ಡೀಲರ್ ಬಳಿ ಕಾಣಿಸಿಕೊಂಡ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿ
ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್ಎಸ್ ಕ್ಯೂ8 ಎಸ್‍ಯುವಿಯ ಅಧಿಕೃತ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಆಡಿ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಕೂಡ ಈಗಾಗಲೇ ಪ್ರಾರಂಭಿಸಿದೆ. ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಗಾಗಿ ಗ್ರಾಹಕರು ಟೋಕನ್ ಮೊತ್ತ ರೂ.15 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದೀಗ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಯ ಯುನಿಟ್ ಗಳು ಈಗಾಗಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ.

ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಯು ಡೀಲರ್ ಬಳಿ ತಲುಪಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಬ್ಲ್ಯೂ ಬಣ್ಣದ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಯು ಡೀಲರ್ ಬಳಿ ಕಾಣಿಸಿಕೊಂಡಿದೆ. ಈ ಹೊಸ ಆಡಿ ಎಸ್‍ಯುವಿಯು ಇತರ ಬಣ್ಣಗಳಲ್ಲಿ ಕೂಡ ಲಭ್ಯವಿರಲಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಆಡಿ ಆರ್‍ಎಸ್ ಕ್ಯೂ8 ಪವರ್ ಫುಲ್ ಎಸ್‍ಯುವಿ ಕೂಪ್ ಆಗಿದೆ. ಈ ಹೊಸ ಆಡಿ ಎಸ್‍ಯುವಿಯು ಕಂಪನಿಯ ಆರ್‍ಎಸ್ ಸರಣಿಗೆ ಸೇರ್ಪಡೆಯಾಗಿದೆ. ಈ ಎಸ್‍ಯುವಿಯಲ್ಲಿ 4.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಆಡಿಯ ಕ್ವಾಟ್ರೊ ಆಲ್-ವೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸಾಮಾನ್ಯ ಕ್ಯೂ8 ಎಸ್‌ಯುವಿಗೆ ಹೋಲಿಸಿದರೆ, ಆರ್‌ಎಸ್ ಕ್ಯೂ8 ಮಾದರಿಯು ಯಾಂತ್ರಿಕ ನವೀಕರಣಗಳನ್ನು ಸ್ಪೋರ್ಟಿಯರ್ ಆಗಿದೆ. ಈ ಹೊಸ ಆರ್ಎಸ್ ಕ್ಯೂ8 ಎಸ್‍ಯುವಿಯು ಕೇವಲ 3.8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ ಎಂದು ಆಡಿ ಕಂಪನಿ ಹೇಳಿಕೊಂಡಿದೆ.

ಇನ್ನು ಹೊಸ ಸಿಂಗಲ್‌ಫ್ರೇಮ್ ಗ್ರಿಲ್, ದೊಡ್ಡ ಏರ್ ಇನ್ ಟೇಕ್, ಕಸ್ಟಮ್ ಸೈಡ್ ಸಿಲ್ಸ್, ಆರ್‍ಎಸ್ ರೂಫ್ ಸ್ಪಾಯ್ಲರ್ ಮತ್ತು ಹಿಂಭಾಗದ ಡಿಫ್ಯೂಸರ್ನಂತಹ ಕೆಲವು ವಿಭಾಗಗಳು ಸಾಮಾನ್ಯ ಕ್ಯೂ8 ಗಿಂತ ಆರ್‍ಎಸ್ ಕ್ಯೂ8 ಎಸ್‍ಯುವಿಯ ಹೊರಭಾಗದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಈ ಹೊಸ ಎಸ್‍ಯುವಿಯಲ್ಲಿ 22 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಕ್ಯೂ8 ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ರೂ.1.34 ಕೋಟಿಗಲಾಗಿದೆ. ಇನ್ನು ಆರ್ಎಸ್ ಕ್ಯೂ8 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.2 ಕೋಟಿ ಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಹೊಸ ಆಡಿ ಆರ್‍ಎಸ್ ಕ್ಯೂ8 ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ, ಈ ಹೊಸ ಆಡಿ ಆರ್‍ಎಸ್ ಕ್ಯೂ8 ಪರ್ಫಾಮೆನ್ಸ್ ಎಸ್‍ಯುವಿಯು ಲಂಬೋರ್ಗಿನಿ ಉರಸ್ ಮತ್ತು ಪೋರ್ಷೆ ಕೇಯೆನ್ ಟರ್ಬೊ ಕೂಪೆ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








