ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದುಕೊಂಡ ಮಹೀಂದ್ರಾ ಅಲ್ಟುರಾಸ್ ಜಿ4

ರಾಷ್ಟ್ರಪತಿಗಳ ಬೆಂಗಾವಲು ವಾಹನಗಳ ಪಡೆಯಲ್ಲಿ ಬಹುದಿನಗಳಿಂದಲೂ ಮಹೀಂದ್ರಾ ನಿರ್ಮಾಣದ ಹಲವು ಕಾರು ಮಾದರಿಗಳು ಸ್ಥಾನ ಪಡೆದುಕೊಂಡಿದ್ದು, ಇತ್ತೀಚೆಗೆ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಅಲ್ಟುರಾಸ್ ಜಿ4 ಎಸ್‌ಯುವಿ ಮಾದರಿಯು ಇದೀಗ ಸ್ಥಾನಪಡೆದುಕೊಂಡಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಬೆಂಗಾವಲು ವಾಹನಗಳ ಪಡೆಗಳಿಗಾಗಿ ಹಲವಾರು ಮಾಡಿಫೈ ವಾಹನಗಳ ಮಾರಾಟ ಹೊಂದಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಅಲ್ಟುರಾಸ್ ಜಿ4 ಮಾದರಿಯನ್ನು ರಾಷ್ಟ್ರಪತಿಗಳ ಭವನದಲ್ಲಿನ ಮುಖ್ಯ ಬೆಂಗಾವಲು ವಾಹನಗಳ ಪಡೆಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ವಿಶೇಷ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಿಸಲಾದ ಕಾರು ಮಾದರಿಯನ್ನು ರಾಷ್ಟ್ರಪತಿ ಕಚೇರಿಯ ಜಂಟಿ ಕಾರ್ಯದರ್ಶಿಗೆ ಹಸ್ತಾಂತರ ಮಾಡಲಾಗಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಮೊದಲ ಹಂತದಲ್ಲಿ ಕೇವಲ ಒಂದು ಯನಿಟ್ ಮಾತ್ರ ಹಸ್ತಾಂತರ ಮಾಡಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಮತ್ತೊಂದು ಬ್ಯಾಚ್ ವಿತರಣೆ ಮಾಡುವ ಸಾಧ್ಯತೆಗಳಿದ್ದು, ಬೆಂಗಾವಲು ಪಡೆಗಾಗಿ ಎಷ್ಟು ಯುನಿಟ್ ಖರೀದಿ ಮಾಡಲಾಗಿದೆ ಎಂಬ ನಿಖರ ಮಾಹಿತಿಯಿಲ್ಲ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ರಾಷ್ಟ್ರಪತಿಗಳ ಬೆಂಗಾವಲು ವಾಹನಗಳ ಪಡೆಯಲ್ಲಿ ಈಗಾಗಲೇ ಹಲವಾರು ಕಾರು ಮಾದರಿಗಳಿದ್ದು, ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಮತ್ತು ಬೊಲೊರೊ ಕಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಅಲ್ಟುರಾಸ್ ಜಿ4 ಕಾರು ಮಾದರಿಯು ಟೊಯೊಟಾ ಫಾರ್ಚೂನರ್ ಕಾರು ಮಾದರಿಗೆ ಸರಿಸಮನಾದ ಕಾರ್ಯಕ್ಷಮತೆ ಮತ್ತು ಬಲಿಷ್ಠತೆ ಹೊಂದಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ರಾಷ್ಟ್ರಪತಿಗಳು ಮತ್ತು ಪ್ರಧಾನಿಗಳ ಬೆಂಗಾವಲು ವಾಹನಗಳ ಪಡೆಯಲ್ಲಿ ಟೊಯೊಟಾ ಫಾರ್ಚೂನರ್ ಕಾರುಗಳ ಸಂಖ್ಯೆ ಹೆಚ್ಚಿದ್ದು, ಇದೀಗ ಹೊಸದಾಗಿ ಸೇರ್ಪಡೆಯಾಗಿರುವ ಅಲ್ಟುರಾಸ್ ಜಿ4 ಕಾರು ಮಾದರಿಯು ಪ್ರಮುಖ ಆಕರ್ಷಣೆಯಾಗಲಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಜೊತೆಗೆ 'ಆತ್ಮ ನಿರ್ಭರ್ ಭಾರತ್' ಅಭಿಯಾನಕ್ಕೆ ಪೂರಕವಾಗಿ ರಾಷ್ಟ್ರಪತಿಗಳು ಸೇರಿದಂತೆ ಎಲ್ಲಾ ಆಡಳಿತ ವರ್ಗದವರಿಗೂ ಸ್ವದೇಶಿ ನಿರ್ಮಿತ ವಾಹನಗಳನ್ನು ಬಳಸುವಂತೆ ಕರೆ ನೀಡಲಾಗುತ್ತಿದ್ದು, ಇದರ ಪೂರಕವಾಗಿ ಮಹೀಂದ್ರಾ ಹೊಸ ಕಾರು ಮಾದರಿಗಳು ರಾಷ್ಟ್ರಪತಿಗಳ ಬೆಂಗಾವಲು ವಾಹನಗಳ ಪಡೆಯಲ್ಲಿ ಸ್ಥಾನಪಡೆದುಕೊಂಡಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

