ಬಿಡುಗಡೆಯಾಯ್ತು 2020ರ ರೇಂಜ್ ರೋವರ್ ಇವೊಕ್
ಲ್ಯಾಂಡ್ ರೋವರ್ ಇಂಡಿಯಾ ತನ್ನ ಎರಡನೇ ತಲೆಮಾರಿನ ರೇಂಜ್ ರೋವರ್ ಇವೊಕ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ರೇಂಜ್ ರೋವರ್ ಇವೊಕ್ ಎಸ್‍ಯುವಿಯ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.54.94 ಲಕ್ಷಗಳಾಗಿದೆ.

ಜಾಗ್ವರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಮಾತನಾಡಿ, ರೇಂಜ್ ರೋವರ್ ಇವೊಕ್ ತನ್ನ ಸೆಗ್‍ಮೆಂಟ್‍ನಲ್ಲಿ ಅತ್ಯಂತ ಸೊಗಸಾದ ಮತ್ತು ವಿಶಿಷ್ಟ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಹೊಸ ರೇಂಜ್ ರೋವರ್ ಇವೊಕ್ ಎಸ್‍ಯುವಿಯ ವಿನ್ಯಾಸ ಮತ್ತು ತಂತ್ರಜ್ಞಾನ ನವೀಕರಿಸಿದೆ. ಈ ಹೊಸ ಎಸ್‍ಯುವಿಯ ಸಾಮರ್ಥ್ಯವನ್ನು ಕೂಡ ಹೆಚ್ಚಿಸಿದೆ ಎಂದರು.

ನಮ್ಮ ಅತ್ಯಾಧುನಿಕ ವಿನ್ಯಾಸ ಮತ್ತು ಉನ್ನತ ತಂತ್ರಜ್ಞಾನದ ಅಂಶದೊಂದಿಗೆ ನಮ್ಮ ಇತ್ತೀಚಿನ ಎಲ್ಲಾ ರೇಂಚ್ ರೋವರ್ ಎಸ್‍ಯುವಿಗಳು ಗ್ರಾಹಕರನ್ನು ಆಕರ್ಷಣೆ ಮಾಡಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಬ್ರಿಟಿಷ್ ಮೂಲದ ಕಂಪನಿಯು ಮೊದಲ ಬಾರಿಗೆ ಭಾರತದಲ್ಲಿ ಮೊದಲ ತಲೆಮಾರಿನ ಇವೊಕ್ ಎಸ್‍ಯುವಿಯನ್ನು 2018ರಲ್ಲಿ ಬಿಡುಗಡೆಗೊಳಿಸಿತ್ತು. ಎರಡನೇ ತಲೆಮಾರಿನ ಮಾದರಿಯನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿ ಒಂದು ವರ್ಷದ ಬಳಿಕ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಬಿಎಸ್-6 ರೇಂಜ್ ರೋವರ್ ಇವೊಕ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ 2020ರ ರೇಂಜ್ ರೋವರ್ ಇವೊಕ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ.

ಈ ಎಸ್‍ಯುವಿಯು ಅಕರ್ಷಕವಾದ ಸೈಡ್ ಮತ್ತು ರೇರ್ ಪ್ರೊಫೈಲ್‍ಗಳನ್ನು ಮತ್ತು ಹೆಚ್ಚು ಐಷಾರಾಮಿ ಇಂಟಿರಿಯರ್ ಕ್ಯಾಬಿನ್‍ಗಳನ್ನು ಒಳಗೊಂಡಿದೆ. 2020ರ ಇವೋಕ್‍ನ ವಿನ್ಯಾಸವು ತನ್ನ ಕಂಪನಿಯ ಸರಣಿಯಲ್ಲಿರುವ ವೆಲಾರ್ ಎಸ್‍ಯುವಿಯ ಮಾದರಿಯಲ್ಲಿದೆ.

