ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿಯನ್ನು ಥೈಲ್ಯಾಂಡ್‌ನಲ್ಲಿ ಅನಾವರಣಗೊಳಿಸಿದೆ. ಟೊಯೊಟಾ ಕಂಪನಿಯ ಎಸ್‍ಯುವಿಗಳ ಸರಣಿಯಲ್ಲಿ ಫಾರ್ಚೂನರ್ ಜನಪ್ರಿಯ ಮಾದರಿಯಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಎಸ್‍ಯುವಿಯಾಗಿದೆ. ಹೊಸ ಫಾರ್ಚೂನರ್ ಫೇಸ್‌ಲಿಫ್ಟ್‌ ಮುಂಭಾಗ ಹೊಸ ವಿನ್ಯಾಸವನ್ನು ಹೊಂದಿದೆ. ಡೇ ಟೈಮ್ ರನ್ನಿಂಗ್ ಲೈಟ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಹೆಡ್‌ಲೈಟ್, ಮೆಶ್ ಮಾದರಿಯ ದೊಡ್ಡದಾದ ಗ್ರಿಲ್, ಮರುರೂಪಿಸಿದ ಮುಂಭಾಗದ ಬಂಪರ್ ಮತ್ತು 18 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಹೊಸ ಎಸ್‍ಯುವಿಯ ಹಿಂಭಾಗದಲ್ಲಿ ಸ್ಲಿಮ್ಮರ್-ಕಾಣುವ ಎಲ್ಇಡಿ ಟೈಲ್-ಲೈಟ್ ಗಳನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಸ್ಪೋರ್ಟಿಯರ್ ಟಾಪ್-ಸ್ಪೆಕ್ ‘ಲೆಜೆಂಡರ್' ಮಾದರಿಯೂ ಇದೆ. ಇದು ಸ್ಪ್ಲಿಟ್ ಗ್ರಿಲ್‌ನಲ್ಲಿ ಪ್ಯಾಕ್, ಎಲ್ಇಡಿ ಟರ್ನ್ ಇಂಡೀಕೆಟರ್ ಒಳಗೊಂಡಿರುವ ವಿಭಿನ್ನವಾದ ಬಂಪರ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಇದರೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳಿಗೆ ವಿಶಿಷ್ಟ ಮಾದರಿಯನ್ನು ಹೊಂದಿರುವ ಡ್ಯುಯಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಕ್ರೋಮ್ ಅಪ್ ಫ್ರಂಟ್ ಅನ್ನು ಬದಲಿಸುವ ಗ್ಲೋಸ್ ಬ್ಲ್ಯಾಕ್ ಫಿನಿಶ್, 20 ಇಂಚಿನ ಅಲಾಯ್ ವ್ಹೀಲ್ಸ್, ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಮತ್ತು ಹಿಂದಿನ ಬಂಪರ್ ಬೂಟ್ ಲೀಡ್ ನಲ್ಲಿ ಸಂಯೋಜಿಸಲ್ಪಟ್ಟಿವೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಫಾರ್ಚೂನರ್ ಫೇಸ್‌ಲಿಫ್ಟ್‌ ಫೀಚರ್‌ಗಳು

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಇಂಟಿರಿಯರ್ ಬಗ್ಗೆ ಹೇಳುದಾದರೆ, ಹಿಂದಿನ ಮಾದರಿಯ ವಿನ್ಯಾಸವನ್ನು ಬದಲಾಯಿಸಲಾಗಿದೆ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಪಲ್ ಕಾರ್ ಪ್ಲೇ ಹೊಂದಾಣಿಕೆಯೊಂದಿಗೆ ಬರುವ ದೊಡ್ಡದಾದ, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಸದಾಗಿ ಅಳವಡಿಸಲಾಗಿದೆ. ಇದರೊಂದಿಗೆ ಸ್ವಲ್ಪ ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8-ವೇ ಪವರ್-ಹೊಂದಾಣಿಕೆ ಮಾಡುವ ಡ್ರೈವರ್ ಸೀಟ್, ಸಹ-ಚಾಲಕರ ಸೀಟುಗಳು ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಹ ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು 360 ಡಿಗ್ರಿ ಕ್ಯಾಮೆರಾ. ಲೆಜೆಂಡರ್ ರೂಪಾಂತರವು ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲ್ಕೇ ಮತ್ತು 7 ಏರ್‌ಬ್ಯಾಗ್‌ಗಳು ಮತ್ತು ಸಾಮಾನ್ಯ ಸುರಕ್ಷತಾ ಫೀಚರ್‌ಗಳ ಜೊತೆಗೆ 'ಟೊಯೋಟಾ ಸೇಫ್ಟಿ ಸೆನ್ಸ್' ಅನ್ನು ಸಹ ಹೊಂದಿದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಇದು ಲೇನ್ ಡಿಪರ್ಚರ್ ಅಲರ್ಟ್ ಮತ್ತು ರೇಡಾರ್-ಗೈಡೆಡ್ ಡೈನಾಮಿಕ್ ಕ್ರೂಸ್ ಕಂಟ್ರೋಲ್, ಟೊಯೋಟಾ ಫೇಸ್‌ಲಿಫ್ಟೆಡ್ ಫಾರ್ಚೂನರ್ 'ವೇರಿಯಬಲ್ ಫ್ಲೋ ಕಂಟ್ರೋಲ್' ಅನ್ನು ಸಹ ನೀಡಿದೆ. ಇದು ಎಸ್‌ಯುವಿ ಮಾಡುತ್ತಿರುವ ವೇಗವನ್ನು ಅವಲಂಬಿಸಿ ಸ್ಟೀರಿಂಗ್ ತೂಕವನ್ನು ಬದಲಿಸುತ್ತದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ 2.4-ಲೀಟರ್, ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಮುಂದುವರೆಸಿದೆ. ಈ ಎಂಜಿನ್ 150 ಎಚ್‌ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಭಾರತದಲ್ಲಿ 2.8-ಲೀಟರ್ ಡೀಸೆಲ್ ಎಂಜಿನ್ ಏಕೈಕ ಡೀಸೆಲ್ ಎಂಜಿನ್ ಆಯ್ಕೆಯಾಗಿದೆ .ಈ ಎಂಜಿನ್ ಅಪ್‌ಗ್ರೇಡ್ ಮಾಡಲಾಗಿದ್ದು, ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ನೀಡುತ್ತದೆ.

ಅನಾವರಣವಾಯ್ತು ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ನಲ್ಲಿ 2.7-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮುಂದುವರೆಸಬಹುದು. ಟೊಯೊಟಾ ಕಂಪನಿಯು ಈ ಫಾರ್ಚೂನರ್ ಫೇಸ್‌ಲಿಫ್ಟ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

Article Published On: Thursday, June 4, 2020, 11:51 [IST]
English summary
2021 Toyota Fortuner facelift revealed. Read In Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+