ಹೆಚ್ಚಿದ ವೈರಸ್ ಭೀತಿ: ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಎಂಜಿ ಮೋಟಾರ್ ಕಂಪನಿಯು ಹಣಕಾಸು ನೆರವು ನೀಡಿರುವುದಲ್ಲದೆ ವೈದ್ಯಕೀಯ ಉಪಕರಣಗಳ ಉತ್ಪಾದನೆ ಮತ್ತು ಪೂರೈಕೆಯಲ್ಲೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ವೈರಸ್ ವಿರುದ್ಧದ ಹೋರಾಟಕ್ಕಾಗಿ ಎಂಜಿ ಮಾತ್ರವಲ್ಲದೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಕೂಡಾ ರೂ.2 ಕೋಟಿ ದೇಣಿಯ ಜೊತೆಗೆ ಅಗ್ಗದ ದರದಲ್ಲಿ ಅತ್ಯುತ್ತಮ ವೆಂಟಿಲೇಟರ್‌ಗಳ ಉತ್ಪಾದನೆ ಮಾಡಿ ಅಗತ್ಯವಿರುವ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಮಾಡುತ್ತಿದೆ.

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ವೈದ್ಯಕೀಯ ಉಪಕರಣಗಳ ಅಭಿವೃದ್ದಿ ಸಂಸ್ಥೆಯಾಗಿರುವ ಮ್ಯಾಕ್ಸ್ ಜೊತೆಗೂಡಿ ವೆಂಟಿಲೇಟರ್ ಉತ್ಪಾದನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಪ್ರತಿ ತಿಂಗಳು 1 ಸಾವಿರ ವೆಂಟಿಲೇಟರ್‌ಗಳ ಉತ್ಪಾದನೆ ಮಾಡುತ್ತಿದೆ.

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಆದರೆ ಇದೀಗ ಕರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿಗೆ ಅನುಗುಣವಾಗಿ ವೆಂಟಿಲೇಟರ್ ಉತ್ಪಾದನಾ ಪ್ರಮಾಣವನ್ನು 1 ಸಾವಿರದಿಂದ 1,300ಕ್ಕೆ ಹೆಚ್ಚಿಸಿದ್ದು, ಕಾರು ಉತ್ಪಾದನಾ ಘಟಕದಲ್ಲೇ ಪ್ರತ್ಯೇಕ ಸೌಲಭ್ಯಗಳೊಂದಿಗೆ ವೆಂಟಿಲೇಟರ್ ನಿರ್ಮಾಣ ಮಾಡಲಾಗುತ್ತಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಇನ್ನು ಕರೋನಾ ವೈರಸ್ ವಿರುದ್ದ ಹೋರಾಟದಲ್ಲಿ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಹಣಕಾಸು ಸಹಾಯದೊಂದಿಗೆ ವೈದ್ಯಕೀಯ ಸೌಲಭ್ಯಗಳನ್ನು ಪೂರೈಕೆ ಮಾಡುತ್ತಿದ್ದು, ಕಳೆದ ತಿಂಗಳ ಹಿಂದಷ್ಟೇ ಕಾರ್ ಆ್ಯಂಬುಲೆನ್ಸ್ ಒಂದನ್ನು ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡಿತ್ತು.

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಕರೋನಾ ಸೋಂಕಿತರ ಸೇವೆಗಾಗಿ ವಿಶೇಷ ಸೌಲಭ್ಯವುಳ್ಳ ಕಾರ್ ಆ್ಯಂಬುಲೆನ್ಸ್ ಒಂದನ್ನು ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಿದ್ದ ಎಂಜಿ ಕಂಪನಿಯು ಕಾರಿನ ಒಳಭಾಗವನ್ನು ವೈದ್ಯಕೀಯ ಸೇವೆಗೆ ಅನುಗುಣವಾಗಿ ಮಾಡಿಫೈಗೊಳಿಸಿ ಸರ್ಕಾರಕ್ಕೆ ಹಸ್ತಾಂತರಿಸಿತ್ತು.

MOST READ: ಕರೋನಾ ವೈರಸ್: ಹೊಸ ವಿಧಾನದ ಮೂಲಕ ಜನರ ಬಳಿ ಬರಲಿರುವ ಪೊಲೀಸರು..

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ತನ್ನ ಜನಪ್ರಿಯ ಕಾರು ಮಾದರಿಯಾದ ಹೆಕ್ಟರ್ ಕಾರಿನಲ್ಲೇ ಕಾರ್ ಆ್ಯಂಬಲೆನ್ಸ್ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ವೈರಸ್ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌‌ಗಳ ಸಾರಿಗೆ ಸೌಲಭ್ಯಕ್ಕಾಗಿ 100 ಹೆಕ್ಟರ್ ಕಾರುಗಳನ್ನು ಉಚಿತ ಸೇವೆಗಾಗಿ ನೀಡಲಾಗಿದೆ.

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಜೊತೆಗೆ ಸಾರ್ವಜನಿಕ ರಕ್ಷಣೆಯಲ್ಲಿ ನಿರತರಾಗಿರುವ ಪೊಲೀಸರ ಆರೋಗ್ಯ ಕಾಳಜಿ ವಹಿಸಿಕೊಂಡಿರುವ ಎಂಜಿ ಮೋಟಾರ್ ಕಂಪನಿಯ ಸುಮಾರು 3 ಸಾವಿರ ಪೊಲೀಸ್ ವಾಹನಗಳಿಗೆ ಉಚಿತವಾಗಿ ಸ್ಯಾನಿಟೈಜ್ ಸಿಂಪರಣೆಯ ಮೂಲಕ ರೋಗ ಭೀತಿಯನ್ನು ಹೊಗಲಾಡಿಸಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ವೆಂಟಿಲೇಟರ್ ಉತ್ಪಾದನೆಯನ್ನು ದ್ವಿಗುಣಗೊಳಿಸಿದ ಎಂಜಿ ಮೋಟಾರ್

ಸೋಂಕು ಪೀಡಿತ ಪ್ರದೇಶಗಳಲ್ಲಿ ಜೀವಪಣಕ್ಕಿಟ್ಟು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿಯರ್ಸ್‌ಗಳಿಗೆ ಹೆಚ್ಚಿನ ಮಟ್ಟದ ಮುಂಜಾಗ್ರತೆ ಕ್ರಮಗಳ ಅವಶ್ಯವಿದ್ದು, ವೈರಸ್‌‌ ಭೀತಿಯಿಂದ ತಪ್ಪಿಸಿಕೊಳ್ಳಲು ನಿಯಮಿತವಾದ ಸ್ಯಾನಿಟೈಜ್ ಸೇವೆಯು ಅವಶ್ಯಕವಾಗಿದೆ.

Article Published On: Tuesday, June 16, 2020, 14:18 [IST]
English summary
MG Motor Ventilator Production Increased Amidst Rising Covid-19 Cases India Details. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+