ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರನ್ನು ಈ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಬಿಎಂಡಬ್ಲ್ಯು ಕಂಪನಿಯು ಜರ್ಮನಿಯ ಡಿಂಗೋಲ್ಫಿಂಗ್ ಸ್ಥಾವರದಲ್ಲಿ ಈ ಗೋಲ್ಡನ್ ಥಂಡರ್ ಮಾದರಿಗಳನ್ನು ತಯಾರಿಸಲಿದೆ. ಈ ಹೊಸ 8 ಸೀರಿಸ್ ಗೋಲ್ಡನ್ ಥಂಡರ್ ಕಾರಿನಲ್ಲಿ ಚಿನ್ನದ ಲೇಪನವನ್ನು ಮಾಡಿದ್ದಾರೆ. ಈ ಕಾರಿನ ಹೆಚ್ಚಿನ ಬಾಡಿವರ್ಕ್ ಫ್ರೋಜನ್ ಬ್ಲ್ಯಾಕ್ ಮೆಟಾಲಿಕ್ ಅಥವಾ ಸಫೈರ್ ಬ್ಲ್ಯಾಕ್ ಮೆಟಾಲಿಕ್ ನಲ್ಲಿ ಫಿನಿಶಿಂಗ್ ಮಾಡಲಾಗಿದೆ. ಡಾರ್ಕ್ ಥೀಮ್ ಬಿಎಂಡಬ್ಲ್ಯು ಇಂಡಿವಿಜುವಲ್ ಹೈ ಗ್ಲೋಸ್ ಶ್ಯಾಡೋ ಲೈನ್‌ನಿಂದ ಕೂಡಿದೆ. ಈ ಕಾರಿನಲ್ಲಿ ಆಲ್-ಬ್ಲ್ಯಾಕ್ ಕ್ಯಾಲಿಪರ್‌ಗಳನ್ನು ನೀಡಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಹೊಸ ಬಿಎಂಡಬ್ಲು 8 ಸೀರಿಸ್ ಗೋಲ್ಡನ್ ಥಂಡರ್ ಕಾರಿನ ಮುಂಭಾಗದಿಂದ ಹಿಂಭಾಗದ ಏಪ್ರನ್ಗೆ ಚಿನ್ನ ಲೇಪನದ ಲೈನ್ ನಿಂದ ಹೆಚ್ಚಿನ ಆಕರ್ಷಣೆಯನ್ನು ಹೊಂದಿದೆ. ಈ ಕಾರಿನ ಒಆರ್‌ವಿಎಂ, ಎಂ ರೇರ್ ಸ್ಪಾಯ್ಲರ್ ಮತ್ತು 20 ಇಂಚಿನ ಎಂ ಲೈಟ್ ಅಲಾಯ್ ವ್ಹೀಲ್‌ಗಳು ಚೀನದ ಲೇಪನದಿಂದ ಕೂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಈ ಹೊಸ ಕಾರಿನ ಇಂಟಿರಿಯರ್ ನಲ್ಲಿ ಬಿಎಂಡಬ್ಲ್ಯುನ ಮೆರಿನೊ ಲೆದರ್ ಸೀಟುಗಳನ್ನು ಹೊಂದಿದೆ. ಗೋಲ್ಡನ್ ಥಂಡರ್ ಕಾರಿನ ಮುಂಭಾಗದ ಸೀಟುಗಳಲ್ಲಿ ಹೆಡ್‌ರೆಸ್ಟ್ ಗಳನ್ನು ಹೊಂದಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಇನ್ನು ಬಿಎಂಡಬ್ಲ್ಯು 8 ಸೀರಿಸ್‌ನ ಇತರ ಕಾರಿನಲ್ಲಿರುವಂತಹ ಅಲ್ಕಾಂಟರಾ ಆಂಥ್ರಾಸೈಟ್ ರೂಫ್ ಲೈನರ್ ಫೀಚರ್ ಗಳನ್ನು ಹೊಂದಿದೆ. ಅಲ್ಯೂಮಿನಿಯಂ ಮೆಶ್ ಎಫೆಕ್ಟ್ ನೊಂದಿಗೆ ಗೋಲ್ಡನ್ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಹೊಸ ಐಷಾರಾಮಿ ಆಡಿ ಕಾರುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಹೊಸ ಬಿಎಂಡಬ್ಲು 8 ಸೀರಿಸ್ ಗೋಲ್ಡನ್ ಥಂಡರ್ ಕಾರಿನ ಇಂಟಿರಿಯರ್ ನಲ್ಲಿರುವ ಸೆಂಟರ್ ಕನ್ಸೋಲ್‌ನಲ್ಲಿ ಕ್ರಾಫ್ಟೆಡ್ ಕ್ಲಾರಿಟಿ ಗಾಜಿನ ಅಂಶಗಳನ್ನು ಸಹ ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ವಿಲ್ಕಿನ್ಸ್ ಡೈಮಂಡ್ ಸರೌಂಡ್ ಸಿಸ್ಟಂ ಅನ್ನು ಹೊಂದಿರುವುದು ಮತ್ತೊಂದು ಪ್ರಮುಖ ಅಂಶವಾಗಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಇನ್ನುಬಿಎಂಡಬ್ಲ್ಯು ಇಂಡಿಯಾ ತನ್ನ ಎಕ್ಸ್5 ಎಸ್‌ಯುವಿಯ ಹೊಸ ಸ್ಪೋರ್ಟ್‌ಎಕ್ಸ್ ವೆರಿಯೆಂಟ್ ಅನ್ನು ಸದ್ದಿಲ್ಲದೆ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಸ್ಪೋರ್ಟ್‌ಎಕ್ಸ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.74.90 ಲಕ್ಷಗಳಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಹೊಸ ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಸ್ಪೋರ್ಟ್‌ಎಕ್ಸ್ ಬ್ರ್ಯಾಂಡ್‌ನ ಇತ್ತೀಚಿನ ಎಂಟ್ರಿ ಲೆವೆಲ್ ಮಾದರಿಯಾಗಿದೆ. 2020ರ ಬಿಎಂಡಬ್ಲ್ಯು ಎಕ್ಸ್5 ಎಸ್‍ಯುವಿಯು ಎಕ್ಸ್‌ಡ್ರೈವ್ 30ಡಿ ಸ್ಪೋರ್ಟ್‌ಎಕ್ಸ್, ಎಕ್ಸ್‌ಡ್ರೈವ್ 30ಡಿ ಎಕ್ಸ್‌ಲೈನ್ ಮತ್ತು ಎಕ್ಸ್‌ಡ್ರೈವ್ 40ಐ ಎಂ ಸ್ಪೋರ್ಟ್ ಎಂಬ ಮೂರು ರೂಪಾಂತರಗಳಲ್ಲಿ(ವೆರಿಯೆಂಟ್) ಲಭ್ಯವಿದೆ.

ಅನಾವರಣವಾಯ್ತು ಬಿಎಂಡಬ್ಲ್ಯು 8 ಸೀರಿಸ್ ಗೋಲ್ಡನ್ ಥಂಡರ್ ಕಾರು

ಜೀಮ್ಸ್ ಬಾಂಡ್ ಚಿತ್ರಗಳಲ್ಲಿ ಈ ಕಾರಿನ ಹೆಸರನ್ನು ಕೇಳಿರುತ್ತೀರಿ. ಗೋಲ್ಡನ್ ಥಂಡರ್ ಹೆಸರಿಗೆ ತಕ್ಕಂತೆ ಕಾರಿನ ಬಾಡಿಯಲ್ಲಿ ಚಿನ್ನದ ಲೇಪನವಿದೆ. ಈ ಕಾರಿನಲ್ಲಿ ಚಿನ್ನದ ಲೇಪನವಿರುವುದರಿಂದ ಈ ಕಾರು ಮತ್ತಷ್ಟು ಐಷಾರಾಮಿಯಾಗಿದೆ.

Most Read Articles

Kannada
English summary
BMW 8 Series Edition Golden Thunder Unveiled. Read In Kannada.
Story first published: Tuesday, June 23, 2020, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X