ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಜನಪ್ರಿಯತೆ ಗಳಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರುಗಳ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಸದ್ಯ ಹೆಕ್ಟರ್, ಹೆಕ್ಟರ್ ಪ್ಲಸ್(6 ಸೀಟರ್), ಜೆಡ್ಎಸ್ ಎಲೆಕ್ಟ್ರಿಕ್, ಗ್ಲೊಸ್ಟರ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಹೆಕ್ಟರ್ ಪ್ಲಸ್ 7 ಸೀಟರ್ ಮತ್ತು ಜೆಡ್ಎಸ್ ಪೆಟ್ರೋಲ್ ಮಾದರಿಗಳ ಮೂಲಕ ಭರ್ಜರಿ ಮಾರಾಟ ಗುರಿಹೊಂದಿದೆ. 2019ರ ಮಧ್ಯಂತರದಲ್ಲಿ ಕಾರು ಮಾರಾಟ ನಂತರ ಮೊದಲ ಮೊದಲ ವರ್ಷದಲ್ಲಿ 16 ಸಾವಿರ ಯುನಿಟ್ ಮತ್ತು 2020ರ ಕರೋನಾ ಸಂಕಷ್ಟದ ನಡುವೆ 30 ಸಾವಿರ ಯುನಿಟ್ ಮಾರಾಟ ಮಾಡಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

2021ರ ವೇಳೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳೊಂದಿಗೆ ಹೊಸ ಕಾರು ಮಾದರಿಗಳಾದ ಜೆಡ್ಎಸ್ ಪೆಟ್ರೋಲ್ ಮತ್ತು ಹೆಕ್ಟರ್ ಪ್ಲಸ್ 7 ಸೀಟರ್ ಮೂಲಕ ಮಾರಾಟ ಸಂಖ್ಯೆಯನ್ನು 50 ಸಾವಿರ ಯುನಿಟ್‌ಗೆ ಹೆಚ್ಚಿಸುವ ನೀರಿಕ್ಷೆಯಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಬಿಡುಗಡೆಯಾಗಲಿರುವ ಜೆಡ್ಎಸ್ ಪೆಟ್ರೋಲ್ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಹೆಕ್ಟರ್ ಮಾದರಿಯು ತನ್ನ ಬೇಡಿಕೆಯನ್ನು ಎಂದಿನಂತೆ ಕಾಯ್ದಕೊಳ್ಳಲಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಈ ಮೂಲಕ 2021ರ ಕೊನೆಗೆ ಶೇ. 70ರಿಂದ ಶೇ.80 ರಷ್ಟು ಕಾರು ಮಾರಾಟದಲ್ಲಿ ಮುನ್ನಡೆ ಸಾಧಿಸುವ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲೇ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟರ್ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಮಾರ್ಚ್ ಹೊತ್ತಿಗೆ ಬಹುನೀರಿಕ್ಷಿತ ಜೆಡ್ಎಸ್ ಪೆಟ್ರೋಲ್ ಮಾದರಿಯನ್ನು ರಸ್ತೆಗಿಳಿಸಲಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಗ್ರಾಹಕರ ಆಯ್ಕೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿರುವ ಹೊಸ ಕಾರು ಮಾರಾಟ ಕಂಪನಿಗಳಿಗೆ ಭಾರತೀಯ ಆಟೋ ಮಾರುಕಟ್ಟೆಯು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಹೊಸ ಕಾರುಗಳ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಎಂಜಿ ಮೋಟಾರ್ ಭಾರತದಲ್ಲಿ ಬಿಡುಗಡೆ ಮಾಡಲಿರುವ ಹೊಸ ಕಾರುಗಳ ಪಟ್ಟಿಯಲ್ಲಿ ಜೆಡ್ಎಸ್ ಪೆಟ್ರೋಲ್ ವರ್ಷನ್ ಮತ್ತು ಜಿ10 ಎಂಪಿವಿ ಮಾದರಿಯು ಪ್ರಮುಖವಾಗಿದ್ದು, ಜೆಡ್ಎಸ್ ಕಾರು ಮಾದರಿಯ ಬಿಡುಗಡೆಗಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರು ಹೆಕ್ಟರ್ ಕಾರಿಗಿಂತಲೂ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದ್ದು, ಬೆಲೆ ವಿಚಾರದಲ್ಲೂ ಪ್ರತಿಸ್ಪರ್ಧಿ ಕಾರುಗಳಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಜೆಡ್ಎಸ್ ಪೆಟ್ರೋಲ್ ಕಾರು ಎರಡು ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿರುವ ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಹೊಸ ಕಾರು ಬಿಎಸ್-6 ವೈಶಿಷ್ಟ್ಯತೆಗೆ ಅನುಗುಣವಾಗಿ ಅಭಿವೃದ್ದಿ ಹೊಂದಿದ್ದು, ಹೊಸ ಕಾರು 4,314-ಎಂಎಂ ಉದ್ದ, 1,890-ಎಂಎಂ ಅಗಲ, 1,611-ಎಂಎಂ ಎತ್ತರ ಮತ್ತು 2,589-ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಾರುಗಳ ಮೂಲಕ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆಯ ನೀರಿಕ್ಷೆಯಲ್ಲಿ ಎಂಜಿ ಮೋಟಾರ್

ಈ ಮೂಲಕ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
MG Motor India Aims To Cross 50,000 Unit Sales In 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X