ಮಹೀಂದ್ರಾ ಕಂಪನಿಯ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಮೂಹ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರಾ ಆಟೋಮೊಟಿವ್ ವಿಭಾಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ಅವರು ಇಂದು ತಮ್ಮ 15 ವರ್ಷಗಳ ಸುಧೀರ್ಘ ಸೇವೆಗೆ ರಾಜೀನಾಮೆ ನೀಡಿದ್ದಾರೆ.

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

2005ರಲ್ಲಿ ಮಹೀಂದ್ರಾ ಆಟೋಮೊಬೈಲ್ ವಿಭಾಗಕ್ಕೆ ನೇಮಕಗೊಂಡಿದ್ದ ವಿವೇಕ್ ನಾಯರ್ ಅವರು ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷರಾಗಿ ಹಲವಾರು ಬದಲಾವಣೆಗೆ ಕಾರಣರಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕೂ ಬಡ್ತಿ ಹೊಂದಿದ್ದ ವಿವೇಕ್ ನಾಯರ್ ಅವರು, ಗ್ರಾಹಕರ ಬೇಡಿಕೆ ಹೊಸ ಕಾರುಗಳ ಮಾರಾಟ ಮಾರಾಟ ಮತ್ತು ಉತ್ಪಾದನೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದರು.

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಕೆಲವೇ ವರ್ಷಗಳ ಹಿಂದಷ್ಟೇ ಪ್ರಯಾಣಿಕರ ವಾಹನ ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸುತ್ತಿದ್ದ ಮಹೀಂದ್ರಾ ಕಂಪನಿಯ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದ ವಿವೇಕ್ ನಾಯರ್ ಅವರು ಹಲವಾರು ಹೊಸ ಕಾರು ಉತ್ಪನ್ನಗಳ ಬಿಡುಗಡೆಗೆ ಶ್ರಮಿಸಿದ್ದರು.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಮಹೀಂದ್ರಾ ಕಂಪನಿಯಲ್ಲಿ ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೂ ಮುನ್ನವೇ ಆಟೋ ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿದ್ದ ವಿವೇಕ್ ನಾಯರ್, ವೋಲ್ಟಾಸ್ ಮತ್ತು ರೆಕ್ಕಿಟ್ ಬೆನ್‌ಕಿಸರ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು.

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ತದನಂತರ ಮಹೀಂದ್ರಾ ಜೊತೆಗೂಡಿ ಹಲವಾರು ಬದಲಾವಣೆಗಳನ್ನು ತರುವಲ್ಲಿ ಶ್ರಮಿಸಿರುವ ವಿವೇಕ್ ನಾಯರ್ ಇಂದು ತಮ್ಮ ಸೇವೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ 15 ವರ್ಷಗಳ ಸೇವಾ ಅವಧಿಯಲ್ಲಿ ಹಲವಾರು ಸವಿ ನೆನಪುಗಳನ್ನು ಮೆಲುಕುಹಾಕಿದ್ದಾರೆ.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಸೇವೆಗೆ ರಾಜೀನಾಮೆ ನೀಡುವುದಕ್ಕೂ ಮುನ್ನ ಕೋವಿಡ್-19 ಕಾರ್ಯಾಚರಣೆಯಲ್ಲೂ ತೊಡಗಿದ್ದಕೊಂಡಿದ್ದ ವಿವೇಕ್ ನಾಯರ್ ಅವರು ವೈರಸ್ ವಿರುದ್ದದ ಹೋರಾಟಕ್ಕಾಗಿ ಮಹೀಂದ್ರಾ ಉತ್ಪಾದನೆ ಮಾಡಿರುವ ಅಗ್ಗದ ಬೆಲೆಯ ವೆಂಟಿಲೇಟರ್‌ಗಳನ್ನು ಉತ್ಪಾದನೆಗೆ ತರುವಲ್ಲಿ ಹೆಚ್ಚು ಶ್ರಮಿಸಿದ್ದರು.

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಇನ್ನು ಮಹೀಂದ್ರಾ ಕಂಪನಿಯು ಕರೋನಾ ವಿರುದ್ದ ಹೋರಾಟದಲ್ಲಿ ಸಾಕಷ್ಟು ಶ್ರಮವಹಿಸಿದ್ದು, ಸರ್ಕಾರದ ಕರೆಗೆ ಓಗೊಟ್ಟು ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಸಾಕಷ್ಟು ಗಮನಸೆಳೆದಿದೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಮಹೀಂದ್ರಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ವಿವೇಕ್ ನಾಯರ್ ರಾಜೀನಾಮೆ

ಕರೋನಾ ವಾರಿಯರ್ಸ್‌ಗಳಿಗೆ ಉಚಿತವಾಗಿ ಫೇಸ್ ಶೀಲ್ಡ್, ಪಿಪಿಇ ಕಿಟ್, ಹಸಿದ ಕಾರ್ಮಿಕರಿಗೆ ಉಚಿತವಾಗಿ ಆಹಾರ ವಿತರಣೆ ಮಾಡಿರುವುದಲ್ಲದೇ ವಿಶೇಷ ತಂತ್ರಜ್ಞಾನದೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಜೀವ ರಕ್ಷಕ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡುತ್ತಿದೆ.

Article Published On: Thursday, May 7, 2020, 16:46 [IST]
English summary
Mahindra’s Chief Marketing Officer Vivek Nayer Resigns After 15-Years In The Organisation. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+