ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳಿವು
ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ಮಾರ್ಚ್ ತಿಂಗಳನ್ನು ಹೆಚ್ಚು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 7 ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ 7 ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

1. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ
ಹ್ಯುಂಡೈ ತನ್ನ ಹೊಸ ತಲೆಮಾರಿನ ಕ್ರೆಟಾ ಕಾರ್ ಅನ್ನು ಮಾರ್ಚ್ 17ರಂದು ಬಿಡುಗಡೆಗೊಳಿಸಲಿದೆ. ಈ ಕಾರು ಹೊಸ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ಬೆಲೆ ರೂ.10 ಲಕ್ಷದಿಂದ ರೂ.17 ಲಕ್ಷಗಳಾಗುವ ಸಾಧ್ಯತೆಗಳಿವೆ.

2. ಹ್ಯುಂಡೈ ವರ್ನಾ ಫೇಸ್ ಲಿಫ್ಟ್
ಹ್ಯುಂಡೈ ಕಂಪನಿಯು ವರ್ನಾ ಕಾರ್ ಅನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್ ಮಾಡಿ ಬಿಡುಗಡೆಗೊಳಿಸಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್‍ನಲ್ಲಿ ಹೊಸ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಕಾಣಬಹುದು. ಈ ಕಾರಿನ ಬೆಲೆಯು ರೂ.8 ಲಕ್ಷದಿಂದ ರೂ.14 ಲಕ್ಷಗಳಾಗಬಹುದು.

3. ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್
ಹ್ಯುಂಡೈ ಕಂಪನಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಟಕ್ಸನ್ ಕಾರನ್ನು ಬಿಡುಗಡೆಗೊಳಿಸಲಿದೆ. ಇವುಗಳಲ್ಲಿ 2.0-ಲೀಟರಿನ ಪೆಟ್ರೋಲ್ ಎಂಜಿನ್ 149 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, 2.0 ಲೀಟರಿನ ಡೀಸೆಲ್ ಎಂಜಿನ್ 182 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

4. ಟಾಟಾ ಹೆಕ್ಸಾ ಸಫಾರಿ ಎಡಿಷನ್
ಟಾಟಾ ಮೋಟಾರ್ಸ್ ಕಂಪನಿಯು ಈ ಕಾರ್ ಅನ್ನು ಕಳೆದ ತಿಂಗಳು ನಡೆದಿದ್ದ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು. ಈ ಕಾರಿನಲ್ಲಿ ಅನೇಕ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಟಾಟಾ ಸಫಾರಿಯ ನೆನಪಿಗಾಗಿ ಈ ಕಾರನ್ನು ತಯಾರಿಸಲಾಗಿದೆ. ಈ ಕಾರ್ ಅನ್ನು 2.2 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆ ರೂ.20 ಲಕ್ಷಗಳಾಗಬಹುದು.

5. ಮಾರುತಿ ಸುಜುಕಿ ಎಸ್-ಕ್ರಾಸ್
ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಮೊದಲ ಬಾರಿಗೆ ಬಿಡುಗಡೆಗೊಳಿಸುತ್ತಿದೆ. ಈ ಕಾರಿನಲ್ಲಿ 1.5-ಲೀಟರಿನ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಮಾರುತಿ ಸಿಯಾಜ್, ಎರ್ಟಿಗಾ ಮತ್ತು ಎಕ್ಸ್ಎಲ್ 6 ಕಾರುಗಳಲ್ಲಿಯೂ ಅಳವಡಿಸಲಾಗಿದೆ. ಈ ಕಾರಿನ ಬೆಲೆ ರೂ.9 ಲಕ್ಷದಿಂದ ರೂ.12 ಲಕ್ಷಗಳಾಗಲಿದೆ.

6. ಫೋಕ್ಸ್‌ವ್ಯಾಗನ್ ಟಿ-ರಾಕ್
ಫೋಕ್ಸ್‌ವ್ಯಾಗನ್ ಕಂಪನಿಯು ಟಿ-ರಾಕ್ ಕಾರ್ ಅನ್ನು ಈ ತಿಂಗಳ 18ರಂದು ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಗೊಳಿಸಲಿದೆ. ಈ ಕಾರಿನಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಬಳಸಲಾಗುವುದು. ಈ ಕಾರಿನ ಬೆಲೆ ರೂ.18 ಲಕ್ಷದಿಂದ ರೂ.22 ಲಕ್ಷಗಳಾಗುವ ಸಾಧ್ಯತೆಗಳಿವೆ.

7. ದಟ್ಸನ್ ರೆಡಿ-ಗೋ ಫೇಸ್‌ಲಿಫ್ಟ್
ದಟ್ಸನ್ ಕಂಪನಿಯ ಬಜೆಟ್ ಬೆಲೆಯ ಹ್ಯಾಚ್‌ಬ್ಯಾಕ್ ಕಾರ್ ಆದ ರೆಡಿ-ಗೋ ಫೇಸ್‌ಲಿಫ್ಟ್ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ಚಿಕ್ಕ ಕಾರ್ ಆಗಿದೆ. ಈ ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅನೇಕ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

0.8 ಲೀಟರ್ ಹಾಗೂ 1.0 ಲೀಟರ್ ಪೆಟ್ರೋಲ್ ಎಂಜಿನ್‍ಗಳೊಂದಿಗೆ ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆ ರೂ.2 ಲಕ್ಷ 80 ಸಾವಿರದಿಂದ ರೂ.4 ಲಕ್ಷ 50 ಸಾವಿರಗಳಾಗುವ ಸಾಧ್ಯತೆಗಳಿವೆ.


Click it and Unblock the Notifications