ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಕರೋನಾ ವೈರಸ್ ಪರಿಣಾಮ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳಾಗಿರುವುದಲ್ಲದೆ ಉದ್ಯಮ ಚಟುವಟಿಕೆಗಳು ಕೂಡಾ ಹೊಸ ರೂಪ ಪಡೆದುಕೊಳ್ಳುತ್ತಿವೆ. ಅದರಲ್ಲೂ ಆಟೋ ಉದ್ಯಮವಂತೂ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಆನ್‌ಲೈನ್ ಕಾರು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಮಾಹಾಮಾರಿ ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ವಾಣಿಜ್ಯ ವ್ಯಾಪಾರಗಳು ನೆಲಕಚ್ಚಿವೆ. ಭಾರತದಲ್ಲೂ ಲಾಕ್‌ಡೌನ್ ವಿಧಿಸಿದ ದಿನದಿಂದಲೂ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿದ್ದರಿಂದ ಆಟೋ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ. ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಹೊಸ ಸುರಕ್ಷಾ ಮಾರ್ಗಸೂಚಿಯಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದು, ಗ್ರಾಹಕರಲ್ಲಿ ವೈರಸ್ ಭೀತಿ ಹೋಗಲಾಡಿಸಿ ಸುರಕ್ಷಿತ ವಾಹನ ಮಾರಾಟ ಮತ್ತು ಗ್ರಾಹಕ ಸೇವೆಗಳ ಮೂಲಕ ವ್ಯಾಪಾರ-ವಹಿವಾಟು ಕೈಗೊಳ್ಳುವುದು ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ವೈರಸ್ ಭೀತಿಯ ನಡುವೆಯೂ ಆನ್‌ಲೈನ್ ವಾಹನ ಮಾರಾಟವು ಗ್ರಾಹಕರನ್ನು ಸೆಳೆಯುತ್ತಿದ್ದು, ವೈರಸ್ ಭೀತಿ ಹೋಗಲಾಗಡಿಸಲು ಆಟೋ ಕಂಪನಿಗಳು ತೆಗೆದುಕೊಂಡಿರುವ ಕ್ರಮಗಳು ಹೊಸ ವಾಹನಗಳ ಖರೀದಿ ಪ್ರಕ್ರಿಯೆಯಲ್ಲಿ ನಿಧಾನವಾಗಿ ಚೇತರಿಕೆ ಕಾಣುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿ ಕೂಡಾ ಹೊಸ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಾಣಲು ಹಲವಾರು ಹೊಸ ಕ್ರಮಗಳನ್ನು ಅಳವಡಿಸಿಕೊಂಡಿದ್ದು, ಹೊಸದಾಗಿ ಬಿಡುಗಡೆ ಮಾಡಲಾಗಿರುವ ಮೈ ಎಂಜಿ ಆ್ಯಪ್ ಇದೀಗ ಹೊಸ ವಾಹನ ಖರೀದಿದಾರರ ಆಕರ್ಷಣೆಗೆ ಕಾರಣವಾಗಿದೆ.

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಹೊಸ ಆ್ಯಪ್ ಮೂಲಕ ಹೊಸ ಕಾರುಗಳ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಿರುವ ಎಂಜಿ ಮೋಟಾರ್ ಕಂಪನಿಯು ವೈರಸ್ ಭೀತಿ ಹಿನ್ನಲೆಯಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಹಾಗೆಯೇ ಶೋರೂಂಗಳಿಗೆ ಗ್ರಾಹಕರ ಭೇಟಿ ತಡೆಯಲು ಗ್ರಾಹಕರ ಮನೆ ಬಾಗಿಲಿಗೆಯೇ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ, ಮಾತುಕತೆ, ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿವುದು ಮತ್ತು ಡಿಜಿಟಲ್ ಹಣಕಾಸು ವ್ಯವಹಾರ ಕೈಗೊಳ್ಳಲಾಗುತ್ತಿದೆ.

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಮನೆ ಬಾಗಿಲಿಗೆ ಬರುವ ಸಿಬ್ಬಂದಿಯು ಕೂಡಾ ಗರಿಷ್ಠ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡ ನಂತರವೇ ಹೊಸ ಕಾರುಗಳ ವಿತರಣೆ ಮಾಡುವುದು ಮತ್ತು ತಾಂತ್ರಿಕ ಸೇವೆಗಳ ನೀಡಲಿದ್ದು, ವೈರಸ್ ಹರಡದಂತೆ ಎಲ್ಲಾ ಮಾದರಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಕಾರು ಮಾರಾಟ ಮತ್ತು ಗ್ರಾಹಕರ ಸೇವೆಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ ಎಂಜಿ ಮೋಟಾರ್

ಆದರೂ ನೀರಿಕ್ಷಿತ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಪರದಾಟುತ್ತಿರುವ ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರ ಸೆಳೆಯುತ್ತಿದ್ದು, ಅತಿ ಸರಳವಾದ ವಾಹನ ಖರೀದಿ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿರುವುದು ಸದ್ಯದ ಪರಿಸ್ಥಿತಿ ಉತ್ತಮ ವೇದಿಕೆಯಾಗಿದೆ ಎನ್ನಬಹುದು.

Most Read Articles

Kannada
English summary
MG Motor introduces for mobile app for sales service operations India details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X