ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಕಂಪನಿಯು ಸೆಪ್ಟೆಂಬರ್ 2015ರಲ್ಲಿ ತನ್ನ ಗ್ರಾಹಕರಿಗೆ ಪ್ರಿಮೀಯಂ ಅನುಭವವನ್ನು ನೀಡುವ ಸಲುವಾಗಿ ನೆಕ್ಸಾ ಡೀಲರ್‍‍ಶಿಪ್‍‍ಗಳನ್ನು ಆರಂಭಿಸಿತ್ತು. ಪ್ರಾರಂಭವಾದ ಐದು ವರ್ಷಗಳಿಂದ ಇಲ್ಲಿಯವರಿಗೆ ನೆಕ್ಸಾ ಡೀಲರ್‍‍ಶಿಪ್‍‍ 11 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ ಎಂದು ಮಾರುತಿ ಸುಜುಕಿ ಕಂಪನಿಯು ಹೇಳಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ನೆಕ್ಸಾ ನೆಟ್‌ವರ್ಕ್ ದೇಶದ 200 ನಗರಗಳಲ್ಲಿ 370ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿರುವ ಮೂರನೇ ಅತಿದೊಡ್ಡ ಆಟೋಮೋಟಿವ್ ನೆಟ್‌ವರ್ಕ್ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ಇಗ್ನಿಸ್ ಮೊದಲಿಗೆ ಮಾರುತಿ ಸುಜುಕಿಯ ಎಸ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡಲಾಯಿತು. ನಂತರ ಈ ಶೋರೂಂಗಳಲ್ಲಿ ಇಗ್ನಿಸ್ ಹಾಗೂ ಸಿಯಾಜ್ ಕಾರುಗಳ ಮಾರಾಟವನ್ನು ಶುರು ಮಾಡಲಾಯಿತು. ಇದಾದ ನಂತರ ಬಲೆನೋ ಮತು ಎಕ್ಸ್‌ಎಲ್ 6 ಕಾರುಗಳನ್ನು ಮಾರಾಟ ಮಾಡಲಾಯಿತು. ದೇಶಾದ್ಯಂತವಿರುವ ನೆಕ್ಸಾ ಡೀಲರ್‍‍ಗಳಲ್ಲಿ ಈ ಕಾರುಗಳ ಮಾರಾಟವನ್ನು ಮುಂದುವರೆಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಕಂಪನಿಯ ಪ್ರಕಾರ ನೆಕ್ಸಾ ಗ್ರಾಹಕರಲ್ಲಿ ಅರ್ಧದಷ್ಟು ಜನರು 35 ವರ್ಷದೊಳಗಿನವರಾಗಿದ್ದಾರೆ. ನೆಕ್ಸಾ ಡೀಲರ್‍‍ಶಿಪ್ ವೇಗವಾಗಿ ಬೆಳೆದು ಭಾರತದಲ್ಲಿನ ಯಶಸ್ವಿ ಪ್ರಿಮೀಯಂ ರಿಟೇಲ್ ನೆಟ್‌ವರ್ಕ್ ಆಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಎಕ್ಸಿಕ್ಯೂಟಿವ್‌ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ನೆಕ್ಸಾ ಡೀಲರ್‍‍ಶಿಪ್‍‍ ಗ್ರಾಹಕರಿಗೆ ಹೆಚ್ಚಿನ ಅಧ್ಯತೆಯನ್ನು ನೀಡುತ್ತದೆ. ಅಲ್ಲದೇ ಗ್ರಾಹಕರಿಗಾಗಿ ಹಲವು ರೀತಿಯ ಕ್ಯಾಂಪನ್ ಅನ್ನು ಆಯೋಜಿಸುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಕಂಪನಿಯ ಪ್ರಕಾರ ನೆಕ್ಸಾ ಗ್ರಾಹಕರಲ್ಲಿ ಅರ್ಧದಷ್ಟು ಜನರು 35 ವರ್ಷದೊಳಗಿನವರಾಗಿದ್ದಾರೆ. ನೆಕ್ಸಾ ಡೀಲರ್‍‍ಶಿಪ್ ವೇಗವಾಗಿ ಬೆಳೆದು ಭಾರತದಲ್ಲಿನ ಯಶಸ್ವಿ ಪ್ರಿಮೀಯಂ ರಿಟೇಲ್ ನೆಟ್‌ವರ್ಕ್ ಆಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ನೆಕ್ಸಾದೊಂದಿಗೆ ನಾವು ನಗರ ಪ್ರದೇಶದ ಗ್ರಾಹಕರನ್ನು ಕೂಡ ಮಾರುತಿ ಸುಜುಕಿ ಪೋರ್ಟ್ಫೋಲಿಯೊಗೆ ಆಕರ್ಷಿಸಿದೆ. ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಅಗಾಧ ನಂಬಿಕೆಗೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಡೀಲರ್‍‍ಗಳ ಗುಣಮಟ್ಟವು ಸಾಧಾರಣ ಮಟ್ಟದಲ್ಲಿದ್ದು, ಅದರಲ್ಲಿನ ಅನುಭವವು ಸಹ ಉತ್ತಮವಾಗಿರಲಿಲ್ಲ. ಡೀಲರ್‍‍ಗಳ ಅನುಭವವನ್ನು ನೋಡಿದ್ದ ಗ್ರಾಹಕರು ಕಂಪನಿಯ ಬಗ್ಗೆಯೂ ಒಳ್ಳೆಯ ಅಭಿಪ್ರಾಯವನ್ನು ನೀಡಲಾರರು ಎಂಬ ಅಭಿಪ್ರಾಯವಿತ್ತು. ಆದರೆ ಬದಲಾದ ಕಾಲದಲ್ಲಿ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಕಠಿಣ ಸ್ಪರ್ಧೆ ಏರ್ಪಟಿತ್ತು.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಮಾರುತಿ ಸುಜುಕಿ ಕಂಪನಿಯು, ದೊಡ್ಡ ಬೆಲೆಯ ಕಾರುಗಳ ಉತ್ಪಾದನೆಯ ಹೊರತಾಗಿಯೂ, ಕಡಿಮೆ ಬೆಲೆಯ ಕಾರುಗಳ ತಯಾರಕ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ಹೆಣಗಾಡುತ್ತಿತ್ತು. ಆದ ಕಾರಣ ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಹೊಸದಾಗಿ ನೆಕ್ಸಾ ಸರಣಿಯ ಡೀಲರ್‍‍ಶಿಪ್‍‍ಗಳನ್ನು ತೆರೆಯಿತು. ಇದರಲ್ಲಿ ಮಾರುತಿ ಸುಜುಕಿ ಕಂಪನಿಯು ಯಶಸ್ವಿಯಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ನೆಕ್ಸಾ ಡೀಲರ್‍‍ಶಿಪ್‍

ಕಳೆದ ಕೆಲವು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಹಲವು ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೀಗ 11 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮತ್ತೊಂದು ಹೊಸ ದಾಖಲೆಯನ್ನು ನಿರ್ಮಿಸಿದೆ.

Most Read Articles

Kannada
English summary
Maruti Suzuki’s NEXA Dealership Network Sells 11 Lakh Cars Since Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X