ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಮಹೀಂದ್ರಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. 2018ರ ಆಟೋ ಎಕ್ಸ್‌ಪೋ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಇದೀಗ ಗ್ರಾಹಕರ ಕೈಸೆರಲು ಸಿದ್ದವಾಗಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಹೊಸ ಕೆಯುವಿ100 ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, ಅತ್ಯುತ್ತಮ ಲೀಥಿಯಂ ಬ್ಯಾಟರಿ ಬಳಕೆಯಿಂದಾಗಿ ಹೊಸ ಕಾರಿಗೆ ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಡಿ ಸಬ್ಸಡಿ ಕೂಡಾ ಲಭ್ಯವಿದೆ. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಈಗಾಗಲೇ ಅನುಭವ ಹೊಂದಿರುವ ಮಹೀಂದ್ರಾ ಸಂಸ್ಥೆಯು ಈ ಹಿಂದಿನ ಇ-ವೆರಿಟೋ ಮತ್ತು ಇ2ಒ ಉತ್ಪಾದನಾ ಅನುಭವದೊಂದಿಗೆ ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರು ಖರೀದಿಗೆ ಗ್ರಾಹಕರ ಆಸಕ್ತಿ ಇದ್ದರೂ ದುಬಾರಿ ಬೆಲೆ ಮತ್ತು ಚಾರ್ಜಿಂಗ್ ಸ್ಟೆಷನ್‌ಗಳ ಕೊರತೆಯೂ ಕಾರು ಉತ್ಪಾದನಾ ಸಂಸ್ಥೆಗಳ ಬೃಹತ್ ಯೋಜನೆಗೆ ಹಿನ್ನಡೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಆಧಾರ ಮೇಲೆ ಮಹೀಂದ್ರಾ ಹೊಸ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ ಮಾಡಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಕೆಯುವಿ100 ಎಲೆಕ್ಟ್ರಿಕ್ ಕಾರು 54.4 ಬಿಎಚ್‌ಪಿ ಸಾಮಾರ್ಥ್ಯದ 40kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಮುಂಭಾಗದ ಚಕ್ರಗಳಿಗೆ ಶಕ್ತಿ ಪೂರೈಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಇದು ನಗರಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದು, ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ಮೂಲಕ ಪೂರ್ಣಪ್ರಮಾಣದ ಚಾರ್ಜಿಂಗ್ ಮಾಡಲು 5 ಗಂಟೆ 45 ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆ ಮಾಡಿಕೊಂಡಲ್ಲಿ ಬೆಲೆ ತುಸು ದುಬಾರಿಯಾದರೂ ಕೇವಲ 55 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಿಕೊಳ್ಳಬಹುದಾದು. ಹೀಗಾಗಿ ಇದು ಅರ್ಬನ್ ಕಮ್ಯುನಿಟಿ ಆಯ್ಕೆಗೆ ಹೆಚ್ಚು ಸೂಕ್ತವಾಗಿದ್ದು, ದೂರದ ಪ್ರಯಾಣಕ್ಕೆ ಅಷ್ಟಾಗಿ ಯೋಗ್ಯವಾಗಿಲ್ಲ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಇನ್ನುಳಿದಂತೆ ಹೊಸ ಕಾರಿನ ಡಿಸೈನ್ ಮತ್ತು ತಾಂತ್ರಿಕ ಅಂಶಗಳು ಸಾಮಾನ್ಯ ಕೆಯುವಿ100 ಕಾರಿಗಿಂತಲೂ ವಿಭಿನ್ನವಾಗಿದ್ದು, ವೃತ್ತಾಕಾರವಾಗಿರುವ ಬ್ಯಾನೆಟ್, ಆಕರ್ಷಕ ಬಂಪರ್ ಡಿಸೈನ್ ಮೂಲಕ ಗ್ರಾಹಕರನ್ನು ಸೆಳೆಯಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಇನ್ನು ಹೊಸ ಕಾರಿನಲ್ಲಿ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಗೆ ಮಾತ್ರವೇ ಒತ್ತು ನೀಡದ ಮಹೀಂದ್ರಾ ಸಂಸ್ಥೆಯು ಪ್ರಯಾಣಿಕ ಸುರಕ್ಷತೆ ಮತ್ತು ಗುಣಮಟ್ಟದ ಮೇಲೂ ಹೆಚ್ಚಿನ ಗಮನಹರಿಸಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಸದ್ಯ ಮಹೀಂದ್ರಾ ಸಂಸ್ಥೆಯು ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಭವಿಷ್ಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರು ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್ ಬಿಡುಗಡೆ

ಇದೀಗ ವಿಶೇಷ ಫೀಚರ್ಸ್ ಮತ್ತು ಅತ್ಯುತ್ತಮ ಬ್ಯಾಟರಿ ಆಯ್ಕೆ ಹೊಂದಲಿರುವ ಕೆಯುವಿ100 ಎಲೆಕ್ಟ್ರಿಕ್ ಕಾರು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಿದ್ದು, ಬಿಡುಗಡೆಗೆ ಸಜ್ಜಾಗಿರುವ ವ್ಯಾಗನ್‌ಆರ್ ಎಲೆಕ್ಟ್ರಿಕ್ ಮತ್ತು ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿಗೆ ಇದು ಪೈಪೋಟಿಯಾಗಲಿದೆ.

Most Read Articles

Kannada
English summary
Mahindra has launched eKUV100 electric SUV in India priced at Rs.8.25 lakh (Ex-Showroom, Delhi). Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X