ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಭಾರತದಲ್ಲಿ ಈಗಾಗಲೇ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ಆಫ್ ರೋಡ್ ಮಾದರಿಗಳ ಮಾರಾಟದೊಂದಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಫೋರ್ಸ್ ಮೋಟಾರ್ಸ್ ಸಹ ತನ್ನ ಜನಪ್ರಿಯ ಗೂರ್ಖಾ ಆವೃತ್ತಿಯನ್ನು ಹೊಸ ಫೀಚರ್ಸ್‌ಗಳೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡುತ್ತಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಫೋರ್ಸ್ ಮೋಟಾರ್ಸ್ ಗೂರ್ಖಾ ಆಫ್ ರೋಡ್ ಆವೃತ್ತಿಯನ್ನು ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಹೊಸ ಎಮಿಷನ್ ನಿಯಮದೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದೆ. ಬಿಎಸ್-6 ಎಂಜಿನ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಹೊಸ ಗೂರ್ಖಾ ಆವೃತ್ತಿಯು ಮುಂದಿನ ತಿಂಗಳು ಮಾರ್ಚ್ ಅಂತ್ಯದೊಳಗೆ ಗ್ರಾಹಕರ ಕೈಸೇರಲಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಹೊಸ ಎಮಿಷನ್ ನಿಯಮದಿಂದಾಗಿ ವಾಹನಗಳ ಎಂಜಿನ್‌ನಲ್ಲಿ ಮಾತ್ರವಲ್ಲದೇ ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾಣೆ ಪರಿಚಯಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಆಫ್ ರೋಡ್ ಬಳಕೆಯ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಫೋರ್ಸ್ ಮೋಟಾರ್ಸ್ ಸಂಸ್ಥೆಯು 2020ರ ಗೂರ್ಖಾ ಆವೃತ್ತಿಯನ್ನು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಹೊಸ ಗೂರ್ಖಾ ಕಾರಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್, ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಪರ್ಫಾಮೆನ್ಸ್‌ಗೆ ಸಹಕಾರಿಯಾಗಿದೆ. ಹಾಗೆಯೇ ಹೊಸ ಕಾರಿನ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಹೊಸ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಆಫ್ ರೋಡ್ ಕಾರು ಚಾಲನೆಯು ಮತ್ತಷ್ಟು ಸುಗಮವಾಗಲಿದ್ದು, ಡ್ಯಾಶ್‌ಬೋರ್ಡ್ ತಾಂತ್ರಿಕ ಸೌಲಭ್ಯಗಳನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಜೋಡಿಸಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಎಂಜಿನ್ ಸಾಮರ್ಥ್ಯ

ಬಿಎಸ್-6 ಎಮಿಷನ್ ನಿಯಮದಂತೆ 2.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಹೊಸ ಗೂರ್ಖಾ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90-ಬಿಎಚ್‌ಪಿ ಮೂಲಕ ನಾಲ್ಕು ಚಕ್ರಗಳಿಗೂ ಶಕ್ತಿ ಪೂರೈಕೆಯ ಸೌಲಭ್ಯ ಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಬಿಎಸ್-6 ಫೋರ್ಸ್ ಗೂರ್ಖಾ

ಇದರೊಂದಿಗೆ ಹೊಸ ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಗೂರ್ಖಾದಲ್ಲಿ ನೀಡಲಾಗಿದೆ. ಹೊಸ ಕಾರು ಮಾರ್ಚ್ ಅಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆ ಕೂಡಾ ಬಿಎಸ್-4 ಆವೃತ್ತಿಗಿಂತಲೂ ತುಸು ದುಬಾರಿಯಾಗಲಿದೆ.

Most Read Articles

Kannada
English summary
New Force Gurkha engine features design specs update details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X