ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಕರೋನಾ ವೈರಸ್ ನ ಆರ್ಭಟ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ ತಿಂಗಳ ಅಂತ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈಗ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ವಾಹನ ತಯಾರಕ ಕಂಪನಿಗಳು ಸಹ ಗ್ರಾಹಕರನ್ನು ರಕ್ಷಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಗ್ರಾಹಕರನ್ನು ಕರೋನಾ ವೈರಸ್‌ನಿಂದ ರಕ್ಷಿಸಲು ಉಚಿತ ವಿಮಾ ಯೋಜನೆಯನ್ನು ನೀಡುವುದಾಗಿ ಘೋಷಿಸಿದೆ.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಆದರೆ ಈ ಯೋಜನೆಯು ಮಹೀಂದ್ರಾ ಕಂಪನಿಯ ಎಲ್ಲಾ ವಾಹನಗಳಿಗೂ ಅನ್ವಯಿಸುವುದಿಲ್ಲ. ಬದಲಿಗೆ ಇತ್ತೀಚಿಗೆ ಬಿಡುಗಡೆಯಾದ ಮಹೀಂದ್ರಾ ಬೊಲೆರೊ ಪಿಕ್-ಅಪ್ ಟ್ರಕ್ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ. ಈಗ ಬಗ್ಗೆ ಮಹೀಂದ್ರಾ ಕಂಪನಿಯು ಅಧಿಕೃತವಾಗಿ ಘೋಷಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಈ ಯೋಜನೆಯಿಂದಾಗಿ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್‌ ಗ್ರಾಹಕರಿಗೆ ರೂ.1 ಲಕ್ಷಗಳವರೆಗೆ ವಿಮೆ ದೊರೆಯಲಿದೆ. ಈ ವಿಮಾ ಯೋಜನೆ ಬೊಲೆರೊ ಪಿಕ್-ಅಪ್ ಟ್ರಕ್ ಖರೀದಿಸುವ ವ್ಯಕ್ತಿಗೆ ಮಾತ್ರವಲ್ಲದೆ ಆತನ ಸಂಗಾತಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಅವರ ಮಕ್ಕಳನ್ನು ಸಹ ಈ ವಿಮಾ ಯೋಜನೆಯಲ್ಲಿ ಸೇರಿಸಲಾಗುವುದು.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಹೊಸ ಪಿಕ್-ಅಪ್ ಟ್ರಕ್ ಖರೀದಿದಾರರ ಇಡೀ ಕುಟುಂಬವು ಮಹೀಂದ್ರಾ ಕರೋನಾ ವಿಮಾ ಯೋಜನೆಯನ್ನು ಪಡೆಯಬಹುದು. ಈ ವಿಶೇಷ ವಿಮಾ ಯೋಜನೆಯು ಹೊಸ ಟ್ರಕ್ ಖರೀದಿಸಿದ ದಿನದಿಂದ 9.5 ತಿಂಗಳುಗಳವರೆಗೆ ಮಾನ್ಯವಾಗಿರಲಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಬೊಲೆರೊ ಪಿಕ್ ಅಪ್, ಬೊಲೆರೊ ಮ್ಯಾಕ್ಸಿ ಟ್ರಕ್, ಬೊಲೆರೊ ಸಿಟಿ ಪಿಕ್ ಅಪ್ ಮತ್ತು ಬೊಲೆರೊ ಕ್ಯಾಂಪರ್‌ಗಾಗಿ ಕರೋನಾ ಉಚಿತ ವಿಮಾ ಯೋಜನೆಯನ್ನು ಪರಿಚಯಿಸಲಾಗಿದೆ. ಈ ವಿಶೇಷ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ನವೆಂಬರ್ 30ರವರೆಗೆ ಬೊಲೆರೊ ಟ್ರಕ್ ಖರೀದಿಸುವ ಗ್ರಾಹಕರು ಈ ಕರೋನಾ ಉಚಿತ ವಿಮಾ ಯೋಜನೆಯನ್ನು ಪಡೆಯಲು ಸಾಧ್ಯವಾಗುತ್ತದೆ. ವರದಿಗಳ ಪ್ರಕಾರ ಈ ತಿಂಗಳ 1ನೇ ತಾರೀಖಿನಿಂದ ಜಾರಿಯಲ್ಲಿದೆ. ಈ ಯೋಜನೆಯನ್ನು ಬೊಲೆರೊ ಪಿಕ್-ಅಪ್ ಟ್ರಕ್ ಗ್ರಾಹಕರು ಸ್ವಾಗತಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಈ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಸೇಲ್ಸ್ ಹಾಗೂ ಕಸ್ಟಮರ್ ಕೇರ್ ವಿಭಾಗದ ಉಪಾಧ್ಯಕ್ಷ ಸತಿಂದರ್ ಸಿಂಗ್ ಬಜ್ವಾ, ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಪಿಕ್-ಅಪ್ ಟ್ರಕ್ ಚಾಲಕರ ಕೊಡುಗೆ ಅಸಾಧಾರಣವಾಗಿದೆ. ಅಂತಹವರನ್ನು ರಕ್ಷಿಸಲು ಹಾಗೂ ಬೆಂಬಲಿಸಲು ನಾವು ಹೊಸ ಯೋಜನೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ದೇಶದಲ್ಲಿ ಮೊದಲ ಬಾರಿಗೆ ನಾವು ಒಂದು ವಿಶಿಷ್ಟ ಯೋಜನೆಯನ್ನು ಆರಂಭಿಸಿದ್ದೇವೆ. ನಮ್ಮ ಮೇಲೆ ಅವಲಂಬಿತರಾದವರೆಲ್ಲರೂ ಅನುಕೂಲಕರ ವಾತಾವರಣವನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ವಿಶೇಷ ಯೋಜನೆಯನ್ನು ಪಡೆಯುವುದು ಹೇಗೆ?

