ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಭಾರತದ ಬಹುತೇಕ ನಗರಗಳಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ಸಾರಿಗೆ ಬಸ್ಸುಗಳು ಕಿಕ್ಕಿರಿದು ತುಂಬಿರುತ್ತವೆ. ಇನ್ನೂ ಐಷಾರಾಮಿ ಬಸ್ಸುಗಳ ಶುಲ್ಕವು ಹೆಚ್ಚಿರುತ್ತದೆ. ಈ ಕಾರಣಕ್ಕೆ ಪ್ರಯಾಣಿಕರು ಖಾಸಗಿ ಕಂಪನಿಯ ಕ್ಯಾಬ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಖಾಸಗಿ ಕಂಪನಿಯ ಕ್ಯಾಬ್ ಗಳಲ್ಲಿ ಹೆಚ್ಚು ಐಷಾರಾಮಿತನ ಹಾಗೂ ಎಸಿ ಇರುವುದು ಇದಕ್ಕೆ ಮುಖ್ಯ ಕಾರಣ. ಇನ್ನು ಈ ವಾಹನಗಳಲ್ಲಿ ದಟ್ಟಣೆಯ ಕಿರಿಕಿರಿ ಇರುವುದಿಲ್ಲ. ನಮ್ಮದೇ ಕಾರು ಎಂಬಂತೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಇದೇ ಮಾತನ್ನು ಸಾರ್ವಜನಿಕ ಸಾರಿಗೆ ವಾಹನಗಳ ಬಗ್ಗೆ ಹೇಳಲಾಗುವುದಿಲ್ಲ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ನಿರ್ದಿಷ್ಟವಾಗಿ ಹೇಳುವುದಾದರೆ, ಕಚೇರಿ ಹಾಗೂ ಶಾಲಾ ಸಮಯದಲ್ಲಿ ಸಾರ್ವಜನಿಕ ವಲಯದ ವಾಹನಗಳಲ್ಲಿ ಪ್ರಯಾಣಿಸುವವರು ಜನ ದಟ್ಟಣೆಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಈಗ ಎಸಿ ಬಸ್ ಅನ್ನು ಕೈಗೆಟುಕುವ ದರದಲ್ಲಿ ರಸ್ತೆಗಿಳಿಸಲಾಗಿದೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಈ ವಿಶಿಷ್ಟ ಬಸ್ ಸೇವೆಯನ್ನು ಆರಂಭಿಸಿರುವುದು ಮಹಾರಾಷ್ಟ್ರದ ಮುಂಬೈನಲ್ಲಿ. ಈ ವಿಶೇಷ ಸೇವೆಯನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ಮಹಾರಾಷ್ಟ್ರದ ಅತಿದೊಡ್ಡ ಸಾರಿಗೆ ಕಂಪನಿಯಾದ ಬೆಸ್ಟ್ ಆರಂಭಿಸಿದೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಈ ಎಸಿ ಬಸ್‌ ನ ಕನಿಷ್ಠ ಶುಲ್ಕ ರೂ. 6ಗಳಾಗಿದೆ. ಮುಂಬೈನ ಡಿ 2 ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಲು ಬಯಸುವ ಪ್ರಯಾಣಿಕರು ರೂ.6 ಪಾವತಿಸಿ ಈ ಎಸಿ ಬಸ್ ನಲ್ಲಿ ಸಂಚರಿಸಬಹುದು.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಹೋಳಿ ಹಬ್ಬದ ನಂತರ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ಈ ಬಸ್ ಅನ್ನು ಆರಂಭಿಸಲಾಗಿದೆ. ಹೊಸ ಎಸಿ ಬಸ್ ಈಗಾಗಲೇ ಅಂಧೇರಿಯಿಂದ ಡಿ2 ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸುತ್ತಿದೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಇದರೊಂದಿಗೆ ಅಗ್ಗದ ಎಸಿ ಬಸ್ ಸೇವೆಯನ್ನು ನೀಡಲು ಇನ್ನೂ ಎರಡು ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ. ಅಗರ್‌ಗಢ ಚೌಕ್ ಪ್ರದೇಶದಿಂದ ಅಂಧೇರಿ ಪಶ್ಚಿಮದ ಮಜಾಜ್ (ಎಂಎಚ್‌ಎಡಿಎ) ಪ್ರದೇಶ ಹಾಗೂ ಅಗರ್‌ಗಢ ಚೌಕ್‌ನಿಂದ ಸಹರ್ ಕಾರ್ಗೋ ಕಾಂಪ್ಲೆಕ್ಸ್‌ವರೆಗಿನ ಎರಡೂ ಮಾರ್ಗಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಈ ಮಾರ್ಗಗಳಲ್ಲಿ ಈ ಅಗ್ಗದ ಎಸಿ ಬಸ್ ಗಳು ಬೆಳಿಗ್ಗೆ 6 ರಿಂದ ರಾತ್ರಿ 11 ರವರೆಗೆ ಸಂಚರಿಸಲಿವೆ. ಇದರ ನಂತರ ಈ ಬಸ್ಸುಗಳು ಮೇಲೆ ತಿಳಿಸಿದ ಮಾರ್ಗಗಳಲ್ಲಿ ಹತ್ತು ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿದೆ.

ರಸ್ತೆಗಿಳಿದ ಕಡಿಮೆ ಪ್ರಯಾಣ ದರದ ಎಸಿ ಬಸ್ಸುಗಳು

ಕಡಿಮೆ ಪ್ರಯಾಣ ದರವನ್ನು ಹೊಂದಿರುವ ಈ ಎಸಿ ಬಸ್ ಸಾಕಷ್ಟು ಜನಪ್ರಿಯವಾಗಿದೆ. ಕೈಗೆಟುಕುವ ಬಸ್ ಪ್ರಯಾಣ ದರದಿಂದಾಗಿ ಪ್ರಯಾಣಿಕರು ಸಹ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದಾರೆ.

ಸೂಚನೆ: ಇಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Article Published On: Saturday, March 14, 2020, 18:22 [IST]
English summary
Low fare AC bus in Mumbai. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+