2019ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದ ಅಲ್ಟುರಾಸ್ ಜಿ4 ಎಸ್‌ಯುವಿ ಮಾದರಿಯು ಇದೀಗ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಂಡಿದ್ದು, ಬಿಎಸ್-6 ಎಂಜಿನ್ ಹೊಂದಿದ ಮೊದಲ ಕಾರು ಮಾದರಿಯನ್ನೇ ರಾಷ್ಟ್ರಪತಿಗಳ ಬೆಂಗಾವಲು ಪಡೆಗಾಗಿ ಹಸ್ತಾಂತರ ಮಾಡಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಬಿಎಸ್-6 ಅಲ್ಟುರಾಸ್ ಜಿ4 ಎಸ್‌ಯುವಿ ಮಾದರಿಯು ಸದ್ಯ ಎರಡು ಮಾದರಿಯಲ್ಲಿ ಮಾರಾಟವಾಗುತ್ತಿದ್ದು, 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 28.69 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.31.69 ಲಕ್ಷ ಬೆಲೆ ಹೊಂದಿದೆ.

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಫ್ರಂಟ್ ವೀಲ್ಹ್ ಡ್ರೈವ್ ಮತ್ತು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹೊಂದಿರುವ ಅಲ್ಟುರಾಸ್ ಜಿ4 ಎಸ್‌ಯುವಿ ಕಾರು ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಪ್ರಬಲ ಪೈಪೋಟಿಯಾಗಿದ್ದು, ಮರ್ಸಿಡಿಸ್‌ನಿಂದ ಎರವಲು ಪಡೆದುಕೊಳ್ಳಲಾದ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 180-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ಸ್ಥಾನ ಪಡೆದ ಅಲ್ಟುರಾಸ್ ಜಿ4

ಹಾಗೆಯೇ ಸುರಕ್ಷಾ ಫೀಚರ್ಸ್‌ಗಳಲ್ಲೂ ಈಗಾಗಲೇ 5-ಸ್ಟಾರ್ ರೇಟಿಂಗ್ಸ್ ಹೊಂದಿರುವ ಅಲ್ಟುರಾಸ್ ಜಿ4 ಎಸ್‌ಯುವಿ ಕಾರು ಮಾದರಿಯು ಇದೀಗ ರಾಷ್ಟ್ರಪತಿಗಳ ಮುಖ್ಯ ಬೆಂಗಾವಲು ವಾಹನಗಳಲ್ಲಿ ಸ್ಥಾನಪಡೆದುಕೊಂಡಿರುವುದು ಖುಷಿಯ ವಿಚಾರ.

Most Read Articles

Kannada
English summary
Mahindra Alturas G4 BS6 Delivered To President At Rashtrapati Bhavan. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X