ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಮಧ್ಯಪ್ರದೇಶ ಸರ್ಕಾರವು ಶೀಘ್ರದಲ್ಲೇ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳ ನಿರ್ಮಾಣ ಕಾರ್ಯವನ್ನು ಆರಂಭಿಸಲಿದೆ. ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವವರನ್ನು ಭೋಪಾಲ್ ಹೊರವಲಯದಲ್ಲಿರುವ ಕೊಟಕ್‌ನಲ್ಲಿರುವ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳಲ್ಲಿ ಪರೀಕ್ಷಿಸಲಾಗುವುದು.

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಈ ರೀತಿಯ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳನ್ನು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ದಲ್ಲಿ ಆರಂಭಿಸಲಾಗುವುದು. ಇದಕ್ಕಾಗಿ ಪುಣೆಯಲ್ಲಿರುವ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ (ಸಿಐಆರ್ ಟಿ) ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆ.

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಕೊರತೆಯಿಂದಾಗಿ, ಭೋಪಾಲ್ ಸೇರಿದಂತೆ ಅನೇಕ ನಗರಗಳು ಲೈಸೆನ್ಸ್ ನೀಡುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದವು. ರಾಜ್ಯಾದ್ಯಂತ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು ಆರಂಭವಾದ ನಂತರ ಈ ಸಮಸ್ಯೆ ಬಗೆಹರಿಯಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳಲ್ಲಿ ಯಾವುದೇ ಪರೀಕ್ಷೆಯ ಅಗತ್ಯವಿರುವುದಿಲ್ಲ. ಈ ವ್ಯವಸ್ಥೆಯಲ್ಲಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ವ್ಯಕ್ತಿಯನ್ನು ಲೈವ್ ಟೆಸ್ಟ್ ಕ್ಯಾಮೆರಾಗಳ ಸಹಾಯದಿಂದ ಪರೀಕ್ಷಿಸಲಾಗುತ್ತದೆ. ಟೆಸ್ಟ್ ಟ್ರ್ಯಾಕ್ ನಲ್ಲಿ ಕ್ಯಾಮೆರಾಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಿ, ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ವ್ಯಕ್ತಿಯನ್ನು ಪರೀಕ್ಷಿಸಲಾಗುತ್ತದೆ.

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಪರೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಯ ವರದಿಯನ್ನು ತಯಾರಿಸಲಾಗುತ್ತದೆ. ಆಟೋಮ್ಯಾಟಿಕ್ ಟೆಸ್ಟ್ ಗಳಲ್ಲಿ ದೋಷ ಸಂಭವಿಸುವ ಸಾಧ್ಯತೆ ಕಡಿಮೆ. ಇದರ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವಲ್ಲಿರುವ ಭ್ರಷ್ಟಾಚಾರವನ್ನು ತಡೆಗಟ್ಟಬಹುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ಈ ಅಂಕಿ ಅಂಶವು ಹೆಚ್ಚು. ಹೆಚ್ಚಿನ ಸಂಖ್ಯೆಯ ಜನರು ಅಜಾಗರೂಕತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.

ಡ್ರೈವಿಂಗ್ ಟೆಸ್ಟ್ ಸುಲಭವಾಗಿಸಲಿವೆ ಆಟೋಮ್ಯಾಟಿಕ್ ಡ್ರೈವಿಂಗ್ ಟೆಸ್ಟ್ ಸೆಂಟರ್​ಗಳು

ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯಲ್ಲಿ ಅನೇಕ ಹೊಸ ನಿಯಮಗಳನ್ನು ಸೇರಿಸಲಾಗಿದೆ. ಜೊತೆಗೆ ನಿಯಮ ಉಲ್ಲಂಘನೆಗಾಗಿ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

Most Read Articles

Kannada
English summary
Madhya Pradesh government opening automated driving test centres. Read in Kannada.
Story first published: Monday, August 24, 2020, 16:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X