ಹೊಸ ಮಹೀಂದ್ರಾ ಬೊಲೆರೊ ಪಿಕ್-ಅಪ್ ಟ್ರಕ್ ಖರೀದಿಸುವ ಗ್ರಾಹಕರು ಅವರ ಹೆಸರು, ಹುಟ್ಟಿದ ದಿನಾಂಕ, ಅವರ ಕುಟುಂಬ ಸದಸ್ಯರ ಎಲ್ಲಾ ನೀಡಬೇಕು. ನಂತರ ಮಹೀಂದ್ರಾ ಕಂಪನಿಯು ವಿಮಾ ಕಂಪನಿಯೊಂದಿಗೆ ಈ ಮಾಹಿತಿಯನ್ನು ರಿಜಿಸ್ಟರ್ ಮಾಡಿ ಇನ್ಸೂರೆನ್ಸ್ ಸರ್ಟಿಫಿಕೇಟ್ ನೀಡುತ್ತದೆ.

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಈ ಮೂಲಕ ಬೊಲೆರೊ ಪಿಕ್-ಅಪ್ ಟ್ರಕ್ ಖರೀದಿಸುವ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರಲ್ಲಿ ಯಾರಾದರೂ ಕರೋನಾ ವೈರಸ್ ಸೋಂಕಿಗೆ ಒಳಗಾದರೆ ವಿಮಾ ಕಂಪನಿಯು ಸೂಚಿಸಿರುವ ಆಸ್ಪತ್ರೆಗಳಿಗೆ ಹೋಗಿ ರೂ.1 ಲಕ್ಷಗಳವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗ್ರಾಹಕರಿಗಾಗಿ ಕರೋನಾ ವಿಮಾ ಯೋಜನೆಯನ್ನು ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೊ ಪಿಕ್-ಅಪ್ ಟ್ರಕ್‌ನಲ್ಲಿ 1.5 ಲೀಟರಿನ 3 ಸಿಲಿಂಡರ್ ಎಂ-ಹಾಕ್ 75 ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 75 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

Most Read Articles

Kannada
English summary
Mahindra company introduces corona insurance plan for its customers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X