Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಮರಾಜೋ ಬಿಎಸ್ 6 ಎಂಪಿವಿ ಮಾದರಿಗಳಲ್ಲಿರುವ ಫೀಚರ್ಗಳಿವು
ಖ್ಯಾತ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಇತ್ತೀಚಿಗೆ ತನ್ನ ಮರಾಜೋ ಎಂಪಿವಿಯ ಬಿಎಸ್ 6 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯು ಈ ಎಂಪಿವಿಯನ್ನು ಎಂ 2, ಎಂ 4 ಪ್ಲಸ್ ಹಾಗೂ ಎಂ 6 ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ.

ಎಲ್ಲಾ ಮೂರು ಮಾದರಿಗಳಲ್ಲಿ ಕಂಪನಿಯು 7 ಹಾಗೂ 8 ಸೀಟುಗಳ ಆಯ್ಕೆಯನ್ನು ನೀಡಿದೆ. ಮರಾಜೋದ ಬಿಎಸ್ 6 ಆವೃತ್ತಿಯಲ್ಲಿ ಎಂ 4 ಪ್ಲಸ್ ಹಾಗೂ ಎಂ 6 ಪ್ಲಸ್ ಮಾದರಿಗಳನ್ನು ಸೇರಿಸಲಾಗಿದ್ದರೆ, ಬಿಎಸ್ 4 ಆವೃತ್ತಿಯ ಎಂ 4, ಎಂ 6 ಹಾಗೂ ಫುಲ್ಲಿ ಲೋಡೆಡ್ ಎಂ 8 ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಮಹೀಂದ್ರಾ ಮರಾಜೋ ಬಿಎಸ್ 6ನ ಮೂರು ಮಾದರಿಗಳು ಹಾಗೂ ಅವುಗಳಲ್ಲಿರುವ ಫೀಚರ್ಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಹೀಂದ್ರಾ ಮರಾಜೋ ಎಂ 2 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.11.25 ಲಕ್ಷಗಳಾಗಿದೆ. ಈ ಮಾದರಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಫ್ರಂಟ್ ಸೀಟ್ ಬೆಲ್ಟ್ ರಿಮ್ಯಾಂಡರ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳಿವೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇದರ ಜೊತೆಗೆ 16 ಇಂಚಿನ ಸ್ಟೀಲ್ ವ್ಹೀಲ್, ಏರ್ ಕಂಡಿಷನ್, ಹಿಂಭಾಗದಲ್ಲಿ ಏರ್-ಕಾನ್ ವೆಂಟ್, ಪವರ್ ವಿಂಡೋಸ್, ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಗಳನ್ನು ನೀಡಲಾಗಿದೆ. ಎಂ 4 ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.37-ರೂ.12.45 ಲಕ್ಷಗಳಾಗಿದೆ.

ಈ ಮಾದರಿಯಲ್ಲಿ ಎಂ 2 ಕೆ ಯುಎಸ್‌ಬಿ, ಎಯುಎಕ್ಸ್, ಬ್ಲೂಟೂತ್ ಕನೆಕ್ಟಿವಿಟಿ, ರೇರ್ ಡಿಫೋಗರ್, 16 ಇಂಚಿನ ಅಲಾಯ್ ವ್ಹೀಲ್, ಎಲೆಕ್ಟ್ರಿಕ್ ಅಡ್ಜಸ್ಟ್ ವಿಂಗ್ ಮಿರರ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟಬಲ್, ರಿಮೋಟ್ ಸೆಂಟ್ರಲ್ ಲಾಕಿಂಗ್, ಮಿಡ್ -ರೋ ಸೇಂಟ್ ಆರ್ಮ್‌ರೆಸ್ಟ್, ಹಿಂಭಾಗದಲ್ಲಿ ವೈಪರ್, ವಾಷರ್ ಹಾಗೂ ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್ಗಳನ್ನು ನೀಡಲಾಗಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಂ 6 ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.51-ರೂ.13.59 ಲಕ್ಷಗಳಾಗಿದೆ. ಈ ಮಾದರಿಯಲ್ಲಿ 7 ಇಂಚಿನ ಟಚ್-ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆನ್-ಬೋರ್ಡ್ ನ್ಯಾವಿಗೇಷನ್, ಕಾರ್ನರಿಂಗ್ ಫಂಕ್ಷನ್ ಗಳಿವೆ.

ಇದರ ಜೊತೆಗೆ ಫಾಗ್-ಲ್ಯಾಂಪ್, ರೇರ್-ವೀವ್ ಕ್ಯಾಮೆರಾ, ಫಾಲೋ-ಮಿ-ಹೋಮ್ ಫಂಕ್ಷನ್ ಹೊಂದಿರುವ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, 17 ಇಂಚಿನ ಅಲಾಯ್ ವ್ಹೀಲ್ಸ್, ಆಟೋ ಕ್ಲೈಮೇಟ್ ಕಂಟ್ರೋಲ್, ಅಡ್ಜಸ್ಟಬಲ್ ಲುಂಬರ್ ಸಪೋರ್ಟ್ ಹಾಗೂ ಒನ್-ಟಚ್ ಡ್ರೈವರ್ ವಿಂಡೋಗಳನ್ನು ನೀಡಲಾಗಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮರಾಜೋ ಎಂಪಿವಿಯಲ್ಲಿ 1.5 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,500 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಹಾಗೂ 1750 ರಿಂದ 2500 ಆರ್‌ಪಿಎಂನಲ್ಲಿ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಮಹೀಂದ್ರಾ ಮರಾಜೋ ಎಂಪಿವಿಯನ್ನು 1.5 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.