Just In
Don't Miss!
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನ ದಾಖಲೆಗಳ ಮಾನ್ಯತೆ ಕುರಿತಂತೆ ಹೊಸ ಆದೇಶ ಹೊರಡಿಸಿದ ಕೇಂದ್ರ ಸಾರಿಗೆ ಇಲಾಖೆ
ಕರೋನಾ ವೈರಸ್‌ನಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟು ಸಾರಿಗೆ ವಲಯಕ್ಕೆ ಭಾರೀ ಹೊಡೆತ ನೀಡಿದ್ದು, ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಹಲವಾರು ವಿನಾಯ್ತಿಗಳನ್ನು ಘೋಷಣೆ ಮಾಡಿದೆ.

ದೇಶಾದ್ಯಂತ ಕರೋನಾ ವೈರಸ್ ಹೆಚ್ಚಿದ್ದರ ಪರಿಣಾಮ ಲಾಕ್‌ಡೌನ್ ಕ್ರಮವು ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗುವಂತೆ ಮಾಡಿತ್ತು. ಇದರಿಂದಾಗಿ ಲಾಕ್‌ಡೌನ್‌ನಿಂದಾದ ನಷ್ಟವನ್ನು ಸರಿದೂಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರವು ವಾಹನ ಮಾಲೀಕರಿಗೆ ಕೆಲವು ಪ್ರಮುಖ ವಿನಾಯ್ತಿಗಳನ್ನು ಘೋಷಣೆ ಮಾಡಿದ್ದು, ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ನಾಲ್ಕನೇ ಬಾರಿಗೆ ಹೆಚ್ಚಿಸಿದೆ.

ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿರುವ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ನಾಲ್ಕನೇ ಬಾರಿಗೆ ವಿಸ್ತರಣೆ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳ ಮಾನ್ಯತಾ ಅವಧಿಯನ್ನು 2021ರ ಮಾರ್ಚ್ ತನಕ ಮಾನ್ಯತಾ ಅವಧಿ ವಿಸ್ತರಣೆ ಮಾಡಿದೆ.

ಹಾಗೆಯೇ ವಿನಾಯ್ತಿ ಅವಧಿಯಲ್ಲಿ ಮುಕ್ತಾಯಗೊಂಡ ವಾಹನ ದಾಖಲೆಗಳ ನವೀಕರಣಕ್ಕೆ ಯಾವುದೇ ಹೆಚ್ಚುವರಿ ಮೊತ್ತ ವಿಧಿಸುವುದಿಲ್ಲ ಎಂಬುವುದನ್ನು ಸಹ ಸ್ಪಷ್ಟಪಡಿಸಿರುವ ಕೇಂದ್ರ ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದೆ.

ಹೊಸ ಆದೇಶದಂತೆ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿರುವ ಆರ್‌ಸಿ(ನೋಂದಣಿ ಪ್ರಮಾಣಪತ್ರ), ಡಿಎಲ್(ಚಾಲನಾ ಪ್ರಮಾಣಪತ್ರ) ಮತ್ತು ಎಫ್‌ಸಿ(ಫಿಟ್‌ನೆಸ್ ಪ್ರಮಾಣಪತ್ರ)ಗಳ ಮಾನ್ಯತಾ ಅವಧಿಯು ಮುಂದಿನ ಮಾರ್ಚ್ ಅಂತ್ಯದ ತನಕ ಮಾನ್ಯತೆ ಹೊಂದಿರಲಿದ್ದು, ಆರ್‌ಸಿ, ಡಿಎಲ್ ಮತ್ತು ಎಫ್‌ಸಿ ಹೊರತುಪಡಿಸಿ ವಾಹನಗಳ ಇನ್ಸುರೆನ್ಸ್ ಮೇಲೆ ಹೊಸ ಆದೇಶವು ಅನ್ವಯವಾಗುವುದಿಲ್ಲ.

