ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಹೆಚ್ಚಾಗುತ್ತಿರುವ ಗ್ರಾಮೀಣ ಮಾರುಕಟ್ಟೆಯ ಬೇಡಿಕೆ ಹಾಗೂ ಹಬ್ಬದ ವೇಳೆಯಲ್ಲಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಮೂರನೇ ಉತ್ಪಾದನಾ ಘಟಕವನ್ನು ಆರಂಭಿಸಲು ಸಿದ್ದತೆ ನಡೆಸಿದೆ.

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಗುಜರಾತ್‌ನ ತನ್ನ ಮೂರನೇ ಉತ್ಪಾದನಾ ಘಟಕವನ್ನು ಹನ್ಸಾಲ್‌ಪುರದಲ್ಲಿ ಆರಂಭಿಸುತ್ತಿರುವ ಬಗ್ಗೆ ಕಂಪನಿಯು ಬಿಎಸ್‌ಇಗೆ ಸಲ್ಲಿಸಿರುವ ರೆಗ್ಯುಲೆಟರಿ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಸುಜುಕಿ ಮೋಟಾರ್ ಗುಜರಾತ್ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಜಿ) ತನ್ನ ಮೂರನೇ ಉತ್ಪಾದನಾ ಘಟಕದ ನಿರ್ಮಾಣವನ್ನು ಗುಜರಾತ್‌ನ ಹನ್ಸಾಲ್‌ಪುರದಲ್ಲಿ ಪೂರ್ಣಗೊಳಿಸಿದೆ.

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಎಸ್‌ಎಂಜಿ 2021 ಏಪ್ರಿಲ್ ನಿಂದ ಈ ಘಟಕದಲ್ಲಿ ತನ್ನ ವಾಣಿಜ್ಯ ಉತ್ಪಾದನಾ ಕಾರ್ಯಾಚರಣೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಮಾಹಿತಿಯ ಪ್ರಕಾರ ಈ ಉತ್ಪಾದನಾ ಘಟಕದ ಉತ್ಪಾದನೆಯ ಪ್ರಮಾಣವು ವ್ಯವಹಾರ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಬೇಡಿಕೆಯ ಮೇಲೆ ಅವಲಂಬಿತವಾಗಿರಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಎಸ್‌ಎಂಜಿ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗಾಗಿ ಗುತ್ತಿಗೆ ಆಧಾರದ ಮೇಲೆ ಕಾರುಗಳನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಕಂಪನಿಯು ತನ್ನ ಅಕ್ಟೋಬರ್‌ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಪ್ರಕಟಿಸಿದೆ.

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಈ ಅಂಕಿ ಅಂಶಗಳ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು ಒಟ್ಟು 1,47,912 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. 2019ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 34%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ 1,63,656 ಯುನಿಟ್ ಪ್ಯಾಸೆಂಜರ್ ವಾಹನಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯ ಹ್ಯಾಚ್‌ಬ್ಯಾಕ್ ಕಾರುಗಳಾದ ಆಲ್ಟೊ ಹಾಗೂ ಎಸ್-ಪ್ರೆಸ್ಸೊ ಕಾರಿನ 28,462 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಹಬ್ಬದ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ನವೆಂಬರ್‌ ತಿಂಗಳಿನಲ್ಲಿ ಹಲವಾರು ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಅರೆನಾ ಮಾರಾಟ ಮಳಿಗೆಗಳಲ್ಲಿರುವ ಎಲ್ಲಾ ಕಾರುಗಳ ಮೇಲೆಯೂ ಈ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ ಮಾರುತಿ ಸುಜುಕಿ ಕಂಪನಿಯ ಮೂರನೇ ಉತ್ಪಾದನಾ ಘಟಕ

ಮಾರುತಿ ಸುಜುಕಿ ತನ್ನ ಅರೆನಾ ಸರಣಿಯ ಕಾರುಗಳ ಮೇಲೆ ರೂ.10,000ದಿಂದ ರೂ.25,000ಗಳವರೆಗಿನ ನಗದು ರಿಯಾಯಿತಿಯನ್ನು ನೀಡುತ್ತಿದೆ. ಇದರ ಜೊತೆಗೆ ರೂ.5,000ದಿಂದ ರೂ.6,000ಗಳವರೆಗೆ ಕಾರ್ಪೊರೇಟ್ ರಿಯಾಯಿತಿ ಹಾಗೂ ರೂ.15,000ದಿಂದ ರೂ.25,000ಗಳ ವಿನಿಮಯ ಬೋನಸ್ ನೀಡುತ್ತಿದೆ.

Most Read Articles

Kannada
English summary
Maruti Suzukis Gujarat Plant Number 3 To Start Operations From 2021. Read in Kannada.
Story first published: Thursday, November 5, 2020, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X