ಅಗಸ್ಟ್ ಅವಧಿಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡ ಕಿಯಾ ಸೆಲ್ಟೊಸ್
ಕಿಯಾ ಮೋಟಾರ್ಸ್ ಕಂಪನಿಯು ಕರೋನಾ ವೈರಸ್ ಅಬ್ಬರ ನಡುವೆಯೂ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿದ್ದು, ಅಗಸ್ಟ್ ಅವಧಿಯಲ್ಲಿ 10,655 ಯನಿಟ್ ಸೆಲ್ಟೊಸ್ ಕಾರು ಮಾದರಿಗಳನ್ನು ಮಾರಾಟ ಮಾಡಿರುವುದು ಹೊಸ ದಾಖಲೆಗೆ ಕಾರಣವಾಗಿದೆ.

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿ ಅಗಸ್ಟ್ ಅವಧಿಗೆ 1 ವರ್ಷ ಪೂರೈಸಿದ್ದು, ಮೊದಲ ಬಾರಿಗೆ ಒಂದು ತಿಂಗಳ ಅವಧಿಯಲ್ಲಿ ಸೆಲ್ಟೊಸ್ ಕಾರು ಮಾರಾಟದಲ್ಲಿ 10 ಸಾವಿರಕ್ಕೂ ಅಧಿಕ ಕಾರು ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ ಪ್ರತಿ ತಿಂಗಳು 6 ಸಾವಿರದಿಂದ 8 ಸಾವಿರ ಯುನಿಟ್ ಸರಾಸರಿ ಮಾರಾಟ ಹೊಂದಿದ್ದ ಸೆಲ್ಟೊಸ್ ಕಾರು ಮಾರಾಟವು ಇದೀಗ ಸಂಕಷ್ಟದ ಪರಿಸ್ಥಿತಿಯಲ್ಲೂ ಒಂದೇ ತಿಂಗಳಿನಲ್ಲಿ 10 ಸಾವಿರ ಯುನಿಟ್ ಮಾರಾಟಗೊಂಡಿದೆ.

ಕರೋನಾ ವೈರಸ್ ಅಬ್ಬರದಿಂದಾಗಿ ಬಹುತೇಕ ಕಾರು ಬಳಕೆದಾರರು ಸ್ವಂತ ವಾಹನಗಳ ಮುಖ ಮಾಡುತ್ತಿರುವುದೇ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಬೇಡಿಕೆ ಕಂಡುಬಂದಿದ್ದು, ಆಟೋ ಕಂಪನಿಗಳು ಕೂಡಾ ಕುಸಿದಿದ್ದ ವಾಹನ ಮಾರಾಟ ಸುಧಾರಣೆಗಾಗಿ ವಿವಿಧ ಆಫರ್‌ಗಳನ್ನು ನೀಡಿದ್ದ ಹಿನ್ನಲೆಯಲ್ಲಿ ಚೇತರಿಕೆ ಕಂಡುಬಂದಿದೆ.

ಹಾಗೆಯೇ ಕಿಯಾ ಕಾರುಗಳಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಜೋಡಣೆ ಮಾಡಲಾಗುವ ಕನೆಕ್ಟೆಡ್ ಕಾರ್ ಫೀಚರ್ಸ್‌ಗಳು ಕೂಡಾ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಇದುವರೆಗೆ ಬರೋಬ್ಬರಿ 60 ಸಾವಿರಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಿದೆ.

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದ್ದು, ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡುವ ಮೂಲಕ ವಾಹನ ಕಳ್ಳತನದಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದು.

ಸದ್ಯ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್‌ಗಳನ್ನು ಕಾರ್ನಿವಾಲ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಮತ್ತು ಸೆಲ್ಟೊಸ್ ಕಾರಿನ ಹೈಎಂಡ್ ಮಾದರಿಗಳಲ್ಲಿ ಮಾತ್ರವೇ ನೀಡಲಾಗುತ್ತಿದ್ದು, ಸಾಮಾನ್ಯ ಕಾರುಗಳಿಗಿಂತಲೂ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳೇ ಹೆಚ್ಚು ಮಾರಾಟವಾಗಿವೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2020ರ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನವೀಕರಣಗೊಂಡ ಸೆಲ್ಟೊಸ್ ಆವೃತ್ತಿಯಲ್ಲಿ ಈ ಬಾರಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಬದಲಾವಣೆ ಪರಿಚಯಿಸಲಾಗಿದ್ದು, ಬೆಸ್ ಮಾಡೆಲ್‌ಗಳಲ್ಲಿ ಡ್ಯುಯಲ್ ಎಕ್ಸಾಸ್ಟ್, ಮೆಟಲ್ ಸ್ಕಫ್, ಪವರ್ಡ್ ಸನ್‌ರೂಫ್ ಪಡೆದುಕೊಂಡಿವೆ. ಹಾಗೆಯೇ ಹೈ ಎಂಡ್ ಮಾದರಿಗಳಲ್ಲಿ ಎರಡು ಸಾಲುಗಳಲ್ಲೂ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್, ಸ್ಟ್ಯಾಂಡರ್ಡ್ ಆಗಿ ಎಮರ್ಜೆನ್ಸಿ ಸ್ಟಾಪ್ ಲೈಟಿಂಗ್, ಎಲ್‌ಇಡಿ ಕ್ಯಾಬಿನ್ ಲೈಟ್, ಎಸಿ ಕಂಟ್ರೊಲ್ ಮೇಲೆ ಫ್ಲಕ್ಸ್ ಮೆಟಲ್ ಗಾರ್ನಿಶ್ ಜೋಡಿಸಲಾಗಿದೆ.


Click it and Unblock the Notifications
