2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಹೊಸ ಎಮಿಷನ್ ಜಾರಿ ನಂತರ ಬಿಎಸ್-6 ರ‍್ಯಾಪಿಡ್ ಸೆಡಾನ್ ಮಾದರಿಯ ಎಂಜಿನ್ ಆಯ್ಕೆಯಲ್ಲಿ ಹೊಸ ಬದಲಾವಣೆ ತಂದಿರುವ ಸ್ಕೋಡಾ ಕಂಪನಿಯು 2021ಕ್ಕೆ ನ್ಯೂ ಜನರೇಷನ್ ಬಿಡುಗಡೆ ಮಾಡಬಹುದೆಂಬ ನೀರಿಕ್ಷೆಯಿತ್ತು. ಆದರೆ ನ್ಯೂ ಜನರೇಷನ್ ರ‍್ಯಾಪಿಡ್ ಬಿಡುಗಡೆ ಕುರಿತು ಸ್ಪಷ್ಟಪಡಿಸಿರುವ ಸ್ಕೋಡಾ ಕಂಪನಿಯು ಹೊಸ ಮಾಹಿತಿಯೊಂದನ್ನು ಹಂಚಿಕೊಂಡಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಭಾರತದಲ್ಲಿ ರ‍್ಯಾಪಿಡ್ ಸೆಡಾನ್ ಮಾದರಿಯನ್ನು ಈ ಹಿಂದೆ 2011ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಇದುವರೆಗೂ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಕಾಲ ಕಾಲಕ್ಕೆ ಕಾರಿನ ತಾಂತ್ರಿಕ ಅಂಶಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದರೂ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಹೊಸ ತಲೆಮಾರಿನ ರ‍್ಯಾಪಿಡ್ ಮಾದರಿಯು 2021ರಲ್ಲಿ ಬಿಡುಗಡೆಯಾಗಲಿದೆ ಎನ್ನುವ ಗ್ರಾಹಕರ ನೀರಿಕ್ಷೆಗೆ ಸ್ಕೋಡಾ ಕಂಪನಿಯು ನಿರಾಶೆ ಉಂಟುಮಾಡದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ರ‍್ಯಾಪಿಡ್ ನ್ಯೂ ಜನರೇಷನ್ ಬಿಡುಗಡೆಯ ಕುರಿತಂತೆ ಗ್ರಾಹಕರ ಪ್ರಶ್ನೆಗೆ ಉತ್ತರಿಸಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥ ಜಾಕ್ ಹೊಲಿಸ್ ಅವರು ರ‍್ಯಾಪಿಡ್ ನ್ಯೂ ಜನರೇಷನ್ ಬದಲಾಗಿ ಮತ್ತೊಂದು ಹೊಸ ಸೆಡಾನ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಹಾಗೆಯೇ ಹೊಸ ಕಾರನ್ನು ಫೋಕ್ಸ್‌ವ್ಯಾಗನ್ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಸಿದ್ದಪಡಿಸಲಾದ ಎಂಕ್ಯೂಬಿ ಪ್ಲ್ಯಾಟ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಿಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಮಾರಾಟ ಮಾಡಲಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಹೊಸ ಸೆಡಾನ್ ಕಾರಿನಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರಲಿದೆಯಾ ಎನ್ನುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಜಾಕ್ ಹೊಲಿಸ್ ಅವರು, ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಎಂಕ್ಯೂಬಿ ಪ್ಲ್ಯಾಟ್‌ಫಾರ್ಮ್ ನಿರ್ಮಾಣವಾಗುತ್ತಿರುವ ಹೊಸ ಸೆಡಾನ್ ಕಾರು ಮಾದರಿಯು 2021ರ ಕೊನೆಯಲ್ಲಿ ಬಿಡುಗಡೆಯಾಗುವುದಾಗಿ ಮಾಹಿತಿ ನೀಡಲಾಗಿದ್ದು, ಹೊಸ ಕಾರು ಮಾದರಿ ಬಿಡುಗಡೆಯ ತನಕ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-6 ರ‍್ಯಾಪಿಡ್ ಖರೀದಿಗೆ ಲಭ್ಯವಿರಲಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಸ್ಕೋಡಾ ಇಂಡಿಯಾ ಕಂಪನಿಯು ಬಿಎಸ್-6 ರ‍್ಯಾಪಿಡ್ ಸೆಡಾನ್ ಮಾದರಿಯೊಂದಿಗೆ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆಯ ನಂತರ ಮತ್ತಷ್ಟು ಬೇಡಿಕೆ ಹೆಚ್ಚಳವಾಗಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ರ‍್ಯಾಪಿಡ್ ಬಿಎಸ್-6 ಮಾದರಿಯನ್ನು ಸದ್ಯ ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳೊಂದಿಗೆ ಮಾರಾಟಗೊಳಿಸುತ್ತಿರುವ ಸ್ಕೋಡಾ ಕಂಪನಿಯು ಗ್ರಾಹಕರ ಬೇಡಿಕೆ ಆಧಾರ ಮೇಲೆ ಬೆಸ್ ವೆರಿಯೆಂಟ್ ರೈಡರ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಸೆಡಾನ್ ಕಾರು ಮಾದರಿಯಲ್ಲೇ ರ‍್ಯಾಪಿಡ್ ಕಾರು ಮಾದರಿಯನ್ನು ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳಿಸುವ ಸಂಬಂಧ ರೈಡರ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಸ್ಕೋಡಾ ಕಂಪನಿಯು ಬೆಸ್ ಮಾದರಿಯನ್ನು ಸ್ಥಗಿತಗೊಳಿಸಿದ್ದು, ಸ್ಟಾಕ್ ಮುಕ್ತಾಯದ ತನಕ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಇನ್ನುಳಿದಂತೆ ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳ ಮಾರಾಟವು ಎಂದಿನಂತೆ ಮುಂದುವರಿಯಲಿದ್ದು, ಪ್ರತಿ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳ ಆಯ್ಕೆ ಲಭ್ಯವಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ರೈಡರ್ ಮಾದರಿಯ ಸ್ಥಗಿತ ನಂತರ ರ‍್ಯಾಪಿಡ್ ಕಾರಿನ ಬೆಲೆಯು ಆರಂಭಿಕವಾಗಿ ರೂ.7.49 ಲಕ್ಷದಿಂದ ರೂ. 7.99 ಲಕ್ಷಕ್ಕೆ(ಎಕ್ಸ್‌ಶೋರೂಂ ಪ್ರಕಾರ) ಏರಿಕೆಯಾಗಿದ್ದು, ಟಾಪ್ ಎಂಡ್ ಮಾಂಟೆ ಕಾರ್ಲೋ ಆಟೋಮ್ಯಾಟಿಕ್ ಆವೃತ್ತಿಯು ರೂ. 13.29 ಲಕ್ಷ ಬೆಲೆ ಹೊಂದಿದೆ. ಆಟೋಮ್ಯಾಟಿಕ್ ಆವೃತ್ತಿಯು ಸದ್ಯ ಸೆಡಾನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದೆ.

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

ಬಿಎಸ್-6 ನಿಯಮದಿಂದಾಗಿ ರ‍್ಯಾಪಿಡ್ ಕಾರಿನಲ್ಲಿ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2021ರಿಂದ ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲಿದೆ ಸ್ಕೋಡಾ ಇಂಡಿಯಾ

1.0-ಲೀಟರ್(999 ಸಿಸಿ) ಟಿಎಸ್ಐ ಟರ್ಬೋ ಪೆಟ್ರೋಲ್ ಮಾದರಿಯು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಆಕರ್ಷಕ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು ಗರಿಷ್ಠ 18.97ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಆಟೋಮ್ಯಾಟಿಕ್ ಮಾದರಿಯು 16.24 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
New Gen Skoda Rapid Not Coming To India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X