ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಕಿಯಾ ಮೋಟಾರ್ಸ್ ಕಂಪನಿಯು ತನ್ನ 2020ರ ಕಿಯಾ ಸ್ಟಿಂಗರ್ ಫಾಸ್ಟ್‌ಬ್ಯಾಕ್ ಸ್ಪೋರ್ಟ್ಸ್ ಸೆಡಾನ್ ಚಿತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಕಿಯಾ ಸ್ಟಿಂಗರ್ ಕಾರು ಕಾಸ್ಮೆಟಿಕ್ ಅಪ್ಡೇಟ್ ಗಳೊಂದಿಗೆ ಶೀಘ್ರದಲ್ಲೇ ಅಂತರರಾಷ್ಟ್ರೀಯ ಬಿಡುಗಡೆಯಾಗಲಿದೆ.

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಈ ಹೊಸ ಕಿಯಾ ಸ್ಟಿಂಗರ್ ಕಾರು ಕಾಸ್ಮೆಟಿಕ್ ಸೇರಿದಂತೆ ಹಲವಾರು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಲಿದೆ. ಈ ಹೊಸ ಕಿಯಾ ಸ್ಟಿಂಗರ್ ಫಾಸ್ಟ್‌ಬ್ಯಾಕ್ ಸ್ಪೋರ್ಟ್ಸ್ ಸೆಡಾನ್ ನಲ್ಲಿ ಏರ್‌ಡ್ಯಾಮ್‌ಗಾಗಿ ಮೆಶ್ ಪ್ಯಾಟರ್ನ್ ಗ್ರಿಲ್ ಅನ್ನು ಒಳಗೊಂಡಿರುವ ಹೊಸ ಫ್ರಂಟ್ ಬಂಪರ್ ಮತ್ತು ಪ್ರತಿ ಬದಿಯಲ್ಲಿ ಮರುವಿನ್ಯಾಸಗೊಳಿಸಲಾದ ಇಂಟೆಕ್‌ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಟೈಗರ್ ನೋಸ್ ಗ್ರಿಲ್ ಅನ್ನು ಕೂಡ ಆಕರ್ಷಕವನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

2020ರ ಕಿಯಾ ಸ್ಟಿಂಗರ್ ಮಾದರಿಯನ್ನು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ನವೀಕರಿಸಲಾಗಿದೆ. ಈ ಹೊಸ ಕಾರಿನಲ್ಲಿ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್ ಅನ್ನು 18-ಇಂಚಿನ ಮತ್ತು 19-ಇಂಚಿನ ಆಯ್ಕೆಗಳಲ್ಲಿ ನೀಡಲಾಗುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಈ ಕಿಯಾ ಸ್ಟಿಂಗರ್ ಕಾರಿನ ಹಿಂಭಾಗವು ಹೆಚ್ಚು ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಹೊಸ ಟೈಲ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಈ ಹೊಸ ಕಾರಿನಲ್ಲಿ 'ಸ್ಟಿಂಗರ್' ಬ್ಯಾಡ್ಜ್ ಜೊತೆಗೆ ಹೊಸ ದೊಡ್ಡ ಡಿಫ್ಯೂಸರ್ ಮತ್ತು ಹೊಸ ವೈಡ್-ಬೋರ್ ಸಿಲ್ವರ್ ಎಕ್ಸಾಸ್ಟ್ ಮಫ್ಲರ್‌ಗಳನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಕ್ಯಾಬಿನ್‌ನ ಮೂಲ ವಿನ್ಯಾಸವು ಬದಲಾಗದೆ ಇದ್ದರೂ, ಕಿಯಾ ಈಗ ಅದನ್ನು ಪ್ರೀಮಿಯಂ ಗುಣಮಟ್ಟದ ವಸ್ತುಗಳು ಮತ್ತು ಹೊಸ ಟ್ರಿಮ್ ಆಯ್ಕೆಗಳನ್ನು ಹೆಚ್ಚಿಸಿದೆ. ಈ ಕಾರಿನ ಹೊಸ 'ಡಾರ್ಕ್ ಬ್ರೌನ್' ಮೊನೊಟೋನ್ ಒಳಾಂಗಣದ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಿಗಾಗಿ ಸಾಫ್ಟ್-ಟಚ್ ನಪ್ಪಾ ಲೆದರ್ ಅನ್ನು ಬಳಸಲಾಗಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಇನ್ನು ಆಕರ್ಷಕ ಮತ್ತು ಹೆಚ್ಚು ಕಂಫರ್ಟ್ ಹೊಂದಿರುವ ಸೀಟುಗಳು ಮತ್ತು ಸೆಂಟ್ರಲ್ ಆರ್ಮ್‌ಸ್ಟ್ರೆಸ್ಟ್ ಎಲ್ಲವೂ ಕಾಂಟ್ರಾಸ್ಟ್ ವೈಟ್ ಸ್ಟಿಚಿಂಗ್ ಅನ್ನು ಒಳಗೊಂಡಿರುತ್ತದೆ. ಇನ್ನು ವೃತ್ತಾಕಾರದ ಏರ್-ಕಾನ್ ವೆಂಟ್ಸ್ ವಿನ್ಯಾಸವು ಕ್ಯಾಬಿನ್‌ಗೆ ಬಹಳ ಮರ್ಸಿಡಿಸ್-ಬೆಂಝ್-ಲೈನ್ ವೈಬ್ ಅನ್ನು ನೀಡುತ್ತದೆ.

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಈ ಹೊಸ ಕಾರಿನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ನ್ಯಾವಿಗೇಷನ್ ಸಿಸ್ಟಂ ಅನ್ನು ಸಹ ಹೊಂದಿದೆ, ಜೊತೆಗೆ 7.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಹೊಸ ಮೆಟಾಲಿಕ್ ಫಿನಿಶ್ ಹೊಂದಿರುವ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಕ್ಯಾಬಿನ್ 64 ಬಣ್ಣಗಳೊಂದಿಗೆ ಹೊಸ ಮೂಡ್ ಲೈಟಿಂಗ್ ಸಿಸ್ಟಂ ಸಹ ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಈ ಹೊಸ ಕಿಯಾ ಸ್ಟಿಂಗರ್ ಫಾಸ್ಟ್‌ಬ್ಯಾಕ್ ಸ್ಪೋರ್ಟ್ಸ್ ಸೆಡಾನ್ ಎಂಜಿನ್ ವಿವರಗಳು ಇನ್ನು ಬಹಿರಂಗಪಡಿಸಲಾಗಿಲ್ಲ. ಕಿಯಾ ತನ್ನ ಹೊಸ ಎಂಜಿನ್ ಲೈನ್-ಅಪ್ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಂತೆ ನವೀಕರಿಸಿದ ಸ್ಟಿಂಗರ್ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಕಿಯಾ ಸ್ಟಿಂಗರ್

ಹೊಸ ಸ್ಟಿಂಗರ್ ಕಾರು ಶೀಘ್ರದಲ್ಲೇ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಲಿದೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಕಿಯಾ ಸ್ಟಿಂಗರ್ ಫಾಸ್ಟ್‌ಬ್ಯಾಕ್ ಸ್ಪೋರ್ಟ್ಸ್ ಸೆಡಾನ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ.

Most Read Articles

Kannada
English summary
Updated 2020 Kia Stinger Revealed In South Korea. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X