Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ಲೊಸ್ಟರ್ ಮಾದರಿಯಲ್ಲಿನ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಟೀಸರ್ ಬಿಡುಗಡೆ ಮಾಡಿದ ಎಂಜಿ ಮೋಟಾರ್
ಬಹುನೀರಿಕ್ಷಿತ ಎಂಜಿ ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಲೆವಲ್ ಫಸ್ಟ್ ಅಟೊನೊಮಸ್ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಎಸ್‌ಯುವಿ ಕಾರು ಮಾದರಿಯಲ್ಲೇ ಹೆಚ್ಚು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಯನ್ನು ಹೊಸ ತಲೆಮಾರಿನ ಆಟೋ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಳಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿ ಅನಾವರಣಗೊಳಿಸುವ ನೀರಿಕ್ಷೆಯಿದೆ. ರೋಡ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ಪ್ರಮುಖ ತಾಂತ್ರಿಕ ಅಂಶಗಳು ಬಹಿರಂಗವಾಗಿದ್ದು, ಆಟೋ ಪಾರ್ಕ್ ಅಸಿಸ್ಟ್ ನಂತರ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೌಲಭ್ಯದ ಕುರಿತಾಗಿ ಹೊಸ ಟೀಸರ್ ಬಿಡುಗಡೆ ಮಾಡಿದೆ.

ಆಟೋ ಪಾರ್ಕ್ ಅಸಿಸ್ಟ್ ಸೌಲಭ್ಯದ ನಂತರ ಹೊಸ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೌಲಭ್ಯವನ್ನು ಸಹ ನೀಡುತ್ತಿರುವುದಾಗಿ ಖಚಿತಪಡಿಸಿರುವ ಎಂಜಿ ಮೋಟಾರ್ ಕಂಪನಿಯು ಕಾರು ಚಾಲನೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲಿದೆ.

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೌಲಭ್ಯವು ವೇಗದ ಕಾರು ಚಾಲನೆ ವೇಳೆ ಮತ್ತೊಂದು ವಾಹನದ ನಡುವಿನ ಅಂತರವನ್ನು ಕಾಯ್ದಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸಲಿದ್ದು, ಸೆನ್ಸಾರ್ ಮಾಹಿತಿ ಆಧರಿಸಿ ಕೆಲವೇ ಕ್ಷಣಗಳಲ್ಲಿ ವೇಗದಲ್ಲಿರುವ ವಾಹನವನ್ನು ಸಾಮಾನ್ಯ ವೇಗಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ಮೂಲಕ ಅಪಾಯದ ಮುನ್ಸೂಚನೆಯನ್ನು ನೀಡುವ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೌಲಭ್ಯವು ವೇಗದ ಚಾಲನೆ ವೇಳೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಕಷ್ಟು ಸಹಕಾರಿಯಾಗಿದ್ದು, ಐಷಾರಾಮಿ ಕಾರುಗಳಲ್ಲಿ ಈ ಸೌಲಭ್ಯವನ್ನು ಕಾಣಬಹುದಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದೀಗ ಎಂಜಿ ಮೋಟಾರ್ ಕಂಪನಿಯು ಸಹ ಹೊಸ ಮಾದರಿಯ ಹಲವಾರು ಸುರಕ್ಷಾ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಹೊಸ ಗ್ಲೊಸ್ಟರ್ ಕಾರು ಮುಂಬರುವ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಗ್ಲೊಸ್ಟರ್ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಹೆಕ್ಟರ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹೆಕ್ಟರ್ ಪ್ಲಸ್ ನಂತರ ಬಿಡುಗಡೆಯಾಗುತ್ತಿರುವ ಗ್ಲೊಸ್ಟರ್ ಕಾರು ಮೊದಲ ಮೂರು ಕಾರುಗಳಿಂತಲೂ ಐಷಾರಾಮಿ ಫೀಚರ್ಸ್‌ನೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಅಡ್ವಾನ್ಸ್ 4x4 ಡ್ರೈವ್ ಸಿಸ್ಟಂ ಜೋಡಣೆ ಹೊಂದಿರಲಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಗ್ಲೊಸ್ಟರ್ ಕಾರು ಟೊಯೊಟಾ ಐಷಾರಾಮಿ ಕಾರು ಆವೃತ್ತಿಯಾಗಿರುವ ಲ್ಯಾಂಡ್ ಕ್ರೂಸರ್ 200 ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಗಾತ್ರ ಹೊಂದಿದ್ದು, 5,100-ಎಂಎಂ ಉದ್ದ, 1,932-ಎಂಎಂ ಅಗಲ, 1,875-ಎಂಎಂ ಎತ್ತರ, 2,950-ಎಂಎಂ ವೀಲ್ಹ್ ಬೆಸ್ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಗ್ಲೊಸ್ಟರ್ ಎಸ್‌ಯುವಿ ಮಾದರಿಯು ಜೆಡ್ಎಫ್ ನಿರ್ಮಾಣದ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಹೊಸ ಎಂಜಿನ್ ಮಾದರಿಯು 215-ಬಿಎಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುತ್ತಿಲ್ಲ ಎನ್ನಲಾಗಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಲ್ಯಾಡರ್ ಫ್ರೇಮ್ ಚಾರ್ಸಿ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸಂಜ್ಞೆ ಮೂಲಕ ನಿಯಂತ್ರಣ ಮಾಡಬಹುದಾದ ಡ್ಯಾಶ್‌ಬೋರ್ಡ್ ಮತ್ತು ಟೈಲ್‌ಗೆಟ್, ಆ್ಯಂಬಿಯೆಂಟ್ ಲೈಟಿಂಗ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೊಲ್, 8-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 12.3-ಇಂಚಿನ ಟಚ್ ಸ್ಕ್ರೀನ್ ಇನ್ಪೊಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಹಾಗೆಯೇ ವೆಂಟಿಲೆಟೆಡ್ ಲೆದರ್ ಸೀಟುಗಳು, ಹಿಟೆಡ್ ವಿಂಗ್ ಮಿರರ್, ಪನೊರಮಿಕ್ ಸನ್‌ರೂಫ್, 64 ಬಣ್ಣಗಳ ಆ್ಯಂಬಿಯೆಂಟ್ ಲೈಟಿಂಗ್ಸ್, 12-ಸ್ಪೀಕರ್ಸ್, ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಮತ್ತು 19-ಇಂಚಿನ ಅಲಾಯ್ ವೀಲ್ಹ್ ಪಡೆದುಕೊಂಡಿದ್ದು, ಸ್ನೋ, ಸ್ಯಾಂಡ್, ಇಕೋ, ರಾಕ್ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಹೊಂದಿದೆ.

6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಗ್ಲೊಸ್ಟರ್ ಕಾರಿನಲ್ಲಿ 2+2+2 ಮತ್ತು 2+2+3 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಜೋಡಿಸಲಾಗಿದ್ದು, ಮಧ್ಯದಲ್ಲಿರುವ ಕ್ಯಾಪ್ಟನ್ ಆಸನದಲ್ಲಿ ಹಲವಾರು ಕಾರ್ ಕನೆಕ್ಟೆಡ್ ಸೌಲಭ್ಯಗಳೊಂದಿಗೆ ಅರಾಮಾದಾಯಕ ಪ್ರಯಾಣಕ್ಕಾಗಿ ಮಸಾಜ್ ಫೀಚರ್ಸ್ ನೀಡಲಾಗಿದೆ. ಈ ಮೂಲಕ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.30 ಲಕ್ಷದಿಂದ ರೂ.35 ಲಕ್ಷ ಬೆಲೆ ಅಂತರದೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.