ಹೊಸ ಇವೊಕ್ ಕಾರಿನ ಮುಂಭಾಗದಲ್ಲಿರುವ ಹೆಡ್‍ಲ್ಯಾಂಪ್ ವೆಲಾರ್ ಎಸ್‍ಯುವಿಯಲ್ಲಿರುವ ಮಾದರಿಯಲ್ಲಿದೆ. ಇನ್ನೂ ಮುಂಭಾಗದ ಗ್ರಿಲ್, ಡೋರ್ ಹ್ಯಾಂಡಲ್‍ಗಳು ಮತ್ತು ಹಿಂಭಾಗದ ಟೇಲ್‍ಲೈಟ್ ಕೂಡ ಅದೇ ಮಾದರಿಯಲ್ಲಿದೆ. ಹೊಸ ಇವೊಕ್ ಎಸ್‍ಯುವಿಯಲ್ಲಿ ಹಳೆಯ ಮಾದರಿಯಲ್ಲಿರುವ ಅದೇ ಸಿಲೂಯೆಟ್‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯಲ್ಲಿದ್ದ ರೂಫ್‍ಲೈನ್ ಮತ್ತು ರೈಸಿಂಗ್ ಬೆಲ್ಟ್‌ಲೈನ್ ಅನ್ನು ಹೊಂದಿದೆ.

ಹೊಸ ರೇಂಜ್ ರೋವರ್ ಇವೊಕ್‍ನ ಇಂಟಿರಿಯರ್‍ನಲ್ಲಿ ಮೊದಲ ತಲೆಮಾರಿನ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇಂಟಿರಿಯರ್‍ನಲ್ಲಿ ಹೊಸ ಫೀಚರ್ಸ್‍ಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಹೊಂದಿದೆ.

ಹೊಸ ಇವೊಕ್ ಎಸ್‍ಯುವಿನ ಇಂಟಿರಿಯರ್ ಪ್ರೀಮಿಯಂ ಲೆದರ್ ಕ್ಯಾಬಿನ್ ಅನ್ನು ಹೊಂದಿದೆ. ಹೊಸ ಎಸ್‍ಯುವಿಯಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ.

ಹೊಸ ಇವೊಕ್ ಎಸ್‍ಯುವಿನಲ್ಲಿ ಸ್ಟೀಯರಿಂಗ್ ವ್ಹೀಲ್, ಪಿಸ್ತೂಲ್-ಗ್ರಿಪ್ ಲಿವರ್, ಎಲೆಕ್ಟ್ರಿನಿಕ್ ಮಾದರಿಯಲ್ಲಿ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ಪನೋರಾಮಿಕ್ ಸನ್‍ರೂಫ್ ಜೊತೆಯಲ್ಲಿ ಇತರ ಪ್ರಮುಖ ಫೀಚರ್ಸ್‍ಗಳಿವೆ.

ಬಿಎಸ್-6 ರೇಂಜ್ ರೋವರ್ ಇವೊಕ್ ಎಸ್‍ಯುವಿಯಲ್ಲಿ ಎರಡು ರೀತಿಯ ಎಂಜಿನ್‍ಗಳಲ್ಲಿ ಲಭ್ಯವಿದೆ. ಇದರಲ್ಲಿ 2.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ 48 ವೋಲ್ಡ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಜಿನ್ 184 ಬಿಹೆಚ್‍ಪಿ ಪವರ್ ಮತ್ತು 365 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನೂ 2.0 ಲೀಟರ್ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 430 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಮಾದರಿಗಳು ಡೆಲಿವರಿಯನ್ನು ಪ್ರಾರಂಭಿಸಿದೆ. ಆದರೆ ಪೆಟ್ರೋಲ್ ಮಾದರಿಯ ಡೆಲಿವರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.

2020ರ ರೇಂಜ್ ರೋವರ್ ಇವೊಕ್ ತನ್ನ ಕಂಪನಿಯ ಸರಣಿಯ ವೆಲಾರ್ ಎಸ್‍ಯುವಿ ಮಾದರಿಯ ವಿನ್ಯಾಸದ ಸಾಕಷ್ಟು ಅಂಶಗಳನ್ನು ಹೊಂದಿದೆ. 2020ರ ರೇಂಜ್ ರೋವರ್ ಇವೊಕ್ ಎಸ್‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜೆಎಲ್‍ಸಿ, ವೋಲ್ವೋ ಎಕ್ಸ್‌ಸಿ 60, ಬಿಎಂಡಬ್ಲ್ಯು ಎಕ್ಸ್ 3 ಮತ್ತು ಆಡಿ 5 ಕ್ಯೂ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








