾಹನವಿದೆ. ಕೆಲವು ಮನೆಗಳಲ್ಲಿ ಕುಟುಂಬದ ಪ್ರತಿಯೊಬ್ಬರೂ ವಾಹನಗಳನ್ನು ಹೊಂದಿದ್ದಾರೆ. ಇದರಿಂದ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಇಂಧನವನ್ನು ಬಳಸಲಾಗುತ್ತದೆ.

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಭಾರತದಲ್ಲಿ ಕಚ್ಚಾ ತೈಲ ಸಂಪನ್ಮೂಲಗಳ ಕೊರತೆಯಿರುವ ಕಾರಣಕ್ಕೆ ಇಂಧನಕ್ಕಾಗಿ ಬೇರೆ ದೇಶವನ್ನು ಹೆಚ್ಚು ಅವಲಂಬಿಸಿದ್ದೇವೆ. ಭಾರತದ ಕಚ್ಚಾ ತೈಲ ಬೇಡಿಕೆಯ 85%ನಷ್ಟು ಆಮದಿನ ಮೂಲಕ ಪೂರೈಕೆಯಾಗುತ್ತದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಕಚ್ಚಾ ತೈಲ ಆಮದಿಗೆ ಭಾರತ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಇದು ದೇಶದ ಅರ್ಥ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಕೇಂದ್ರ ಸರ್ಕಾರವು ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆಗೊಳಿಸಲು ಮುಂದಾಗಿದೆ. ಕಚ್ಚಾ ತೈಲ ಆಮದನ್ನು ಕಡಿಮೆಗೊಳಿಸುವ ಅಗತ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಅನೇಕ ಬಾರಿ ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ವರ್ಷದ ಜುಲೈ ತಿಂಗಳಿನಲ್ಲಿ ಭಾರತದ ಕಚ್ಚಾ ತೈಲ ಆಮದು ಪ್ರಮಾಣವು ತೀವ್ರವಾಗಿ ಕುಸಿದಿದೆ. ಕಳೆದ 10 ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂಬುದು ಗಮನಾರ್ಹ.

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಜುಲೈ ತಿಂಗಳಿನಲ್ಲಿ ಭಾರತವು ಕೇವಲ 12.34 ದಶಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. 2019ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು 36.4%ನಷ್ಟು ಕಡಿಮೆಯಾಗಿದೆ. ಕಚ್ಚಾ ತೈಲ ಆಮದು ಪ್ರಮಾಣವು 2010ರ ಮಾರ್ಚ್ ನಂತರ ಭಾರಿ ಕುಸಿತವನ್ನು ದಾಖಲಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಕಚ್ಚಾ ತೈಲ ಆಮದು ಕುಸಿತಕ್ಕೆ ಕರೋನಾ ವೈರಸ್ ಪ್ರಮುಖ ಕಾರಣವಾಗಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಿಂದ ಲಾಕ್ ಡೌನ್ ಜಾರಿಗೊಳಿಸಲಾಯಿತು. ಲಾಕ್ ಡೌನ್ ಜಾರಿಯಾದ ನಂತರ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಯಿತು. ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರದ ಮೇಲೂ ನಿರ್ಬಂಧ ಹೇರಲಾಯಿತು.

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ವಾಹನ ಮಾಲೀಕರಿಗೆ ದಂಡ ವಿಧಿಸಿದರು. ಲಾಕ್ ಡೌನ್ ಸಡಿಲಿಕೆ ನಂತರ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಗಿದೆ. ಜೊತೆಗೆ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲಿನ ನಿರ್ಬಂಧಗಳನ್ನು ಸಹ ಸಡಿಲಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ದಾಖಲೆ ಪ್ರಮಾಣದಲ್ಲಿ ಕುಸಿದ ಕಚ್ಚಾ ತೈಲ ಆಮದು ಪ್ರಮಾಣ

ಆದರೆ ದೇಶದ ಹಲವು ಭಾಗಗಳಲ್ಲಿ ಲಾಕ್ ಡೌನ್ ಇನ್ನೂ ಜಾರಿಯಲ್ಲಿದೆ. ಜೊತೆಗೆ ಕರೋನಾ ವೈರಸ್ ಹರಡುವ ಭಯದಿಂದ ಜನರು ಸಾರ್ವಜನಿಕ ಸಾರಿಗೆ ವಾಹನಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇದು ಸಹ ಇಂಧನ ಬೇಡಿಕೆ ಕುಸಿಯಲು ಕಾರಣವಾಗಿದೆ. ಆದರೆ ವಾಹನ ಸಂಚಾರವು ಸಹಜ ಸ್ಥಿತಿಗೆ ಬಂದ ನಂತರ ಇಂಧನಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಬಹುದು.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
India's crude oil import quantity falls significantly in 2020 July. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X