ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಲಿದೆ ಮಹೀಂದ್ರಾ ಮರಾಜೋ
ಮಹೀಂದ್ರಾ ಕಂಪನಿಯು ಬಿಎಸ್-6 ಮರಾಜೋ ಎಂಪಿವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಮಹೀಂದ್ರಾ ಮಾರಾಜೋ ಎಂಪಿವಿನಲ್ಲಿ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ.

ಮರಾಜೋ ಎಂಪಿವಿಯಲ್ಲಿ ಹೊಸ 1.5 ಲೀಟರ್ ಜಿ15 ಟರ್ಬೋ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಈ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ 162 ಬಿಹೆಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಬಿಡುಗಡೆಯ ನಂತದ ದಿನಗಳಲ್ಲಿ ನೀಡಬಹುದು. ಹೊಸ ಎಂಜಿನ್ ಆಯ್ಕೆಯಿಂದ ಈ ಮಹೀಂದ್ರಾ ಮರಾಜೋ ಎಂಪಿವಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ.

ಬಿಎಸ್-6 ಮರಾಜೋ ಎಂಪಿವಿಯಲ್ಲಿ ಈ ಎಂಜಿನ್ ಅನ್ನು ಅಳವಡಿಸಿದ ಬಳಿಕ ಮಹೀಂದ್ರಾ ಕಂಪನಿಯ ಸರಣಿಯಲ್ಲಿರುವ ಇತರ ಎಸ್‍ಯುವಿ ಮತ್ತು ಎಂಪಿವಿಗಳಲ್ಲಿ ಆಳವಡಿಸುವ ಸಾಧ್ಯತೆಗಳಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವ ಸಾಂಗ್‌ಯಾಂಗ್ ಕೊರಂಡೊ ಎಸ್‌ಯುವಿಯಲ್ಲಿ ಇದೇ ಎಂಜಿನ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ಬಿಎಸ್-6 ಮರಾಜೋ ಎಂಪಿವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಹುದು ಎಂದು ನಿರೀಕ್ಷಿಸುತ್ತೇವೆ. ಬಿಎಸ್-6 ಮರಾಜೋ ಎಂಪಿವಿಯನ್ನು ಟರ್ಬೊ-ಪೆಟ್ರೋಲ್ ಎಂಜಿನ್ ನೊಂದಿಗೆ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ತಿಳಿದುಬಂದಿಲ್ಲ.

ಮರಾಜೋ ಎಂಪಿವಿಯನ್ನು ಇನ್ನು ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಈ ಎಂಪಿವಿಯು ಒಂದೇ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್‌ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಎಂಜಿನ್ ಅನ್ನು ಸ್ಟ್ಯಾಂಡರ್ಡ್ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಇದೇ ರೀತಿಯ ಪವರ್ ಮತ್ತು ಟಾರ್ಕ್ ಅಂಕಿ ಅಂಶ ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಮರಾಜೋ ಎಂಟು ಸೀಟುಗಳ ಅಥವಾ ಏಳು ಸೀಟುಗಳ ಆಯ್ಕೆಯ ಎಂಪಿವಿಯಾಗಿದೆ. ಬಿಎಸ್-6 ಮರಾಜೋ ಎಂಪಿವಿಯು ಕೂಡ ಇದೇ ಮಾದರಿಯಲ್ಲಿರುತ್ತದೆ. ಯಾವುದೇ ಬದಲಾವಣೆಗಳಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಈ ಎಂಪಿವಿಯಲ್ಲಿ ಕೆಲವು ಹೊಸ ಫೀಚರ್ ಗಳನ್ನು ಅಳವಡಿಸುವ ಸಾಧ್ಯತೆಗಳಿದೆ.
MOST READ: ದಕ್ಷಿಣ ಆಫ್ರಿಕಾಗೂ ಲಗೆಯಿಟ್ಟ ಮೇಡ್ ಇನ್ ಇಂಡಿಯಾ ಎಸ್-ಪ್ರೆಸ್ಸೊ

ಬಿಎಸ್-4 ಮಹೀಂದ್ರಾ ಮರಾಜೋ ಎಂಪಿವಿ ಆರಂಭಿಕ ಬೆಲೆಯು ರೂ.9.99 ಲಕ್ಷಗಳಾದರೆ ಟಾಪ್ ಸ್ಪೆಕ್ ರೂಪಾಂತರದ ಬೆಲೆ ರೂ.14.76 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಆದರೆ ಬಿಎಸ್-6 ಮರಾಜೋ ಎಂಪಿವಿಯ ಬೆಲೆಯನ್ನು ಮಹೀಂದ್ರಾ ಕಂಪನಿಯು ತುಸು ಹೆಚ್ಚಿಸುವ ಸಾಧ್ಯತೆಗಳಿದೆ.

ಮಹೀಂದ್ರಾ ಮರಾಜೋ ಕಂಪನಿಯು ಸಮರ್ಥ ಎಂಪಿವಿಯಾಗಿದೆ. ಅಲ್ಲದೇ ಈ ಎಂಪಿವಿಯ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಈ ಮಹೀಂದ್ರಾ ಮರಾಜೋ ಎಸ್‍ಯುವಿಯಲ್ಲಿ ಟರ್ಬೋ ಎಂಜಿನ್ ಅನ್ನು ಅಳವಡಿಸಿದಾಗ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications