Just In
Don't Miss!
- Movies
ಸೆಟ್ ಮುಂದೆಯೇ ಅಪಘಾತದಲ್ಲಿ ಮೃತನಾದ ಬಿಗ್ಬಾಸ್ ವ್ಯವಸ್ಥಾಪಕ
- News
ಸತ್ಯ ಹೇಳುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ; ಮುಫ್ತಿ
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೋಂಡಾ ಸಿಟಿ ಆರ್ಎಸ್ ಹೈಬ್ರಿಡ್ ಆವೃತ್ತಿಯ ಮಾಹಿತಿ ಬಹಿರಂಗ
ಹೋಂಡಾ ಕಂಪನಿಯು ಹೊಸ ಸಿಟಿ ಆರ್ಎಸ್ ಹೈಬ್ರಿಡ್ ಆವೃತ್ತಿಯನ್ನು ಇತ್ತೀಚೀಗೆ ಮಲೇಷ್ಯಾದಲ್ಲಿ ಅನಾವರಣಗೊಳಿಸಿತ್ತು. 7ನೇ ತಲೆಮಾರಿನ ಹೋಂಡಾ ಸಿಟಿಯ ಆರ್‍ಎಸ್ ರೂಪಾಂತರವು ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಹೋಂಡಾ ಜಾಝ್ ಹೈಬ್ರಿಡ್ ಆವೃತ್ತಿಯಲ್ಲಿರುವತಹ ಐ-ಎಂಎಂಡಿ ಹೈಬ್ರಿಡ್ ಸಿಸ್ಟಂ ಅನ್ನು ಹೋಂಡಾ ಸಿಟಿ ಹೊಂದಿರುತ್ತದೆ. ಹೊಸ ಹೋಂಡಾ ಸಿಟಿ 1.5 ಲೀಟರ್, ನಾಲ್ಕು ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 98 ಹೆಚ್‌ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಹೊಸ ಸಿಟಿ ಕಾರಿನ ಬಾನೆಟ್ ಅಡಿಯಲ್ಲಿ ಇರುತ್ತದೆ.

ಪೆಟ್ರೋಲ್ ಎಂಜಿನ್‌ನಲ್ಲಿ ಸಂಯೋಜಿಸಲ್ಪಟ್ಟ ಮೊದಲ ಎಲೆಕ್ಟ್ರಿಕ್ ಮೋಟರ್, ಇಂಟಿಗ್ರೇಟೆಡ್ ಸ್ಟಾರ್ಟರ್-ಜನರೇಟರ್ (ಐಎಸ್‌ಜಿ) ಆಗಿ ಕಾರ್ಯನಿರ್ವಹಿಸುತ್ತದೆ, ಆದರೆ ಎರಡನೇ ಎಲೆಕ್ಟ್ರಿಕ್ ಮೋಟರ್ ಚಕ್ರಗಳಿಗೆ ಡ್ರೈವ್ ಕಳುಹಿಸುತ್ತದೆ. ಈ ಎಲೆಕ್ಟ್ರಿಕ್ ಮೋಟಾರ್ 106 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಹೊಸ ಹೋಂಡಾ ಸಿಟಿಯ ಹೈಬ್ರಿಡ್ ಸೆಟಪ್ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿರುವ ಸಾಧ್ಯತೆಗಳಿದೆ. ಈ ಹೊಸ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಮಲೇಷ್ಯಾದ ಹೋಂಡಾ ಸಿಟಿ ಇ:ಹೆಚ್ಇವಿ ಎಂದು ಕರೆಯುವ ಹೈಬ್ರಿಡ್ ಆವೃತ್ತಿಯು ಸಿಟಿ ಆರ್ಎಸ್ ಮಾದರಿಯಂತೆ ಕಾಣುತ್ತದೆ. ಇದು ಈಗಾಗಲೇ ಕೆಲವು ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ, ಹೊಸ ಹೈಬ್ರಿಡ್ ಆವೃತ್ತಿಯು ಇ:ಹೆಚ್ಇವಿ ಬ್ರ್ಯಾಡ್ಜ್ ನೊಂದಿಗೆ ಬೂಟ್ ನಲ್ಲಿ ಸ್ಟ್ಯಾಂಡರ್ಡ್ ಸಿಟಿ ಆರ್ಎಸ್ ಮಾದರಿಯಂತೆ ಬ್ಲ್ಯಾಕ್ ಥೀ ಅನ್ನು ಹೊಂದಿರುತ್ತದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ 2018ರ ಅಕ್ಟೋಬರ್‌ನಲ್ಲಿ ಹೋಂಡಾ ಕಂಪನಿಯು ಹೈಬ್ರಿಡ್ ಆವೃತ್ತಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಇನ್ನು ಹೊಸ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್ ಹೈಬ್ರಿಡ್ ಆವೃತ್ತಿಗೆ ಪೈಪೋಟಿಯನ್ನು ನೀಡಬಹುದು

ಗ್ಯಾಸೋಲಿನ್ ಎಂಜಿನ್ ನಿಂದ ಹೆಚ್ಚಿನ ವೇಗದಲ್ಲಿ ಈ ಕಾರು ಚಲಿಸುತ್ತದೆ. 2,500 ಸಿಸಿ ಎಂಜಿನ್ ಹೊಂದಿರುವ ಮಧ್ಯಮ ಗಾತ್ರದ ಸೆಡಾನ್ ಟೊಯೋಟಾ ಕ್ಯಾಮ್ರಿಗಿಂತ ಸಿಟಿ ಆರ್ಎಸ್ ಹೈಬ್ರಿಡ್ ಹೆಚ್ಚು ಟಾರ್ಕ್ ಹೊಂದಿದೆ ಎಂದು ಹೋಂಡಾ ಮಲೇಷ್ಯಾ ಹೇಳಿಕೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೋಂಡಾ ಸಿಟಿ ಆರ್ಎಸ್ ಹೈಬ್ರಿಡ್ ಕೇವಲ 9.9 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಸಾಧಿಸುತ್ತದೆ ಎಂದು ಹೇಳಲಾಗಿದೆ. ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಹೊಸ ಹೋಂಡಾ ಸಿಟಿ ಐ-ಎಂಎಂಡಿ 26.5 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ.

ಹೊಸ ಸಿಟಿ ಆರ್ಎಸ್ ಹೈಬ್ರಿಡ್ ಆವೃತ್ತಿಯಲ್ಲಿ ಸೆಡಾನ್ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಹೊಂದಿರುತ್ತದೆ. ಇನ್ನು ಈ ಸೆಡಾನ್ ನಲ್ಲಿ 16 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಹೊಸ ಸಿಟಿ ಹೈಬ್ರಿಡ್ ಆವೃತ್ತಿಯು 4,553 ಎಂಎಂ ಉದ್ದ, 1,748 ಎಂಎಂ ಅಗಲ ಮತ್ತು 1,467 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಆರ್ಎಸ್ ಹೈಬ್ರಿಡ್ ಆವೃತ್ತಿಯು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಹೈಬ್ರಿಡ್ ಆವೃತ್ತಿಯು 409-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಹೋಂಡಾ ಕಂಪನಿಯು ಹೊಸ ಸಿಟಿ ಹೈಬ್ರಿಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲಿ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಬಹುದು.