ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಉಚಿತ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ಅಂಗಸಂಸ್ಥೆಯಾದ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯು ಕರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಂಕಷ್ಟದ ಸಮಯದಲ್ಲಿ ಅಗತ್ಯವಿರುವವರಿಗೆ ಉಚಿತ ಕ್ಯಾಬ್ ಸೇವೆ ಆರಂಭಿಸಿದೆ.

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಕರೋನಾ ವೈರಸ್ ಮಾಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ. ಸರ್ಕಾರದ ಕರೆ ಓಗೊಟ್ಟು ಸಹಾಯಕ್ಕೆ ನಿಂತಿರುವ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ದೇಶದ ಜನಪ್ರಿಯ ಆಟೋ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಮತ್ತು ಅದರ ಸಮೂಹ ಸಂಸ್ಥೆಗಳು ಕೂಡಾ ಕರೋನಾ ವಿರುದ್ಧ ಹೋರಾಟಕ್ಕಾಗಿ ಭಾರೀ ಪ್ರಮಾಣದ ದೇಣಿಗೆ ನೀಡುವುದರ ಜೊತೆಗೆ ಜನಸೇವೆಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ.

MOST READ: ಲಾಕ್‌ಡೌನ್‌ನಿಂದ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5,000..!

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಅಲೆಟೆ ಸಂಸ್ಥೆಯ ಜೊತೆಗೂಡಿ ಉಚಿತವಾಗಿ ತುರ್ತು ಕ್ಯಾಬ್ ಸೇವೆಯನ್ನು ಆರಂಭಿಸಿರುವ ಮಹೀಂದ್ರಾ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರಮುಖ ನಗರಗಳಿಗೆ ಹೊಸ ಕ್ಯಾಬ್ ಸೇವೆಯನ್ನು ವಿಸ್ತರಣೆ ಮಾಡುತ್ತಿದ್ದು, ಇದೀಗ ನಮ್ಮ ಬೆಂಗಳೂರಿನಲ್ಲೂ ಉಚಿತ ಕ್ಯಾಬ್ ಸೇವೆಗೆ ಚಾಲನೆ ನೀಡಿದೆ.

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಪೊಲೀಸ್ ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಲೆಟ್ ಸಂಸ್ಥೆಯು ಅಗತ್ಯವಿರುವ ವೃದ್ದರಿಗೆ, ವಿಶೇಷ ಚೇತನರಿಗೆ, ಮಹಿಳೆಯರಿಗೆ ಮತ್ತು ತುರ್ತು ಸೇವೆಗಳನ್ನು ನಿರ್ವಹಿಸುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಉಚಿತವಾಗಿ ಕ್ಯಾಬ್ ಸೇವೆಯನ್ನು ನೀಡಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಈ ಮೊದಲು ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಉಚಿತ ಕ್ಯಾಬ್ ಸೇವೆಗೆ ನೀಡಿದ್ದ ಮಹೀಂದ್ರಾ ಲಾಜಿಸ್ಟಿಕ್ ಸಂಸ್ಥೆಯು ಇದೀಗ ಬೆಂಗಳೂರಿನಲ್ಲೂ ಆರಂಭಿಸಿರುವುದು ಲಾಕ್‌ಡೌನ್ ವೇಳೆ ಸಾರಿಗೆ ಇಲ್ಲದೆ ಪರದಾಡುವ ಸಾವಿರಾರು ಜನರಿಗೆ ಅನುಕೂಲಕವಾಗಲಿದೆ.

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಮಹೀಂದ್ರಾ ಲಾಜಿಸ್ಟಿಕ್ ಆರಂಭಿರುವ ಉಚಿತ ಕ್ಯಾಬ್ ಸೇವೆಯು ಬೆಂಗಳೂರು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಪೊಲೀಸ್ ಇಲಾಖೆಯ ನಿರ್ದೇಶನ ಮೇಲೆ ಕಾರ್ಯನಿರ್ವಹಣೆ ಮಾಡುವ ಮೂಲಕ ಅಗತ್ಯ ಜನರಿಗೆ ಅನುಕೂಲಕರ ಮಾಡಿಕೊಡುತ್ತಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕೋವಿಡ್ 19: ನಮ್ಮ ಬೆಂಗಳೂರಿನಲ್ಲೂ ಎರ್ಮಜೆನ್ಸಿ ಕ್ಯಾಬ್ ಸೇವೆ ಆರಂಭಿಸಿದ ಮಹೀಂದ್ರಾ

ಇದಲ್ಲದೆ ಮಹೀಂದ್ರಾ ಆಟೋ ಕಂಪನಿಯು ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗೆ ವೈರಸ್ ತಗುಲದಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೇಸ್ ಶೀಲ್ಡ್, ಏರೋಸೊಲ್ ಬಾಕ್ಸ್ ನಿರ್ಮಾಣ ಮಾಡಿ ವಿತರಣೆ ಮಾಡುತ್ತಿದೆ.

Most Read Articles

Kannada
English summary
Mahindra Logistics Limited Extends Alyte Emergency Cab Services To Bangalore City. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X