ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನ ಘಟಕವು ಇ-ಮೊಬಿಲಿಟಿ ಕಂಪನಿಯಾದ ಆರ್‌ಇಇ ಆಟೋಮೋಟಿವ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಭಾಗಿತ್ವದಲ್ಲಿ ಎರಡೂ ಕಂಪನಿಗಳು ಜಾಗತಿಕ ಮಾರುಕಟ್ಟೆಗಾಗಿ ಕಮರ್ಷಿಯಲ್ ವಾಹನಗಳನ್ನು ಉತ್ಪಾದಿಸಲಿವೆ.

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಈ ಸಹಭಾಗಿತ್ವದ ಭಾಗವಾಗಿ ಮಹೀಂದ್ರಾ ಕಂಪನಿಯು ಆರ್‌ಇಇಯ ಎಲೆಕ್ಟ್ರಿಕ್ ವೆಹಿಕಲ್ ಕಾರ್ನರ್ ಮಾಡ್ಯೂಲ್ ಹಾಗೂ ಪ್ಲಾಟ್‌ಫಾರಂ ಟೆಕ್ನಾಲಜಿಯನ್ನು ಇಂಟಿಗ್ರೇಟೆಡ್ ಪವರ್‌ಟ್ರೇನ್‌, ವ್ಹೀಲ್ ಆರ್ಕ್ ಗಳಿಗಾಗಿ ಸಸ್ಪೆಂಷನ್ ಹಾಗೂ ಸ್ಟೀಯರಿಂಗ್ ಘಟಕಗಳನ್ನು ಬಳಸಲಿದೆ ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ವಿನ್ಯಾಸ, ಎಂಜಿನಿಯರಿಂಗ್, ಸೋರ್ಸಿಂಗ್ ಸಾಮರ್ಥ್ಯ ಹಾಗೂ ಉತ್ಪಾದನಾ ಸ್ವತ್ತುಗಳನ್ನು ಈ ಸಹಭಾಗಿತ್ವದಲ್ಲಿ ಬಳಸಲಿದೆ. ಆರ್‌ಇಇನ ಆರ್ಕಿಟೆಕ್ಚರ್ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಮಹೀಂದ್ರಾ ಕಂಪನಿ ಹೇಳಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಆರ್‌ಇಇ ಜೊತೆಗಿನ ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಆಟೋ ಹಾಗೂ ಫಾರಂ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಶ್ ಜೆಜುರಿಕರ್ ರವರು ಆರ್‌ಇಇಯೊಂದಿಗಿನ ನಮ್ಮ ಸಹಯೋಗವು ನಮ್ಮ ಸಾಮರ್ಥ್ಯದ ಮೇಲೆ ಬಂಡವಾಳ ಹೂಡುವ ವಾಹನಗಳ ಹೊಸ ಯುಗಕ್ಕೆ ಅಡ್ಡಿಪಡಿಸುವ ವಿಧಾನಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಸಾಂಪ್ರದಾಯಿಕ ವಾಹನ ವ್ಯವಸ್ಥೆ ವಿನ್ಯಾಸ, ಎಂಜಿನಿಯರಿಂಗ್, ಸೋರ್ಸಿಂಗ್ ಪರಿಸರ ವ್ಯವಸ್ಥೆ ಹಾಗೂ ಉತ್ಪಾದನಾ ಸಾಮರ್ಥ್ಯದಲ್ಲಿನ ನಮ್ಮ ಅನುಭವವು ಆರ್‌ಇಇನ ಕಾರ್ನರ್ ಮಾಡ್ಯುಲರ್ ಆರ್ಕಿಟೆಕ್ಚರ್ ಮಾರುಕಟ್ಟೆಯಲ್ಲಿನ ಸ್ಪರ್ಧೆಯಿಂದ ಪ್ರಯೋಜನ ಪಡೆಯುತ್ತದೆ ಎಂದು ಅವರು ಹೇಳಿದರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಈ ಸಹಭಾಗಿತ್ವದಿಂದಾಗಿ ಆರ್‌ಇಇ ತನ್ನ ಜಾಗತಿಕ ಗ್ರಾಹಕರಿಗೆ ಅಗತ್ಯವಿರುವ 200,000 ರಿಂದ 2,50,000 ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನ ಘಟಕಗಳನ್ನು ಕೆಲವು ವರ್ಷಗಳಲ್ಲಿ ಪೂರೈಸಲು ಸಾಧ್ಯವಾಗಲಿದೆ. ಇದು ಮಹೀಂದ್ರಾ ಕಂಪನಿಯ ಸಂಭಾವ್ಯ ದೇಶಿಯ ಹಾಗೂ ಅಂತರರಾಷ್ಟ್ರೀಯ ಆವೃತ್ತಿಗಳ ಬಗ್ಗೆಯೂ ತಿಳಿಸುತ್ತದೆ.

ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಉತ್ಪಾದನೆಗಾಗಿ ಆರ್‌ಇಇ ಆಟೋಮೋಟಿವ್‌ನೊಂದಿಗೆ ಕೈಜೋಡಿಸಿದ ಮಹೀಂದ್ರಾ

ಈ ಸಹಭಾಗಿತ್ವವು ಜಾಗತಿಕ ಹಾಗೂ ದೇಶಿಯ ಮಾರುಕಟ್ಟೆಗಳಲ್ಲಿ ಹೆಚ್ಚುವರಿ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಆರ್‌ಇಇನ ಟ್ರಾನ್ಸ್ ಫಾರ್ಮೆಷನ್ ಟೆಕ್ನಾಲಜಿಯನ್ನು ಸ್ವಾಯತ್ತ ವಾಹನಗಳು ಸೇರಿದಂತೆ ಪ್ರಸ್ತುತ ಹಾಗೂ ಭವಿಷ್ಯದ ಇ-ಮೊಬಿಲಿಟಿ ಅಪ್ಲಿಕೇಶನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
Mahindra REE Automotive signs MOU for electric commercial vehicle production. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X