ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಅರೆನಾ ಹಾಗೂ ನೆಕ್ಸಾ ಡೀಲರ್ ಗಳ ಮೂಲಕ ವ್ಯಾಗನ್ಆರ್ ಹಾಗೂ ಬಲೆನೊ ಕಾರುಗಳನ್ನು ರಿಕಾಲ್ ಮಾಡಿದೆ. ಈ ಮಾದರಿಗಳ ಫ್ಯೂಯಲ್ ಪಂಪ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ರಿಕಾಲ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

2019ರ ಜನವರಿ 15ರಿಂದ - ನವೆಂಬರ್ 4ರ ನಡುವೆ ಉತ್ಪಾದಿಸಲಾದ ಮಾರುತಿ ಬಲೆನೊ ಹಾಗೂ 2018ರ ನವೆಂಬರ್ 15ರಿಂದ 2019ರ ಅಕ್ಟೋಬರ್ 15ರ ನಡುವೆ ಉತ್ಪಾದಿಸಲಾದ ವ್ಯಾಗನ್ಆರ್ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಈ ಎರಡೂ ಕಾರುಗಳು ಸಹ ಸೇರಿವೆ.

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

78,222 ಯುನಿಟ್ ಮಾರುತಿ ಬಲೆನೊ ಹಾಗೂ 56,663 ಯುನಿಟ್ ಮಾರುತಿ ವ್ಯಾಗನ್ಆರ್ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ಈ ಕಾರುಗಳಲ್ಲಿರುವ ಫ್ಯೂಯಲ್ ಪಂಪ್‌ಗಳನ್ನು ಉಚಿತವಾಗಿ ಸರಿಪಡಿಸಲಿದೆ. ಗ್ರಾಹಕರು ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ಈ ಕಾರುಗಳನ್ನು ಖರೀದಿಸಿರುವ ಗ್ರಾಹಕರನ್ನು ಶೀಘ್ರದಲ್ಲೇ ಅರೆನಾ ಹಾಗೂ ನೆಕ್ಸಾ ಡೀಲರ್ ಗಳು ಸಂಪರ್ಕಿಸಲಿದ್ದಾರೆ. ಇದರ ಜೊತೆಗೆ ಗ್ರಾಹಕರು ಸಹ ಕಂಪನಿಯ ವೆಬ್‌ಸೈಟ್‌ನ ಕಸ್ಟಮರ್ ಇನ್ಫೋಗೆ ಹೋಗಿ ಪರಿಶೀಲಿಸಿಕೊಳ್ಳಬಹುದು.

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ವೆಬ್‌ಸೈಟ್‌ಗೆ ಭೇಟಿ ನೀಡಿ ಕಾರಿನ ಚಾಸಿಸ್ ನಂಬರ್ ನಮೂದಿಸಿದರೆ, ಕಾರಿಗೆ ಹಾನಿಯಾಗಿದೆಯೇ ಇಲ್ಲವೇ ಎಂದು ತಿಳಿಯುತ್ತದೆ. ಒಂದು ವೇಳೆ ಕಾರು ದೋಷಪೂರಿತವಾಗಿರುವುದು ಕಂಡು ಬಂದರೆ ಅಲ್ಲಿ ನೀಡುವ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ಕಾರಿನ ಚಾಸಿಸ್ ನಂಬರ್ ಅನ್ನು ಕಾರಿನ ಆರ್ ಸಿ ಬುಕ್ ನಲ್ಲಿ ಪಡೆಯಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ಗ್ರಾಹಕರು ತಮ್ಮ ಹತ್ತಿರದಲ್ಲಿರುವ ಶೋರೂಂಗಳಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ದೋಷಯುಕ್ತ ಭಾಗಗಳನ್ನು ಬದಲಿಸಲು ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತವಿರುವ ಡೀಲರ್ ಗಳೊಂದಿಗೆ ಕೈಜೋಡಿಸಲಿದೆ.

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಈ ತಿಂಗಳ ಮೊದಲ ವಾರದಲ್ಲಿ ದೇಶಾದ್ಯಂತವಿರುವ ಗ್ರಾಹಕರಿಗಾಗಿ ಮಾನ್ಸೂನ್ ಅಭಿಯಾನವನ್ನು ಆರಂಭಿಸಿದೆ. ಮಳೆಗಾಲದಲ್ಲಿ ಕಾರುಗಳನ್ನು ಚಾಲನೆ ಮಾಡಲು ಅನುಕೂಲವಾಗುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನದಲ್ಲಿ ಕಂಪನಿಯು ಕಾರುಗಳನ್ನು ಚೆಕ್ ಅಪ್ ಮಾಡಲು ಕ್ಯಾಂಪ್ ಗಳನ್ನು ತೆರೆಯಲಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ದೋಷಪೂರಿತ ಕಾರುಗಳನ್ನು ರಿಕಾಲ್ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ಗ್ರಾಹಕರು ಜುಲೈ 31ರವರೆಗೆ ಈ ಅಭಿಯಾನದ ಪ್ರಯೋಜನವನ್ನು ಪಡೆಯಬಹುದು. ಕಂಪನಿಯ ತರಬೇತಿ ಪಡೆದ ತಾಂತ್ರಿಕ ಸಿಬ್ಬಂದಿ ಹಾಗೂ ತಜ್ಞರು ಕಾರುಗಳನ್ನು ಪರಿಶೀಲಿಸಿ ದೋಷಗಳು ಕಂಡು ಬಂದರೆ ಸರಿಪಡಿಸಲಿದ್ದಾರೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.

Most Read Articles

Kannada
English summary
Maruti Suzuki company recalls Baleno and WagonR cars for fuel pump fault. Read in Kannada.
Story first published: Wednesday, July 15, 2020, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X