ಕಾರು ಖರೀದಿಯಲ್ಲಿ ಇಳಿಮುಖ- ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಮಾಹಾಮಾರಿ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟವು ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಆಟೋ ಕಂಪನಿಗಳ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಎಂಜಿ ಕಂಪನಿಯು ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಆರಂಭಿಸಿದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಸದ್ಯ ಮಾರುಕಟ್ಟೆಯಲ್ಲಿ ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ವಾಹನ ಉತ್ಪಾದನಾ ಕಂಪನಿಗಳು ಪರದಾಡುತ್ತಿವೆ. ಜೊತೆಗೆ ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರ ಹೊಸ ವಾಹನಗಳ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಕರೋನಾ ವೈರಸ್ ಸಂಕಷ್ಟದಿಂದ ಸದ್ಯಕ್ಕೆ ಹೊಸ ವಾಹನಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದು, ಲಾಕ್‌ಡೌನ್ ವಿನಾಯ್ತಿ ನಂತರ ಭಾರೀ ಪ್ರಮಾಣದ ವಾಹನ ಮಾರಾಟ ಯೋಜನೆಯಲ್ಲಿದ್ದ ಆಟೋ ಕಂಪನಿಗಳಿಗೆ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿರುವುದು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಸಿದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಕರೋನಾ ವೈರಸ್ ಅಬ್ಬರದಿಂದ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಬಹುದು ಎನ್ನುವ ಭಯದಿಂದ ಹೊಸ ವಾಹನಗಳ ಖರೀದಿ ಯೋಜನೆಯನ್ನು ಮುಂದೂಡುತ್ತಿರುವ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಣ ವಾಪಸ್ ಪಡೆದುಕೊಳ್ಳುತ್ತಿದ್ದಾರೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಇನ್ನು ಕೆಲವು ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

MOST READ: ಅಕ್ಟೋಬರ್ 1ರಿಂದ ಹೊಸ ಸ್ಟಿಕ್ಕರ್ ಹೊಂದಲಿವೆ ಬಿಎಸ್ 6 ವಾಹನಗಳು

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕೂಡಾ ಈ ನಿಟ್ಟಿನಲ್ಲಿ ಮೈಲೇಸ್‌ಕಾರ್ ಎನ್ನುವ ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಕಂಪನಿಯ ಜೊತೆಗೂಡಿ ಹೆಕ್ಟರ್ ಕಾರು ಮಾದರಿಯನ್ನು ತಿಂಗಳು, ವರ್ಷದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ರೂ. 40 ಸಾವಿರ ಚಂದಾದಾರಿಕೆ ದರವನ್ನು ನಿಗದಿಪಡಿಸಲಾಗಿದ್ದು, ಹೆಕ್ಟರ್ ಸೆಲ್ಪ್ ಡ್ರೈವ್ ಕಾರ್ ರೆಂಟಲ್ ಪಡೆದುಕೊಳ್ಳುವ ಗ್ರಾಹಕರನ್ನು ಕನಿಷ್ಠ 6 ತಿಂಗಳು ನೋಂದಣಿ ಮಾಡಿಕೊಳ್ಳಬೇಕು.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಚಂದಾ ದರವು ನಿಗದಿತ ಕಿ.ಮೀ ಗೆ ಅನ್ವಯವಾಗಲಿದ್ದು, ಹೆಚ್ಚುವರಿ ರನ್ನಿಂಗ್ ಆಗಿದ್ದಲ್ಲಿ ಹೆಚ್ಚುವರಿ ದರ ಪಾವತಿ ಮಾಡಬೇಕಾಗುತ್ತದೆ. ಮತ್ತು ಚಂದಾದಾರಿಕೆಯ ಅವಧಿಯು ಗರಿಷ್ಠ 5 ವರ್ಷಗಳಿಗೆ ನೀಡಲಾಗುತ್ತದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಈ ವೇಳೆ ಚಂದಾ ದರದಲ್ಲೇ ಕಾರಿನ ಇನ್ಸುರೆನ್ಸ್, ನಿರ್ವಹಣಾ ವೆಚ್ಚ, ರೋಡ್ ಸೈಡ್ ಅಸಿಸ್ಟ್ ಒಳಗೊಂಡಿದ್ದು, ಗರಿಷ್ಠ ಅವಧಿಯ ಚಂದಾದಾರಿಕೆಯ ಮೇಲೆ ತೆರಿಗೆ ಉಳಿತಾಯಕ್ಕೂ ಅನುಕೂಲಕರವಾಗುವಂತೆ ವಿವಿಧ ಪ್ಯಾಕೇಜ್ ನೀಡಲಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಮೈಲೇಸ್‌ಕಾರ್ ರೆಂಟಲ್ ಕಾರು ಕಂಪನಿಯು ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಹೈದ್ರಾಬಾದ್ ಮತ್ತು ಚೆನ್ನೈ ನಗರದಲ್ಲಿ ಮಾತ್ರವೇ ಕಾರ್ಯಾಚರಣೆ ಹೊಂದಿದ್ದು, ಆಯ್ದ ನಗರಗಳಲ್ಲಿ ಮಾತ್ರವೇ ಈ ಸೇವೆ ಲಭ್ಯವಿದೆ.

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಆದರೆ ಸೆಲ್ಪ್ ಡ್ರೈವ್ ರೆಂಟಲ್ ಕಾರುಗಳನ್ನು ಹೊಂದುವುದು ತಾತ್ಕಾಲಿಕವಾಗಿ ಉತ್ತಮವಾದ ಕ್ರಮವಾಗಿದ್ದರೂ ಧೀರ್ಘಾವಧಿಯಲ್ಲಿ ಇದರಿಂದ ನಷ್ಟವೇ ಹೆಚ್ಚು. ಉದಾಹರಣೆ ಹೆಕ್ಟರ್ ಕಾರನ್ನು ನೀವು 5 ವರ್ಷಗಳಿಗೆ ಸೆಲ್ಪ್ ಡ್ರೈವ್ ರೆಂಟಲ್‌ಗೆ ಪಡೆದುಕೊಂಡಲ್ಲಿ ಪ್ರತಿತಿಂಗಳು ರೂ.40 ಸಾವಿರದಂತೆ ರೂ.25 ಲಕ್ಷ ಹಣ ಪಾವತಿ ಮಾಡಬೇಕಾಗುತ್ತದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಸೆಲ್ಪ್‌ ಡ್ರೈವ್‌ ರೆಂಟಲ್‌ ಕಾರ್‌ ಪರಿಚಯಿಸಿದ ಎಂಜಿ ಮೋಟಾರ್

ಒಂದು ವೇಳೆ ಹೊಸ ಕಾರುನ್ನು ಖರೀದಿ ಮಾಡಿದರೂ ಕೂಡಾ ಚಂದಾ ಹಣಕ್ಕಿಂತಲೂ ಕಡಿಮೆ ಹಣಕಾಸಿನ ಸೌಲಭ್ಯದೊಂದಿಗೆ ಸ್ವಂತ ಕಾರನ್ನೆ ಖರೀದಿಗೆ ಮಾಡಬಹುದು. ಹೆಕ್ಟರ್ ಕಾರು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.73 ಲಕ್ಷ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯು ರೂ.17.72 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
MylesCar Adds MG Hector Subscription Model For Self-Drive Rentals Starting At Rs 40,000 Per Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X