ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಕರೋನಾ ವೈರಸ್‌ನಿಂದ ಇಡೀ ವಿಶ್ವವೇ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ವೈರಸ್ ವಿರುದ್ಧದ ಹೋರಾಟಕ್ಕೆ ಹಲವು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಭಾರತದಲ್ಲೂ ಸಹ ವಾಣಿಜ್ಯ ಚಟುವಟಿಕೆಗಳು ಮತ್ತು ಸಂಚಾರ ಸೌಲಭ್ಯಗಳು ಸಂಪೂರ್ಣ ಸ್ತಬ್ಧಗೊಂಡಿದ್ದು, ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಲಾಕ್ ಡೌನ್ ಆದ ಪರಿಣಾಮ ಆಟೋ ಉದ್ಯಮವು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ನಷ್ಟದ ನಡುವೆಯೂ ಸರ್ಕಾರದ ಜೊತೆ ಕೈಜೋಡಿಸಿರುವ ಆಟೋ ಕಂಪನಿಗಳು ಗರಿಷ್ಠ ಪ್ರಮಾಣದ ದೇಣಿಗೆ ನೀಡಿರುವುದಲ್ಲದೆ ಗ್ರಾಹಕರ ಸೇವೆಗಳನ್ನು ಹೆಚ್ಚಿಸಲು ನಿರ್ಧರಿಸಿವೆ. ಹೊಸ ವಾಹನಗಳ ವಾರಂಟಿ ಅವಧಿಯನ್ನು ಹೆಚ್ಚಿಸುವುದರ ಜೊತೆಗೆ ನಿಗದಿತ ಅವಧಿಯಲ್ಲಿ ಆಗಬೇಕಿದ್ದ ಸರ್ವೀಸ್‌ಗಳನ್ನು ಶೀಘ್ರದಲ್ಲೇ ಒದಗಿಸುವ ಬಗ್ಗೆ ಮಹೀಂದ್ರಾ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗೆ ಮಾಹಿತಿ ನೀಡಿದೆ.

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಇನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪನಿಗಳು ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿವೆ.

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಇದೀಗ ಕಾರು ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ವೆಂಟಿಲೆಟರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಣೆಯ ಮೂರು ವೆಂಟಿಲೆಟರ್ ಮಾದರಿಗಳ ಪೋಟೋಟೈಪ್ ಮಾದರಿಗಳನ್ನು ಕೇವಲ 48 ಗಂಟೆಗಳಲ್ಲಿ ಅಭಿವೃದ್ದಿಗೊಳಿಸಿ ಬಹಿರಂಗಪಡಿಸಿದೆ.

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಅತ್ಯುತ್ತಮ ಗುಣಮಟ್ಟದೊಂದಿಗೆ ಬೆಲೆಯಲ್ಲೂ ಗಮನಸೆಳೆಯಲಿದ್ದು, ಬೆಲೆ ಮಾಹಿತಿಯನ್ನು ಕೂಡಾ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಒಂದು ವೆಂಟಿಲೆಟರ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.5 ಲಕ್ಷದಿಂದ ರೂ.7 ಲಕ್ಷ ಬೆಲೆ ಹೊಂದಿದ್ದು, ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ವೆಂಟಿಲೆಟರ್ ಸೌಲಭ್ಯವು ಸೀಮಿತ ಸಂಖ್ಯೆಯಲ್ಲಿದೆ. ಆದರೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕೇವಲ 48 ಗಂಟೆಗಳಲ್ಲಿ ಸಿದ್ದಗೊಂಡಿರುವ ಈ ಹೊಸ ವೆಂಟಿಲೆಟರ್‌ಗಳ ಬೆಲೆಯು ಕೇವಲ ರೂ.7,500ಕ್ಕಿಂತಲೂ ಕಡಿಮೆ ಬೆಲೆ ಪಡೆದು

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಮಹೀಂದ್ರಾ ಉತ್ಪಾದನೆ ಮಾಡುತ್ತಿರುವ ವೆಂಟಿಲೆಟರ್‌ಗಳು ಗಾತ್ರದಲ್ಲಿ ದೀರ್ಘ ಬಾಳಕೆಯ ವೆಂಟಿಲೆಟರ್‌ಗಳಿಂತಲೂ ತುಸು ಕಡಿಮೆ ಸಾಮಾರ್ಥ್ಯವನ್ನು ಹೊಂದಿರಲಿದ್ದು, ತುರ್ತು ಸಂದರ್ಭದಲ್ಲಿ ಇವುಗಳು ಸಾಕಷ್ಟು ಅನುಕೂಲಕರವಾಗಲಿವೆ.

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿರುವ ಈ ವೆಂಟಿಲೆಟರ್‌ಗಳನ್ನು ಮನೆಗಳಲ್ಲಿರುವ ದೀರ್ಘ ಕಾಲದ ರೋಗಿಗಳ ಆರೈಕೆಗೂ ಕೂಡಾ ಬಳಕೆ ಮಾಡಬಹುದಾಗಿದ್ದು, ಕೇವಲ 5ರಿಂದ 7 ಕೆ.ಜಿ ತೂಕವನ್ನು ಹೊಂದಿರಲಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಪೋಟೋಟೈಪ್ ಮಾದರಿಗಳನ್ನು ಸದ್ಯ ಅನಾವರಣಗೊಳಿಸಿರುವ ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಸರ್ಕಾರದಿಂದ ಅನುಮೊದನೆ ತೆಗೆದುಕೊಳ್ಳಲಿದ್ದು, ಅಗತ್ಯವಿರುವ ರಾಜ್ಯಗಳಿಗೆ ಪೂರೈಕೆಯನ್ನು ಆರಂಭಿಸಲಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 6.60 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 30 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 6.60 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.42 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.5 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಕರೋನಾ ವೈರಸ್ ಎಫೆಕ್ಟ್- ಸರ್ವೀಸ್, ವಾರಂಟಿ ಅವಧಿಯನ್ನು ಹೆಚ್ಚಿಸಿದ ಮಹೀಂದ್ರಾ

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್‌ ಉತ್ಪಾದನೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

More from DriveSpark

Article Published On: Sunday, March 29, 2020, 12:20 [IST]
English summary
Mahindra has extended warranty and scheduled services period for its vehicle customers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+