Just In
- 20 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಮಾರುತಿ ಇಗ್ನಿಸ್ ಫೇಸ್‌ಲಿಫ್ಟ್
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಈ ವರ್ಷದ ಆರಂಭದಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಮಾರುತಿ ಇಗ್ನಿಸ್ ಕಾರನ್ನು ಭಾರತದಲ್ಲಿ ನೆಕ್ಸಾ ಪ್ರೀಮಿಯಂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾದ ಆರಂಭದಲ್ಲಿ ಇಗ್ನಿಸ್ ಕಾರು ಬಲೆನೊ ಹ್ಯಾಚ್‌ಬ್ಯಾಕ್‌ನಷ್ಟು ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು. ಇನ್ನು 2020ರ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಮಾದರಿಯ ವಾರ್ಷಿಕ ಮಾರಾಟದಲ್ಲಿ ಶೇ.133 ರಷ್ಟು ಭಾರಿ ಬೆಳವಣಿಗೆಯನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು 2020ರ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಮಾದರಿಯ 3,935 ಯುನಿಟ್‌ಗಳು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷ ಇದೇ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಮಾದರಿಯ 1,692 ಯುನಿಟ್‌ಗಳು ಮಾರಾಟಗೊಳಿಸಿತ್ತು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ವರ್ಷದಲ್ಲಿ ಕಳೆದ ತಿಂಗಳು ಮಾರುತಿ ಸುಜುಕಿ ಇಗ್ನಿಸ್ ಕಾರು ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ. ಇಗ್ನಿಸ್ ಮಾದರಿಯ ಫೇಸ್‌ಲಿಫ್ಟ್ ವರ್ಷನ್ ಮಾರಾಟವನ್ನು ಹೆಚ್ಚಿಸಲು ದೊಡ್ಡ ಪಾತ್ರ ವಹಿಸಿದೆ.

ಇನ್ನು ತಿಂಗಳಿಗೊಮ್ಮೆ, ಮಾರುತಿ ಇಗ್ನಿಸ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಮಾರುತಿ ಸುಜಿಕಿ ಇಗ್ನಿಸ್ ಕಾರಿನ ಆರಂಭಿಕ ಬೆಲೆಯು ರೂ.4.89 ಲಕ್ಷಗಳಾದರೆ, ಟಾಪ್-ಸ್ಪೆಕ್ ಮಾದರಿಯ ಬೆಲೆಯು ರೂ.7.19 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್‌ಬ್ಯಾಕ್ ಕಾರಿನ ಜೆಟ್ಟಾ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಸ್ಮಾರ್ಟ್‌ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿತು.

ಮಾರುತಿ ಇಗ್ನಿಸ್ ಕಾರನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರನ್ನು ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಆಲ್ಫಾ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾತ್ತದೆ. ಇಗ್ನಿಸ್ ನೆಕ್ಸಾ ಶೋರೂಂನಿಂದ ಮಾರಾಟವಾದ ಮೊದಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ 1.2-ಲೀಟರಿನ ಕೆ 12 ಬಿ ಬಿಎಸ್-6 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 83 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಮಾರುತಿ ಸುಜುಕಿ ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್-ಇಬಿಡಿ, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಡ್ರೈವರ್ ಸೇಫ್ಟಿ ಅಲರ್ಟ್ ಗಳನ್ನು ನೀಡಲಾಗಿದೆ. ಫೇಸ್ ಲಿಫ್ಟ್ ಕಾರಿನಲ್ಲಿ ಲೈವ್ ಟ್ರಾಫಿಕ್, ವಾಯ್ಸ್ ರೆಕಗ್ನಿಷನ್, ವೆಹಿಕಲ್ ಇನ್ಫಾರ್ಮೆಷನ್ ಅಲರ್ಟ್ ನಂತಹ ಹೊಸ ಫೀಚರ್ ಗಳನ್ನು ಅಳವಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಮಾರುತಿ ಸುಜುಕಿ ನಿಸ್ಸಂದೇಹವಾಗಿ ನಾಯಕನಾಗಿದ್ದರೂ, ಪ್ರೀಮಿಯಂ ವಾಹನಗಳ ಮಾರಾಟದಲ್ಲಿ ಹ್ಯುಂಡೈ ಕಂಪನಿಗೆ ಹೋಲಿಸಿದರೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ತನ್ನ ಸರಣಿಯ ಕಾರುಗಳ ಬೆಲೆಯನ್ನು ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಿಸಲಿದೆ.

ಬಜೆಟ್ ಆಧಾರಿತ ಹ್ಯಾಚ್‍ಬ್ಯಾಕ್‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಹ್ಯಾಚ್‍ಬ್ಯಾಕ್‍ಗಳಿಗೆ ಪೈಪೋಟಿ ನೀಡಲಿದೆ.