ಹೊಸ ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯ ಟೀಸರ್ ಬಿಡುಗಡೆ
ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್‍ಎಸ್ ಕ್ಯೂ8 ಎಸ್‍ಯುವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಆಡಿ ಕಂಪನಿಯು ಇದೀಗ ಹೊಸ ಆರ್‍ಎಸ್ ಕ್ಯೂ8 ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಆಡಿ ಕಂಪನಿಯು ಇತ್ತೀಚೆಗೆ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್ ಮಾದರಿಯನ್ನು ಬಿಡುಗಡೆಗೊಳಿಸುವಾಗ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆರ್‍ಎಸ್ ಮಾದರಿಯನ್ನು ಬಿಡುಗಡೆಗೊಳಿಸಲು ಯೋಚಿಸಿದೆ ಎಂದು ಹೇಳಿದ್ದರು. ಇದೀಗ ಮತ್ತೊಂದು ಆರ್‍ಎಸ್ ಪರ್ಫಾಮೆನ್ಸ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತೇವೆ.

ಆಡಿ ಕ್ಯೂ8 ಕಾರನ್ನು 2019ರಲ್ಲಿ ಲಾಸ್ ಏಂಜಲೀಸ್ ನಡೆದ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿತು. ಪ್ರಸ್ತುತ ಜರ್ಮನಿಯ ನೂರ್‌ಬರ್ಗ್ರಿಂಗ್ ಸರ್ಕ್ಯೂಟ್‌ನಲ್ಲಿ ಅತಿ ವೇಗದ ಎಸ್‍ಯುವಿಯು ಇದು 7 ನಿಮಿಷ 42.2 ಸೆಕೆಂಡುಗಳ ಲ್ಯಾಪ್ ಸಮಯದ ದಾಖಲೆಯನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ಆಡಿ ಆರ್ಎಸ್ ಕ್ಯೂ8 ಮಾದರಿಯು ಸಾಮಾನ್ಯ ಕ್ಯೂ8 ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯಲ್ಲಿ ಹೊಸ ಸಿಂಗಲ್-ಫ್ರೇಮ್ ಗ್ರಿಲ್, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳು ಮತ್ತು ಆರ್‍ಎಸ್-ಸ್ಪೆಕ್ ಸ್ಪಾಯ್ಲರ್ ಅನ್ನು ಒಳಗೊಂಡಿವೆ.

ಆರ್ಎಸ್ ಕ್ಯೂ8 ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯು 22 ಇಂಚಿನ ಅಲಾಯ್ ವ್ಹೀಲ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರೊದಿಗೆ 23 ಇಂಚಿನ ಅಲಾಯ್ ವ್ಹೀಲ್ ಆಯ್ಕೆಯು ಕೂಡ ಲಭ್ಯವಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಇನ್ನು ಈ ಹೊಸ ಆರ್‍ಎಸ್ ಕ್ಯೂ8 ಎಸ್‍ಯುವಿಯ ಇಂಟಿರಿಯರ್ ನಲ್ಲಿ ಸ್ಪೋರ್ಟಿ ಸೀಟುಗಳು, ಆರ್ಎಸ್ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ವರ್ಚುವಲ್ ಕಾಕ್‌ಪಿಟ್ ಅನ್ನು ಹೊಂದಿರಲಿದೆ.

ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯಲ್ಲಿ 4.0-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 600 ಬಿಹೆಚ್‌ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಕ್ವಾಟ್ರೋ ಆಲ್-ವೀಲ್ ಡ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಇದರೊಂದಿಗೆ ಆಡಿ ತನ್ನ ಹೊಸ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್ ಕಾರನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಕೋಟಿಗಳಾಗಿದೆ.

ಈ ಹೊಸ ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಆಡಿ ಆರ್ಎಸ್ ಕ್ಯೂ8 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತೇವೆ.


Click it and Unblock the Notifications








