ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಫೋರ್ಡ್ ಇಂಡಿಯಾ ಕಂಪನಿಯು ತನ್ನ ಎಂಡೀವರ್ ಸ್ಪೋರ್ಟ್ ಬ್ಲ್ಯಾಕ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೊಸ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯು ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಫೋರ್ಡ್ ಇಂಡಿಯಾ ಹೊಸ ಎಂಡೀವರ್ ಸ್ಪೋರ್ಟ್ ಬ್ಲ್ಯಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವುದರ ಬಗೆ ಯಾವುದೇ ಸುಳಿವು ನೀಡರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಫೋರ್ಡ್ ಎಂಡೀವರ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಹೊಸ ಫೋರ್ಡ್ ಎಸ್‍ಯುವಿಯ ಬಗ್ಗೆ ಚರ್ಚೆಯಾಗಿ ಮಾರ್ಪಟ್ಟಿತು. ಈಗಾಗಲೇ ಈ ಹೊಸ ಎಂಡೀವರ್ ಸ್ಪೋರ್ಟ್ ಬ್ಲ್ಯಾಕ್ ಎಸ್‍ಯುವಿಯು ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ.

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಹೊಸ ಫೋರ್ಡ್ ಎಂಡೀವರ್ ಸ್ಪೋರ್ಟ್ ಬ್ಲ್ಯಾಕ್ ಎಸ್‍ಯುವಿಯು ಸಾಮಾನ್ಯ ಎಂಡೀವರ್ ಎಸ್‍ಯುವಿಯ ಜೊತೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡಿದ್ದು, ಇದನ್ನು ಮೋಟಾರ್‌ಬೀಮ್ ಬಹಿರಂಗಪಡಿಸಿದೆ. ಟೊಯೊಟಾ ಫಾರ್ಚೂನರ್ ಟಿಆರ್‌ಡಿ ಸ್ಪೋರ್ಟಿ ಎಸ್‍ಯುವಿಗೆ ಪೈಪೋಟಿ ನೀಡಲು ಫೋರ್ಡ್ ಕಂಪನಿಯು ಈ ಹೊಸ ಎಂಡೀವರ್ ಸ್ಪೋರ್ಟ್ ಬ್ಲ್ಯಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುತ್ತಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಬ್ಲ್ಯಾಕ್ ಔಟ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಬ್ಲ್ಯಾಕ್ ಲೋ ಬಂಪರ್, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚುವರಿಯಾಗಿ ನೇಮ್-ಪ್ಲೇಟ್ ಮತ್ತು ಒಆರ್‌ವಿಎಂಗಳಲ್ಲಿ ಬ್ಲ್ಯಾಕ್ ಅಂಶಗಳು ಒಳಗೊಂಡಿದೆ. ಈ ಹೊಸ ಎಂಡೀವರ್ ಸ್ಪೆಷಲ್ ಎಡಿಷನ್ ಎಸ್‍ಯುವಿಯ ಹಲವು ಕಡೆಗಳಲ್ಲಿ 'ಸ್ಪೋರ್ಟ್' ಬ್ಯಾಡ್ಜಿಂಗ್ ಅನ್ನು ಸಹ ನೋಡಬಹುದಾಗಿದೆ.

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಈ ಹೊಸ ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಮುಂಭಾಗದಲ್ಲಿ ಮತ್ತು ಸೈಡ್ ಪೊಫೈಲ್ ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಆದರೆ ಎಸ್‍ಯುವಿಯ ಹಿಂಭಾಗದ ಬಂಪರ್ ಸಿಲ್ವರ್ ಬಣ್ಣದ ಕ್ರೋಮ್‌ನ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಈ ಹೊಸ ಎಸ್‍ಯುವಿಯಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ. ಸ್ಪೋರ್ಟ್ ಆವೃತ್ತಿಯಲ್ಲಿ ಬ್ಲ್ಯಾಕ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿರಬಹುದು. ಸಾಮಾನ್ಯ ಎಂಡೀವರ್ ಎಸ್‍ಯುವಿಗೆ ಹೋಲಿಸಿದರೆ ಇಂಟಿರಿಯರ್ ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಹೊಂದಿರುವುದಿಲ್ಲ.

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಫೋರ್ಡ್ ಎಂಡೀವರ್ ಸ್ಪೋರ್ಟ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಈ ಎಸ್‍ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 168 ಬಿ‍‍ಹೆಚ್‍‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ‍ನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಿದೆ.

ಫಾರ್ಚೂನರ್ ಟಿಆರ್‌ಡಿ ಎಸ್‍ಯುವಿಗೆ ಟಕ್ಕರ್ ನೀಡಲು ಸಜ್ಜಾಗುತ್ತಿದೆ ಹೊಸ ಎಂಡೀವರ್

ಫೋರ್ಡ್ ಎಂಡೀವರ್ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಫೋರ್ಡ್ ಎಂಡೀವರ್ ಸ್ಪೋರ್ಟ್ಸ್ ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Article Published On: Thursday, September 10, 2020, 11:46 [IST]
English summary
Ford Endeavour Sport Black And Standard Variant – Spied Together. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+