ವಾಹನಗಳ ಇನ್ಸುರೆನ್ಸ್ ನವೀಕರಣ ಅವಧಿಯನ್ನು ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಮಗಿದ್ದ ವಾಹನ ಮಾಲೀಕರಿಗೆ ಲಾಕ್‌ಡೌನ್ ಅವಧಿಯಲ್ಲಿ ವಿನಾಯ್ತಿ ನೀಡಲಾಗಿತ್ತು. ಆದರೆ ಇದೀಗ ಡಿಎಲ್, ಆರ್‌ಸಿ ಮತ್ತು ಎಫ್‌ಸಿ ಹೊರತುಪಡಿಸಿ ಇನ್ಸುರೆನ್ಸ್ ಗೆ ಯಾವುದೇ ವಿನಾಯ್ತಿ ನೀಡಿಲ್ಲ.

ಇನ್ನು ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಮುಂದುವರಿಸಿರುವ ಕೇಂದ್ರ ಸರ್ಕಾರವು ಸಂಕಷ್ಟ ಸಮಯದಲ್ಲೂ ವಾಣಿಜ್ಯ ಚಟುವಟಿಕೆಗಳಿಗೆ ವಿನಾಯ್ತಿ ನೀಡಿದ್ದು, ವಾಹನ ದಾಖಲೆಗಳಿಗೆ ಹೆಚ್ಚುವರಿ ಮಾನ್ಯತಾ ಅವಧಿಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದರೊಂದಿಗೆ ವಿಮಾ ಮಾಹಿತಿ ಬ್ಯೂರೋ ತನ್ನ ವಾರ್ಷಿಕ ವರದಿಯನ್ನು ಬಹಿರಂಗಪಡಿಸಿದ್ದು, ಈ ವರದಿಯಲ್ಲಿ ವಾಹನ ವಿಮೆಗೆ ಸಂಬಂಧಿಸಿದ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ನಮ್ಮ ದೇಶದಲ್ಲಿ ಸುಮಾರು ಶೇ. 57ರಷ್ಟು ವಾಹನಗಳು ವಿಮೆಯಿಲ್ಲದೆ ಅಥವಾ ವಿಮೆ ನವೀಕರಿಸದೆ ಓಡಾಡುತ್ತಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರಗಳ ನಿಧಾನಗತಿಯ ಸಂಚಾರ ವ್ಯವಸ್ಥೆ, ಅನಿಯಂತ್ರಿತ ವಿಮಾ ಕಂಪನಿಗಳು ಹಾಗೂ ಹೆಚ್ಚುತ್ತಿರುವ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಬೆಲೆಗಳು ಈ ಪರಿಸ್ಥಿತಿಗೆ ಕಾರಣವೆಂದು ವಿಮಾ ಮಾಹಿತಿ ಬ್ಯೂರೋ ತನ್ನ ವರದಿಯಲ್ಲಿ ತಿಳಿಸಿದೆ. ಅಂಕಿಅಂಶಗಳ ಪ್ರಕಾರ 2018-2019ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ವಿಮೆ ಮಾಡದ ವಾಹನಗಳ ಸಂಖ್ಯೆ ಶೇ.54ರಷ್ಟಿತ್ತು.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಈ ಪ್ರಮಾಣವು 2018-2019ರ ಆರ್ಥಿಕ ವರ್ಷದಲ್ಲಿ ಶೇ.57ಕ್ಕೆ ಏರಿಕೆಯಾಗಿತ್ತು. 2019ರ ಮಾರ್ಚ್ ವೇಳೆಗೆ ದೇಶದಲ್ಲಿ 23 ಕೋಟಿ ನೋಂದಾಯಿತ ವಾಹನಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಶೇ.57ರಷ್ಟು ವಾಹನಗಳು ವಿಮೆಯನ್ನು ಹೊಂದಿಲ್ಲ. ಹಾಗೆಯೇ ದೇಶದಲ್ಲಿರುವ ಸುಮಾರು ಶೇ.13.2 ರಷ್ಟು ವಾಹನಗಳು ಕಡ್ಡಾಯವಾಗಿರುವ ಥರ್ಡ್ ಪಾರ್ಟಿ ಇನ್ಸ್ಯೂರೆನ್ಸ್ ಇಲ್ಲದೇ ಚಲಿಸುತ್ತಿವೆ ಎಂದು ಹೇಳಲಾಗಿದೆ.