ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿರುವ ಎಂಜಿ ಮೋಟಾರ್ ಕಂಪನಿಯು ಜೆಡ್ಎಸ್ ಇವಿ ಮೂಲಕ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ಭವಿಷ್ಯದ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಪರಿಸರ ಸ್ನೇಹಿ ವಾಹನ ಮಾದರಿಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟು ಪರಿಸರ ಸ್ನೇಹಿಯಾಗಿಸಲು ಹೊಸ ಯೋಜನೆಯೊಂದನ್ನು ಆರಂಭಿಸಿರುವ ಎಂಜಿ ಮೋಟಾರ್ ಕಂಪನಿಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಮರುಬಳಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅವಧಿ ಮುಗಿದ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಿಕೊಳ್ಳುವ ಮೂಲಕ ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಇಳಿಕೆ ಮಾಡಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆ ಮಾಡುವ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವು ಒಂದು ನಿರ್ದಿಷ್ಟ ಅವಧಿ ನಂತರ ಅದರ ಬಳಕೆಯು ಕೊನೆಕೊಳ್ಳಲಿದ್ದು, ಬಳಕೆ ಮುಗಿದ ನಂತರ ಮರುಬಳಕೆ ಮಾಡದಿದ್ದಲ್ಲಿ ಬ್ಯಾಟರಿ ಸಂಪನ್ಮೂಲವು ಮುಂದೆ ಪರಿಸರಕ್ಕೆ ಹೊಸ ಸವಾಲಾಗುವ ಸಾಧ್ಯತೆಗಳವೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಇದಕ್ಕಾಗಿಯೇ ಬಳಕೆಯ ಅವಧಿ ಮುಗಿದ ಲೀಥಿಯಂ ಅಯಾನ್ ಬ್ಯಾಟರಿಯನ್ನು ವೈಜ್ಞಾನಿಕವಾಗಿ ಮರುಬಳಕೆ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಯಶಸ್ವಿ ಕೈಗೊಳ್ಳುವ ಟಿಇಎಸ್-ಎಎಂಎಂ ಕಂಪನಿಯೊಂದಿಗೆ ಎಂಜಿ ಮೋಟಾರ್ ಕಂಪನಿಯು ಕೈಜೋಡಿಸಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನದಲ್ಲಿನ ಲೀಥಿಯಂ ಅಯಾನ್ ಬ್ಯಾಟರಿಯನ್ನು ಟಿಇಎಸ್-ಎಎಂಎಂ ಕಂಪನಿಯೊಂದಿಗೆ ಜೊತೆಗೂಡಿ ಮರುಬಳಕೆಯನ್ನು ಖಚಿತಪಡಿಸಲಿದ್ದು, ಹೊಸ ಯೋಜನೆಯಿಂದ ನಿರ್ವಹಣಾ ವೆಚ್ಚ ಪರಿಣಾಮಕಾರಿಯಾಗಿ ತಗ್ಗುವುದಲ್ಲದೆ ಬ್ಯಾಟರಿ ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಟಿಇಎಸ್-ಎಎಂಎಂ ಕಂಪನಿಯು ಏಷ್ಯಾದಲ್ಲಿರುವ ಲೀಥಿಯಂ ಅಯಾನ್ ಬ್ಯಾಟರಿ ಮರುಬಳಕೆಯನ್ನು ಖಚಿತಪಡಿಸುವ ಏಕೈಕ ಕಂಪನಿಯಾಗಿದ್ದು, ಹೈಡ್ರೋ ಮೆಟಲ್ಲರ್ಜಿಕಲ್ ಪ್ರಕ್ರಿಯೆಯೊಂದಿಗೆ ಲೀಥಿಯಂ ಅಯಾನ್ ಬ್ಯಾಟರಿ ಜೊತೆ ಹಲವಾರು ಯಾಂತ್ರಿಕ ಉಪಕರಣಗಳನ್ನು ಮರುಬಳಕೆಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸುತ್ತದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಇನ್ನು ಜೆಡ್ಎಸ್ ಎಲೆಕ್ಟ್ರಿಕ್ ಕಾರು ಸದ್ಯ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸೈಟ್ ಮಾದರಿಯ ಬೆಸ್ ವೆರಿಯೆಂಟ್ ಮಾದರಿಯಾಗಿ ಮತ್ತು ಎಕ್ಸ್‌ಕ್ಲೂಸಿವ್ ವೆರಿಯೆಂಟ್ ಹೈ ಎಂಡ್ ಮಾದರಿಯಾಗಿ ಮಾರಾಟವಾಗುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಎಕ್ಸೈಟ್ ಆವೃತ್ತಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.58 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.23.58 ಲಕ್ಷ ನಿಗದಿ ಪಡಿಸಲಾಗಿದ್ದು, ಬಿಡುಗಡೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಬುಕ್ ಮಾಡಿದ್ದ 1 ಸಾವಿರ ಗ್ರಾಹಕರಿಗೆ ಬರೋಬ್ಬರಿ ರೂ.1 ಲಕ್ಷ ಆಫರ್ ನೀಡಲಾಗಿತ್ತು. ಆದರೆ ಇದೀಗ ಯಾವುದೇ ಆಫರ್ ನೀಡುತ್ತಿಲ್ಲ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎರಡು ವೆರಿಯೆಂಟ್‌ಗಳಲ್ಲೂ 44.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಈ ಮೂಲಕ ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಇದುವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಬೇಡಿಕೆ ಪಡೆದುಕೊಂಡಿದ್ದು, ಸುಮಾರು 1 ಸಾವಿರ ಯುನಿಟ್‌ಗಳನ್ನು ಈಗಾಗಲೇ ಉತ್ಪಾದನೆ ಮಾಡಿದೆ. ಮುಂಬರುವ ದಿನಗಳಲ್ಲಿ ಉತ್ಪಾದನಾ ಪ್ರಮಾಣ ದ್ವಿಗುಣಗೊಳಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಲೆಕ್ಟ್ರಿಕ್ ಕಾರುಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಕಡಿತ ಮಾಡಲಿದೆ ಎಂಜಿ ಮೋಟಾರ್

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ವೆರಿಯೆಂಟ್ 400 ಕಿ.ಮೀ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಮೈಲೇಜ್‌ಗೆ ತಕ್ಕಂತೆ ಕಾರಿನ ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
MG Motor & TES-AMM India Partner For Battery Recycling. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X