ಮೇ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಭಾರೀ ಕುಸಿತ ಕಂಡ ಆಟೋ ಕಂಪನಿಗಳು...!
ಕರೋನಾ ವೈರಸ್ ಪರಿಣಾಮ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿವೆ.

ಸದ್ಯ ವೈರಸ್ ಭೀತಿ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಮೇ ಅವಧಿಯಲ್ಲಿ ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.70ರಿಂದ ಶೇ.97ರಷ್ಟು ಕುಸಿತ ಕಂಡುಬಂದಿದೆ. ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟ ಮಾರಾಟದಲ್ಲಿ ಚೇತರಿಕೆ ಕಾಣಬಹುದು ಎನ್ನಲಾಗಿದೆ.

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದು, ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುತ್ತಿವೆ.

ಹೊಸ ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ವಾಹನ ಮಾರಾಟವು ಮಂದಗತಿಯಲ್ಲಿ ಸಾಗಿದ್ದು, ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಾರ್ಚ್ 15ರ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

ದೇಶದ ನಂ.1 ಕಾರು ಮಾರಾಟ ಕಂಪನಿಯಾದ ಮಾರುತಿ ಸುಜುಕಿಯು ಸಹ ಈ ಬಾರಿ ಕಳೆದ ವರ್ಷದ ಮೇ ಅವಧಿಯಲ್ಲಿನ ಕಾರು ಮಾರಾಟಕ್ಕಿಂತ ಶೇ.88ರಷ್ಟು ಹಿನ್ನಡೆ ಅನುಭವಿಸಿದ್ದು, ಮೇ4ರಿಂದ 31ರ ಅವಧಿಯಲ್ಲಿ 13,865 ಕಾರಗಳನ್ನು ಮಾರಾಟ ಮಾಡಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹಾಗೆಯೇ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಹ್ಯುಂಡೈ ಕೂಡಾ ಶೇ.83ರಷ್ಟು ಹಿನ್ನಡೆಯೊಂದಿಗೆ 6,883 ಕಾರುಗಳನ್ನು ಮಾರಾಟ ಮಾಡಿದ್ದು, ಮಹೀಂದ್ರಾ ಕಂಪನಿಯು 3,867 ಯುನಿಟ್, ಟಾಟಾ ಮೋಟಾರ್ಸ್ 3,153 ಯುನಿಟ್ ಮಾರಾಟ ಮಾಡಿವೆ.

ನಂತರದ ಸ್ಥಾನದಲ್ಲಿರುವ ರೆನಾಲ್ಟ್ ಕಂಪನಿಯು 1,753 ಯುನಿಟ್, ಕಿಯಾ ಮೋಟಾರ್ಸ್ 1,661 ಯುನಿಟ್, ಟೊಯೊಟಾ 1,639 ಯುನಿಟ್, ಫೋಕ್ಸ್‌ವ್ಯಾಗನ್ 1,404 ಯುನಿಟ್, ಎಂಜಿ ಮೋಟಾರ್ 710 ಯುನಿಟ್, ಫೋರ್ಡ್ 571 ಯುನಿಟ್, ಸ್ಕೋಡಾ 508 ಯುನಿಟ್, ನಿಸ್ಸಾನ್ 378 ಯುನಿಟ್, ಹೋಂಡಾ 375 ಯುನಿಟ್ ಮತ್ತು ಎಫ್‌ಸಿಎ(ಜೀಪ್) 93 ಯುನಿಟ್ ಮಾರಾಟ ಮಾಡಿವೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೀಗಾಗಿ ಜೂನ್ ಅವಧಿಯ ಕಾರು ಮಾರಾಟದಲ್ಲಿ ಹೆಚ್ಚು ಮಾರಾಟ ದಾಖಲೆಯನ್ನು ದಾಖಲಿಸಲು ಯತ್ನಿಸುತ್ತಿರುವ ಬಹುತೇಕ ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯಗಳೊಂದಿಗೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿ ಗ್ರಾಹಕರ ಸೆಳೆಯುವ ಯತ್ನಯಲ್ಲಿದೆ.


Click it and Unblock the Notifications