ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಕಿಯಾ ಮೋಟಾರ್ಸ್
ಕಿಯಾ ಮೋಟಾರ್ಸ್ ಕಂಪನಿಯು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯೆಂತೆ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಮರುಚಾಲನೆ ನೀಡಿದ್ದು,ವೈರಸ್ ಭೀತಿ ಹಿನ್ನಲೆ ಆನ್‌ಲೈನ್ ಕಾರು ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ.

ಕರೋನಾ ವೈರಸ್ ಮಟ್ಟಹಾಕಲು ಲಾಕ್‌ಡೌನ್ ಅನ್ನು ಮುಂದುವರಿಸಿಕೊಂಡೆ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದೂವರೆ ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸಿವೆ. ಕಿಯಾ ಮೋಟಾರ್ಸ್ ಕೂಡಾ ಇದೀಗ ಕಾರು ಉತ್ಪಾದನೆ ಮತ್ತು ಮಾರಾಟಕ್ಕೆ ಮರುಚಾಲನೆ ನೀಡಿದ್ದು, ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದೆ.

ಸದ್ಯ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿರುವ ಉದ್ಯೋಗ ಸ್ಥಳಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು, ವೈರಸ್ ತಡೆಗಾಗಿ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಕೈಗೊಂಡು ಗ್ರಾಹಕರ ಮನೆ ಬಾಗಿಲಿಗೆ ವಾಹನ ಉತ್ಪನ್ನಗಳನ್ನು ವಿತರಣೆ ಮಾಡುತ್ತಿದೆ.

ಇನ್ನು ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಟೋ ಉದ್ಯಮವು ಕೂಡಾ ಹಲವಾರು ಬದಲಾವಣೆಯೊಂದಿಗೆ ಉದ್ಯಮ ವ್ಯವಹಾರಗಳನ್ನು ಮುನ್ನಡೆಸುವುದು ಅನಿವಾರ್ಯವಾಗಿ ಪರಿಣಮಿಸಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಉತ್ಪಾದನಾ ಘಟಕಗಳಲ್ಲಿ ಮತ್ತು ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಬಳಕೆಯನ್ನು ಕಡ್ಡಾಯಗೊಳಿಸಿವೆ.

ವಾಹನ ಮಾರಾಟ ಪ್ರಕ್ರಿಯೆಯನ್ನು ಈ ಹಿಂದೆ ನೇರವಾಗಿ ಶೋರೂಂಗಳಲ್ಲೇ ಪತ್ರವ್ಯವಹಾರ ಕೈಗೊಳ್ಳುತ್ತಿದ್ದ ಆಟೋ ಕಂಪನಿಗಳು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದು, ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಗ್ರಾಹಕರ ಮನೆ ಬಾಗಿಲಿಗೆಯೇ ವಾಹನಗಳನ್ನು ವಿತರಣೆ ಮಾಡುತ್ತಿವೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಿಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ವಿತರಣೆಗೂ ಮುನ್ನ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಛಗೊಳಿಸಿದ ನಂತರವೇ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಿವೆ.

ಇದರಿಂದ ಗ್ರಾಹಕರು ಆಟೋ ಕಂಪನಿಗಳ ಹೊಸ ಕ್ರಮ ಮಕ್ತವಾಗಿ ಸ್ವಾಗತಿಸುತ್ತಿದ್ದು, ಶೇ.70ಕ್ಕಿಂತಲೂ ಹೆಚ್ಚು ಗ್ರಾಹಕರು ಇದೀಗ ಆನ್‌ಲೈನ್ ಮೂಲಕವೇ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ಹೊಸ ಪ್ಲ್ಯಾಟ್‌ಫಾರ್ಮ್ ತೆರಿದಿರುವ ಆಟೋ ಕಂಪನಿಗಳು ವಾಹನ ಖರೀದಿಯನ್ನು ಮತ್ತಷ್ಟು ಸರಳಗೊಳಿಸಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಈ ಹಿಂದೆ ವಾಹನ ಖರೀದಿಗೂ ಮಾರಾಟ ಮಳಿಗೆಗಳಿಗೆ ಖದ್ದು ಭೇಟಿ ನೀಡಿ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದ ಗ್ರಾಹಕರೇ ಇದೀಗ ಆನ್‌ಲೈನ್ ವಾಹನ ಮಾರಾಟ ಪ್ರಕ್ರಿಯೆ ಅತಿ ಸರಳ ಮತ್ತು ಸುರಕ್ಷಾ ದೃಷ್ಠಿಯಿಂದ ಉತ್ತಮ ಕ್ರಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.


Click it and Unblock the Notifications