ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಎಕ್ಸ್‌ಯುವಿ 500 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು, ಈ ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13.20 ಲಕ್ಷಗಳಾಗಿದೆ.

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

ಹೊಸ ಮಹೀಂದ್ರಾ ಎಸ್‍ಯುವಿಯ ಯು‍‍ನಿ‍‍ಟ್‍ಗಳನ್ನು ದೇಶಾದ್ಯಂತ ಇರುವ ಡೀಲರ್ ಗಳಿಗೆ ರವಾನಿಸಲಾಗುತ್ತಿದೆ. ಈ ಎಸ್‍ಯುವಿಯ ಯು‍‍ನಿ‍‍ಟ್‍ಗಳು ಮುಂದಿನ ಜೂನ್ ತಿಂಗಳಲ್ಲಿ ಡೀಲರ್ ಬಳಿ ತಲುಪಬಹುದು ಎಂದು ನಿರೀಕ್ಷಿಸುತ್ತೇವೆ. ಮೊದಲ ಹಂತದಲ್ಲಿ ಕೇವಲ 55 ಕಾರುಗಳನ್ನು ಹಂಚಿಕೆ ಮಾಡಲಾಗಿದೆ. ಎಕ್ಸ್‌ಯುವಿ 500 ಉತ್ಪಾದನೆಯು ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಹಂತ ಹಂತವಾಗಿ ಈ ಎಸ್‍ಯುವಿಯನ್ನು ಡೀಲರ್ ಗಳಿಗೆ ರಾವನಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

ಮಹಿಂದ್ರಾ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಈ ಎಸ್‍ಯುವಿಗಾಗಿ ಅಧಿಕೃತವಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿತ್ತು. ಬಿಎಸ್-6 ಎಕ್ಸ್‌ಯುವಿ 500 ಎಸ್‍ಯುವಿಗಾಗಿ ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಲಾಕ್‌ಡೌನ್ ಮುಗಿದ ಬಳಿಕ ಬಿಡುಗಡೆಯಾಗಲಿದೆ 2020ರ ಮಹೀಂದ್ರಾ ಥಾರ್

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯು ಡಬ್ಲ್ಯು5, ಡಬ್ಲ್ಯು7, ಡಬ್ಲ್ಯು9 ಮತ್ತು ಡಬ್ಲ್ಯು11 (ಒ) ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ಬೇಸ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.13.20 ಲಕ್ಷ ಗಳಾದರೆ, ಟಾಪ್ ಸ್ಪೇಕ್ ಡಬ್ಲ್ಯು11 (ಒ) ರೂಪಾಂತರದ ಬೆಲೆಯು ರೂ.17.70 ಲಕ್ಷಗಳಾಗಿದೆ.

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

2020ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 155 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

MOST READ: ಖಚಿತವಾಗದ ಬಹುನಿರೀಕ್ಷಿತ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

2020ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಹೊಸ ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 155 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ,

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

2020ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಎಸ್‍ಯುವಿಯಲ್ಲಿ ಗ್ರಿಲ್ ಕ್ರೋಮ್, ಸ್ಪ್ಲಿಟ್ ಟೈಲ್ ಲೈಟ್ಸ್, ಎಲ್ಇಡಿ ಡಿಆರ್ಎಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಟ್ವಿನ್ ಎಕ್ಸಾಸ್ಟ್, ರಿಯರ್ ಸ್ಪಾಯ್ಲರ್ ಮತ್ತು ಸ್ಟೈಲಿಶ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

2020ರ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯು ಪ್ಲಶ್ ಲೆದರ್, ಅಪ್ಹೋಲ್ಸ್ಟರಿ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ದೊಡ್ಡ ಟಚ್ ಸ್ಕ್ರೀನ್ ಇನ್ಪೋಟೇನೆಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕ್ ಸನ್‍ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದುದಾದ ಡ್ರೈವರ್ ಸೀಟ್, ಡ್ಯುಯಲ್ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಇತರ ಫೀಚರ್ ಗಳನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಡೀಲರ್ ಬಳಿ ತಲುಪಲಿದೆ ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 500

ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍ಯುವಿಯು ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ, ಜೀಪ್ ಕಂಪಾಸ್ ಮತ್ತು ಫೋಕ್ಸ್ ವ್ಯಾಗನ್ ಟಿ-ರಾಕ್ ಎಸ್‍ಯುವಿಯುಗಳಿಗೆ ಪೈಪೋಟಿ ನೀಡುತ್ತದೆ.

Source: Team-BHP

Most Read Articles

Kannada
English summary
First lot of BS6 Mahindra XUV500 dispatched to dealers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X