ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಕಿಯಾ ಸೆಲ್ಟೋಸ್ ಎಸ್‍‍ಯುವಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿ ದಾಖಲೆಗಳ ಸರದಾರ ಆಗಿದೆ. ಭಾರತದ ಗ್ರಾಹಕರು ಈ ಎಸ್‍‍ಯುವಿಯ ಆಕರ್ಷಕ ಲುಕ್ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳಿಗೆ ಫುಲ್ ಫಿದಾ ಆಗಿದ್ದಾರೆ.

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಭಾರತಿಯ ಮಾರುಕಟ್ಟೆಯಲ್ಲಿ ಕಿಯಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಎಸ್‍‍ಯುವಿಯಾದ ಸೆಲ್ಟೋಸ್ ಮಾರಾಟದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ. ದೇಶಿಯ ಮಾರುಕಟ್ಟೆಯ ಗ್ರಾಹಕರ ಗಮನ ಸೆಳೆಯುವಲ್ಲಿ ಕಿಯಾ ಸೆಲ್ಟೋಸ್ ಯಶ್ವಸಿಯಾಗಿದೆ. ಭಾರತದ ಎಸ್‍‍ಯುವಿ ಸೆಗ್‍‍ಮೆಂಟ್‍‍ನಲ್ಲಿ ಕಿಯಾ ಸೆಲ್ಟೋಸ್ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಬಿಡುಗಡೆಯಾದಾಗಿನಿಂದ ಸೆಲ್ಟೋಸ್ ಎಸ್‍‍ಯುವಿ ಜನಪ್ರಿಯವಾಗುವುದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಸದ್ಯ ಜನಪ್ರಿಯ ಕಿಯಾ ಸೆಲ್ಟೋಸ್ ಎಸ್‍ಯುವಿಗಾಗಿ ಬುಕ್ಕಿಂಗ್ ಮಾಡಿ ವಿತರಣೆಗಾಗಿ ಸಾವಿರಾರು ಗ್ರಾಹಕರು ಕಾಯುತ್ತಿದ್ದಾರೆ. ದೇಶಾದ್ಯಂತ ಲಾಕ್‌ಡೌನ್ ಮುಗಿದ ಬಳಿಕ ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ವೈಟಿಂಗ್ ಪೀರಿಯಡ್ ಅನ್ನು ಹೆಚ್ಚಿಸಬಹುದು.

MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಹೆಚ್ಚಿನ ಬುಕ್ಕಿಂಗ್ ಇರುವುದರಿಂದ ಕಿಯಾ ಸೆಲ್ಟೋಸ್ ಎಸ್‍ಯುವಿಯನ್ನು ವಿತರಿಸಲು ಸಮಯವಕಾಶ ಬೇಕಾಗುತ್ತದೆ. ಇದರಿಂದಾಗಿ ಕಿಯಾ ಮೋಟಾರ್ಸ್ ಕಂಪನಿಯು ವೈಟಿಂಗ್ ಪೀರಿಯಡ್ ಅನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ.

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಪ್ರತಿ ತಿಂಗಳು ಈ ಎಸ್‍‍ಯುವಿಯ ಮಾರಾಟ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ಕಿಯಾ ಸೆಲ್ಟೊಸ್ ಎಸ್‍ಯುವಿಯು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 81 ಸಾವಿರಕ್ಕೂ ಅಧಿಕ ಯುನಿಟ್‌ಗಳು ಮಾರಾಟವಾಗಿವೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಕಿಯಾ ಸೆಲ್ಟೋಸ್‍ ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್‍‍ನ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ , 1.5 ಲೀಟರ್ ಡೀಸೆಲ್ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ಗಳು ಸೇರಿವೆ.

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಎಸ್‍‍ಯು‍ವಿಯ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ 115 ಬಿ‍ಎಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 138 ಬಿಎಚ್‍ಪಿ ಪವರ್ ಮತ್ತು 242 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಎಲ್ಲಾ ಎಂಜಿನ್‍ಗಳು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಸಿವಿ‍ಟಿ, 1.5 ಲೀಟರ್ ಡೀಸೆಲ್‍ಗೆ ಐವಿ‍ಟಿ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 6 ಸ್ಪೀಡಿನ ಮ್ಯಾನುವಲ್ ಹಾಗೂ 7 ಸ್ಪೀಡಿನ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಅಳವಡಿಸಲಾಗಿದೆ.

ಮತ್ತಷ್ಟು ತಡವಾಗಲಿದೆ ಕಿಯಾ ಸೇಲ್ಟೋಸ್ ಎಸ್‍ಯುವಿ ವಿತರಣೆ

ಕಿಯಾ ಸೆಲ್ಟೊಸ್ ಎಸ್‍ಯುವಿಯು ಭಾರತೀಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಎಂಜಿ ಹೆಕ್ಟರ್, ನಿಸ್ಸಾನ್ ಕಿಕ್ಸ್ ಮತ್ತು ರೆನಾಲ್ಟ್ ಡಸ್ಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
20,000 Kia Seltos orders still pending, waiting period could increase soon. Read in Kannada.
Story first published: Tuesday, April 28, 2020, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X