ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಭಾರತದಲ್ಲಿ, ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇದರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಸಹ ಅಂತಹುದೇ ನಿರ್ಧಾರವನ್ನು ತೆಗೆದುಕೊಂಡಿದೆ.

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಭಾರತೀಯ ರೈಲ್ವೆ, ಎಲ್ಲಾ ಪ್ರಯಾಣಿಕ ರೈಲುಗಳ ಸೇವೆಯನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಎಲ್ಲಾ ರೀತಿಯ ಪ್ರೀಮಿಯಂ ರೈಲುಗಳು, ಮೇಲ್ ಎಕ್ಸ್‌ಪ್ರೆಸ್ ರೈಲುಗಳು, ಪ್ರಯಾಣಿಕ ರೈಲುಗಳು ಸೇರಿದಂತೆ ದೇಶದಲ್ಲಿ ಮೇ 3ರವರೆಗೆ ಎಲ್ಲಾ ರೀತಿಯ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಕೊಂಕಣ ರೈಲ್ವೆ, ಕೋಲ್ಕತಾ ಮೆಟ್ರೋ ಹಾಗೂ ಉಪನಗರ ರೈಲು ಸೇವೆಗಳು ಸಹ ಇದೇ ನಿರ್ಧಾರವನ್ನು ತೆಗೆದುಕೊಂಡಿವೆ. ಇಂದು ಇದರ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಈ ಮೊದಲು ಭಾರತೀಯ ರೈಲ್ವೆ ಏಪ್ರಿಲ್ 14ರ ನಂತರ ಪ್ರಯಾಣಿಕರ ರೈಲು ಸಂಚಾರದ ಬಗ್ಗೆ ಘೋಷಿಸುವುದಾಗಿ ಹೇಳಿತ್ತು. ಈಗ ಬುಕ್ಕಿಂಗ್ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿದೆ. ಏಪ್ರಿಲ್ 15ರಂದು ಕೆಲವು ವಿಶೇಷ ಪ್ರೀಮಿಯಂ ರೈಲುಗಳನ್ನು ಬುಕ್ಕಿಂಗ್ ಮಾಡಲಾಗಿತ್ತು. ಇದರಿಂದಾಗಿ ರೈಲು ಸೇವೆಯನ್ನು ಆರಂಭಿಸುವ ಬಗ್ಗೆ ಗೊಂದಲಗಳಿದ್ದವು.

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಈಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಭಾರತೀಯ ರೈಲ್ವೆ ಮೇ 3ರವರೆಗೆ ಯಾವುದೇ ಪ್ಯಾಸೆಂಜರ್ ರೈಲುಗಳನ್ನು ಓಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಗತ್ಯ ಸರಕುಗಳ ಸಾಗಣೆಗಾಗಿ ಸರಕು ಸಾಗಣೆ ರೈಲುಗಳನ್ನು ಮಾತ್ರ ಓಡಿಸಲಾಗುವುದು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಕರೋನಾ ವೈರಸ್‌ನ ಸಂಕಷ್ಟದ ಸಮಯದಲ್ಲಿ ಭಾರತೀಯ ರೈಲ್ವೆ ಸರ್ಕಾರದ ಜೊತೆಗೆ ಕೈ ಜೋಡಿಸಿದೆ. ರೈಲ್ವೆ ಇಲಾಖೆಯು ತನ್ನ ಪ್ರಯಾಣಿಕ ಬೋಗಿಗಳನ್ನು ಐಸೋಲೇಷನ್ ವಾರ್ಡ್‌ಗಳಾಗಿ ಬದಲಿಸಿದೆ. ಈ ಬೋಗಿಗಳನ್ನು ದೇಶದ ಹಲವು ಭಾಗಗಳಲ್ಲಿ ಬಳಸಲಾಗುತ್ತಿದೆ.

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಕರೋನಾ ವೈರಸ್ ಶಂಕಿತ ರೋಗಿಗಳನ್ನು ಪ್ರತ್ಯೇಕವಾಗಿಡಲು 20 ಸಾವಿರಕ್ಕೂ ಹೆಚ್ಚು ಬೋಗಿಗಳನ್ನು ಐಸೋಲೇಷನ್ ವಾರ್ಡ್‌ಗಳಾಗಿ ಬದಲಿಸಲಾಗಿದೆ. ಇದಕ್ಕಾಗಿ ರೈಲು ಬೋಗಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ದೇಶಾದ್ಯಂತ ಎಲ್ಲಾ ರೀತಿಯ ಪ್ರಯಾಣವನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕೆ ರೈಲ್ವೆ ಇಲಾಖೆಯು ಪ್ರಯಾಣಿಕ ರೈಲುಗಳನ್ನು ಈ ರೀತಿ ಬಳಸಿಕೊಂಡಿದೆ. ಇದರಿಂದಾಗಿ ಆಸ್ಪತ್ರೆಗಳ ಕೊರತೆ ಉಂಟಾದರೆ ಈ ಬೋಗಿಗಳನ್ನು ಬಳಸಿ ಕೊಳ್ಳಬಹುದು.

ಮೇ 3ರವರೆಗೆ ರೈಲುಗಳ ಸಂಚಾರ ರದ್ದು

ಇದರ ಜೊತೆಗೆ ರೈಲ್ವೆ ಕಾರ್ಖಾನೆಯಲ್ಲಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ರೈಲ್ವೆ ಕ್ಯಾಂಟೀನ್‌ಗಳಲ್ಲಿ ಅಡುಗೆ ತಯಾರಿಸಿ ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

Most Read Articles

Kannada
English summary
Passenger Train services remains cancel till 3rd May. Read in Kannada.
Story first published: Tuesday, April 14, 2020, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X